ರಾಮನಗರ: ನಾನು ಹಾಸನದವನೇ ಇರಬಹುದು. ಆದರೆ ನನ್ನದು ಟೂರಿಂಗ್ ಟಾಕೀಸ್ ಅಲ್ಲ, ರಾಮನಗರವೇ ನನ್ನ ಪರ್ಮನೆಂಟ್ ಟಾಕೀಸ್ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಚನ್ನಪಟ್ಟಣ ಕ್ಷೇತ್ರದ ಸೋಗಾಲ ಮತ್ತು ಸುತ್ತಮುತ್ತಲ ಗ್ರಾಮದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಜತೆಗೆ ನಿಖಿಲ್ ಕುಮಾರಸ್ವಾಮಿ ಪರವಾಗಿ ಬುಧವಾರ ಮತಯಾಚಿಸಿ ಮಾತನಾಡಿದ ಅವರು, ನನ್ನದು ಪರ್ಮನೆಂಟ್ ಟಾಕೀಸ್ ರಾಮನಗರ, ಇಲ್ಲಿ ಬಿಟ್ಟು ನಾನೆಲ್ಲೂ ಹೋಗುವುದಿಲ್ಲ, ನನ್ನನ್ನು ಕಳಿಸಲು ಯಾರಿಂದಲೂ ಸಾಧ್ಯವಿಲ್ಲ. ಅಡ್ಡದಾರಿ ರಾಜಕಾರಣದಿಂದ ಒಮ್ಮೆ ಯಶಸ್ಸು ಆಗಿರಬಹುದು. ಪ್ರತಿ ಬಾರಿಯೂ ಅದು ನಡೆಯಲ್ಲ ಎಂದು ಎಚ್ಡಿಕೆ ಟಾಂಗ್ ಕೊಟ್ಟರು.
ಉತ್ತರ ಪ್ರದೇಶದ ಅಮೇಠಿಯಿಂದ ವೈನಾಡಿಗೆ ಓಡಿಬಂದ ರಾಹುಲ್ ಗಾಂಧಿ ಅವರದ್ದು ಯಾವ ಟಾಕೀಸ್? ಉತ್ತರ ಪ್ರದೇಶದಲ್ಲಿ ನಿಲ್ಲುವುದು ಬಿಟ್ಟು ಸಹೋದರ ತೆರವು ವಾಡಿದ ವೈನಾಡು ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿ ಏಕೆ ಬಂದರು? ಹಾಗಾದರೆ ಅವರದ್ದು ಯಾವ ಟಾಕೀಸ್? ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ, ಅದನ್ನು ಸರಿಯಾಡಿಕೊಳ್ಳುವುದು ಬಿಟ್ಟು, ಪಕ್ಕದವರ ತಟ್ಟೆ ನೋಡುವುದನ್ನು ಬಿಡಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಕುಟುಂಬದ ಬಗ್ಗೆ ವಾತನಾಡುವ ಕಾಂಗ್ರೆಸ್ ನಾಯಕರು, ನೆಹರು ಮತ್ತು ಗಾಂಧಿ ಕುಟುಂಬದ ಬಗ್ಗೆ ಏಕೆ ವಾತನಾಡುವುದಿಲ್ಲ? ಅಂತಹ ಧೈರ್ಯ ಏಕೆ ತೋರಿಸುವುದಿಲ್ಲ? ಅವರಿಗೊಂದು ಲೆಕ್ಕ, ನಮಗೊಂದು ಲೆಕ್ಕ ಇದೆಯಾ? ಎಂದು ಪ್ರಶ್ನಿಸಿದರು.
