PHOTOS | 1983ರ ವಿಶ್ವಕಪ್​​​​​​ ರಿಯಲ್ ಸ್ಟಾರ್​ಗಳೊಂದಿಗೆ ಸಂಭ್ರಮಿಸಿದ ಬಾಲಿವುಡ್​​​​ ಎನರ್ಜಿಟಿಕ್​​​​​ ಸ್ಟಾರ್

ದೆಹಲಿ: 12ನೇ ಆವೃತ್ತಿಯ ವಿಶ್ವಕಪ್​​​​ ಇಂಗ್ಲೆಂಡ್​ನಲ್ಲಿ ನಡೆಯುತ್ತಿದ್ದರೆ, ಮತ್ತೊಂದೆಡೆ ರಣವೀರ್​​ ಸಿಂಗ್​​ ಅಭಿನಯದ 1983ರ ವಿಶ್ವಕಪ್​ ಆಧಾರಿತ ’83’ ಚಿತ್ರ ಶೂಟಿಂಗ್​ನಲ್ಲಿ ಸಿನಿ ತಂಡ ನಿರತವಾಗಿದೆ. ರೀಲು ಹಾಗೂ ರಿಯಲ್​ ವಿಶ್ವಕಪ್​ ಕ್ಷಣಗಳು ಪ್ರತಿದಿನ ಅಭಿಮಾನಿಗಳ ಕುತೂಹಲ ತಣಿಸುತ್ತಿವೆ.

ಕಬೀರ್​ಖಾನ್ ನಿರ್ದೇಶನ 83 ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಈ ವೇಳೆ 1983 ವಿಶ್ವಕಪ್​​ನಲ್ಲಿ ಪ್ರದರ್ಶನ ತೋರಿದ್ದ ಆಟಗಾರರು ಸಿನಿಮಾ ಸೆಟ್​ಗೆ ಆಗಮಿಸಿ, ಚಿತ್ರೀಕರಣ ವೀಕ್ಷಿಸಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರೊಟ್ಟಿಗೆ ಕಾಲ ಕಳೆದ ಫೋಟೋಗಳನ್ನು ರಣವೀರ್​​ ಸಿಂಗ್​​​​​​​​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರ ಮುಂದಿನ ವರ್ಷ ಏಪ್ರಿಲ್​​​ 10ಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಕಪಿಲ್​​ ದೇವ್​ ಅವರ ಪತ್ನಿ ರೋಮಿ ದೇವ್​​​​​​ ಪಾತ್ರದಲ್ಲಿ ನಟಿಸುತ್ತಿದ್ದಾರೆ. (ಏಜೇನ್ಸೀಸ್​)

Leave a Reply

Your email address will not be published. Required fields are marked *