ದುಬೈನಲ್ಲಿ ರಮ್ಯಾ ಕಲ್ಯಾಣ: ಮಗಳ ಮದುವೆ ಬಗ್ಗೆ ರಂಜಿತಾರಿಂದ ಕೊನೆಗೂ ಹೊರಬಿತ್ತು ಸತ್ಯ! ಬ್ರೇಕ್‌ ಅಪ್‌ಗೆ ಕಾರಣ ಇಲ್ಲಿದೆ…

ನವದೆಹಲಿ: ಸ್ಯಾಂಡಲ್‌ವುಡ್‌ ಮೋಹಕ ತಾರೆ, ಮಂಡ್ಯ ಮಾಜಿ ಸಂಸದೆ ರಮ್ಯಾ ಕಳೆದ ಹಲವು ದಿನಗಳಿಂದಲೂ ಸಾರ್ವಜನಿಕ ಜೀವನದಿಂದ ಮರೆಯಾಗಿದ್ದಾರೆ. ಈ ಬೆನ್ನಲ್ಲೇ ಅವರು ತನ್ನ ದೀರ್ಘಕಾಲದ ಗೆಳೆಯ ರಫೆಲ್ ಜತೆ ದುಬೈನಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ್ದವು.

ಈ ಕುರಿತು ರಮ್ಯಾ ತಾಯಿ ರಂಜಿತಾ ಖಾಸಗಿ ವಾಹಿನಿಯೊಂದಿಗೆ ಮಾತನಾಡಿ, ರಮ್ಯಾ ಕುರಿತಾದ ಇಂಟರೆಸ್ಟಿಂಗ್‌ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ರಮ್ಯಾ ಮದುವೆಯಾಗುತ್ತಿದ್ದಾರೆ ಎನ್ನುವುದಕ್ಕೆ ಸಂಬಂಧಿಸಿದ ಎಲ್ಲ ವರದಿಗಳು ಸಂಪೂರ್ಣ ಸುಳ್ಳು. ರಮ್ಯಾಳ ಮದುವೆ ಮಾಡಬೇಕಾದರೆ ಕದ್ದುಮುಚ್ಚಿ ಮಾಡುವ ಅಗತ್ಯವಿಲ್ಲ. ಮದುವೆ ನಿಶ್ಚಯವಾದಾಗ ಎಲ್ಲರಿಗೂ ಹೇಳಿಯೇ ಮದುವೆ ಮಾಡುತ್ತೇವೆ. ಇವೆಲ್ಲ ಆಧಾರರಹಿತ ವರದಿಗಳು ಎಂದು ಹೇಳಿದ್ದಾರೆ.

ಮಗಳು ಗೆಳೆಯ ರಫೆಲ್‌ ಅವರೊಂದಿಗಿನ ಸಂಬಂಧ ಮುರಿದುಕೊಂಡಿರುವ ಬಗ್ಗೆ ಮಾತನಾಡಿರುವ ರಂಜಿತಾ, ರಮ್ಯಾ ಮತ್ತು ರಫೆಲ್‌ ಬೇರೆಬೇರೆಯಾಗಿದ್ದಾರೆ. ಆದರೆ, ಅವರು ಸೌಹಾರ್ದಯುತವಾಗಿ ಮುಂದುವರಿಯುತ್ತಾರೆ. ನಾವು ರಫೆಲ್ ಅವರ ಕುಟುಂಬದೊಂದಿಗೆ ಸ್ನೇಹಿತರಾಗಿದ್ದು, ಸಂಪರ್ಕದಲ್ಲಿದ್ದೇವೆ. ಆದರೆ, ರಮ್ಯಾ ಮತ್ತು ರಫೆಲ್‌ ಮದುವೆಯಾಗುತ್ತಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.

ರಮ್ಯಾಗೆ ರಾಜಕೀಯದಲ್ಲಿ ಗಮನ ಹರಿಸುವ ಆಸಕ್ತಿಯಿತ್ತು. ಆದರೆ, ರಫೆಲ್‌ ತನ್ನ ಬಿಸಿನೆಸ್‌ನಲ್ಲಿ ಬ್ಯುಸಿಯಾಗಿದ್ದರು. ಹೀಗಿರುವಾಗ ವಿರುದ್ಧ ವೃತ್ತಿ ಕ್ಷೇತ್ರಗಳಿಂದಾಗಿ ಪರಸ್ಪರ ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ರಮ್ಯಾಗೆ ಅವರ ದೇಶ ಪೋರ್ಚುಗಲ್‌ಗೆ ಹೋಗಲು ಇಷ್ಟವಿರಲಿಲ್ಲ. ರಫೆಲ್‌ಗೆ ಇಲ್ಲಿಗೆ ಬರಲು ಇಷ್ಟವಿರಲಿಲ್ಲ. ಹಾಗಾಗಿ ಇಬ್ಬರು ಒಪ್ಪಿಯೇ ತಮ್ಮ ಸಂಬಂಧವನ್ನು ಕೊನೆಗೊಳಿಸಿಕೊಂಡರು ಎಂದು ಹೇಳಿದ್ದಾರೆ.

One Reply to “ದುಬೈನಲ್ಲಿ ರಮ್ಯಾ ಕಲ್ಯಾಣ: ಮಗಳ ಮದುವೆ ಬಗ್ಗೆ ರಂಜಿತಾರಿಂದ ಕೊನೆಗೂ ಹೊರಬಿತ್ತು ಸತ್ಯ! ಬ್ರೇಕ್‌ ಅಪ್‌ಗೆ ಕಾರಣ ಇಲ್ಲಿದೆ…”

  1. ಅದು ಆಕೆಯ ಖಾಸಗಿ ವಿಷಯವಾದ್ದರಿಂದ ಯಾರೇ ಆಗಲೀ ಮೂಗು ತೂರಿಸುವುದು ತಪ್ಪು.

Leave a Reply

Your email address will not be published. Required fields are marked *