ನಮ್ಮ ಅಭ್ಯರ್ಥಿ ಹೈ ಜಾಕ್ : ಕಾಂಗ್ರೆಸ್‌ಗೆ ಅಭ್ಯರ್ಥಿಯೇ ಇರಲಿಲ್ಲ. ನಮ್ಮ ಅಭ್ಯರ್ಥಿಯನ್ನು ಹೈಜಾಕ್ ವಾಡಿಕೊಂಡು ಹೋದರು. ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಿಗಿದು ಅಭ್ಯರ್ಥಿ ಆಗಿರುವ ವ್ಯಕ್ತಿಗೆ ರಾಜಕೀಯ ಜೀವದಾನ ವಾಡಿದ್ದು ಯಡಿಯೂರಪ್ಪ ಅವರು. ಆದರೆ, ಕೊನೆಗೆ ಅವರಿಗೆ ಚಿತ್ರಹಿಂಸೆ ಕೊಟ್ಟರು. ನಂಬಿಕೆಗೆ, ವಿಶ್ವಾಸಾರ್ಹತೆಗೆ ಅರ್ಹನಲ್ಲದ ಆ ವ್ಯಕ್ತಿಯನ್ನು ನಂಬಿ ಜನರು ಮೋಸ ಹೋಗಬಾರದು ಎಂದು ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿದರು.
ನಾನು ಹದಿನೇಳು ಕೆರೆಗಳನ್ನು ತುಂಬಿಸಿದೆ ಎಂದು ಊರ ತುಂಬಾ ನಾನೇ ಭಗೀರಥ ಎಂದು ಫ್ಲೆಕ್ಸ್ ಹಾಕಿಕೊಂಡರು. ನಾನೂ ತಾಲೂಕಿನ 107 ಕೆರೆ ತುಂಬಿಸಿದೆ. ಹಾಗಾದರೆ, ನಾನು ಏನೆಂದು ಕರೆದುಕೊಳ್ಳಬೇಕು? ದೇವೇಗೌಡರು ಇಗ್ಗಲೂರು ಜಲಾಶಯ ಕಟ್ಟಿಸಿದರು. ಅವರು ಆ ಜಲಾಶಯ ಕಟ್ಟಿಸದೆ ಇದ್ದಿದ್ದರೆ ಅವರು ಹದಿನೇಳು ಕೆರೆ, ನಾನು 107 ಕೆರೆ ತುಂಬಿಸಲು ಎಲ್ಲಿ ಆಗುತ್ತಿತ್ತು ಎಂದು ಅವರು ಪ್ರಶ್ನಿಸಿದರು.
ಅಭಿವೃದ್ಧಿಗಾಗಿ ನಾವಿಬ್ಬರೂ ಶ್ರಮಿಸಿದ್ದೇವೆ! ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ನಾನು ಮತ್ತು ಕುವಾರಸ್ವಾಮಿ ಇಬ್ಬರೂ ಸೇರಿ ಅತ್ಯುತ್ತಮ ಆಡಳಿತ ನೀಡಿದ್ದೆವು. ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದು ಹೆಣ್ಣುಮಕ್ಕಳ ಕಲ್ಯಾಣಕ್ಕೆ ಉತ್ತಮ ಕಾರ್ಯಕ್ರಮ ರೂಪಿಸಿದ್ದೆವು.
ನಿಮ್ಮ ಮನೆಯಲ್ಲಿ ಹುಟ್ಟುವ ಹೆಣ್ಣು ಮಗಳು ಹದಿನೆಂಟು ವರ್ಷ ವಯಸ್ಸಿಗೆ ಬರುವ ಹೊತ್ತಿಗೆ ಹತ್ತಾರು ಲಕ್ಷ ರೂಪಾಯಿ ಸಿಗುತ್ತಿತ್ತು. ಆ ಮಕ್ಕಳು ಗೌರವ, ಸ್ವಾಭಿವಾನದಿಂದ ಬಾಳಿ ಬದುಕುವಂತಹ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದೆವು. ಈಗ ಹಣ ಬರಬೇಕಿದೆ, ಆದರೆ ಕೊಡಲು ರಾಜ್ಯ ಕಾಂಗ್ರೆಸ್ ಸರ್ಕಾರದ ಬಳಿ ಹಣವೇ ಇಲ್ಲ. ಶಾಲೆಗೆ ತೆರಳುವ ಹೆಣ್ಣು ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಾನು ಕುವಾರಸ್ವಾಮಿ ಸೇರಿ ಉಚಿತ ಬೈಸಿಕಲ್ ಯೋಜನೆ ಜಾರಿ ವಾಡಿದ್ದೆವು. ಅದು ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಆಗಿದೆ. ಇದನ್ನೆಲ್ಲ ಜನತೆ ಮರೆಯಬಾರದು ಎಂದು ಮನವಿ ಮಾಡಿದರು.