‘ಪದ್ಮಾವತಿ ರಮ್ಯಾ’ಗೆ ಫುಲ್​ ಕ್ಲಾಸ್​ ತೆಗೆದುಕೊಂಡ ಬಾಲಕಿ ಹಾರಿಕಾ ವಿಡಿಯೋ ವೈರಲ್​

ಬೆಂಗಳೂರು: ಮಾಜಿ ಸಂಸದೆ ರಮ್ಯಾ ಮೊನ್ನಯಷ್ಟೇ ಸರ್ದಾರ್​ ಪಟೇಲರ ವಿಶ್ವದ ಅತಿ ಎತ್ತರದ ಪ್ರತಿಮೆ ಲೋಕಾರ್ಪಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್​ ಮಾಡಿ ವಿವಾದ ಎಬ್ಬಿಸಿದ್ದರು.

ಮೋದಿ ಪಟೇಲರ ಪ್ರತಿಮೆಗೆ ನಮಸ್ಕರಿಸುತ್ತಿದ್ದ ಫೋಟೋವನ್ನು ಟ್ವಿಟರ್​ನಲ್ಲಿ ಹಾಕಿದ್ದ ರಮ್ಯಾ, ಹಕ್ಕಿಯ ಹಿಕ್ಕೆಯಂತೆ ಕಾಣಿಸುತ್ತಿಲ್ಲವೇ? ಎಂದು ವ್ಯಂಗ್ಯವಾಡಿದ್ದರು. ಈ ಟ್ವೀಟ್​ಗೆ ಪ್ರತ್ಯುತ್ತರವಾಗಿ, ಶಾಲಾ ಬಾಲಕಿಯೊಬ್ಬಳು ವಿಡಿಯೋ ಮಾಡುವ ಮೂಲಕ ರಮ್ಯಾಗೆ ತಿರುಗೇಟು ನೀಡಿದ್ದಾಳೆ.

ನಮಸ್ತೆ ರಮ್ಯಕ್ಕ… ನನ್ನ ಹೆಸರು ಹಾರಿಕಾ ಮಂಜುನಾಥ್​ ಎಂದು ಮಾತು ಆರಂಭಿಸಿರುವ ಬಾಲಕಿ, ಪ್ರಧಾನಿ ಮೋದಿ ಕಟ್ಟಿಸಿದ್ದು ಅವರ ತಂದೆ-ತಾಯಿ ಪ್ರತಿಮೆಯನ್ನಲ್ಲ. ಸ್ವತಃ ನಿಮ್ಮ ಕಾಂಗ್ರೆಸ್​ ಹಿರಿಯ ನಾಯಕರಾದಂಥ ಸರ್ದಾರ್​ ವಲ್ಲಭ ಬಾಯಿ ಪಟೇಲ್​ ಅವರ ಪ್ರತಿಮೆಯನ್ನು ನರೇಂದ್ರ ಮೋದಿ ಜಿ ಅವರು ಕಟ್ಟಿಸಿರುವುದು ಎಂದು ಹರಿಹಾಯ್ದಿದ್ದಾರೆ.

ಮುಂದುವರಿದು, ಇಷ್ಟು ಎತ್ತರವಾದ ಪ್ರತಿಮೆಗೆ ಈ ರೀತಿ ಕಾಮೆಂಟ್​ ಮಾಡಿರುವ ನೀವು, ಅದಕ್ಕಿಂತಲೂ ದೊಡ್ಡ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣಗೊಳ್ಳುತ್ತಿದೆಯಲ್ಲಾ ಇನ್ನು ಅದಕ್ಕೆ ನೀವು ಯಾವ ರೀತಿ ಕಾಮೆಂಟ್​ ಮಾಡ್ತೀರ ಎಂಬುದನ್ನು ನನಗೆ ಊಹಿಸುವುದಕ್ಕೂ ಆಗುತ್ತಿಲ್ಲ ಅಕ್ಕಾ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್)

ಪ್ರಧಾನಿಯನ್ನು ಹಕ್ಕಿಯ ಹಿಕ್ಕೆಗೆ ಹೋಲಿಸಿದ ರಮ್ಯಾ