More

  ರಾಮಯ್ಯ ಕಾಲೇಜಿಗೆ ಸ್ವಾಯತ್ತತೆಯ ಸ್ಥಾನ-ಮಾನ

  ಬೆಂಗಳೂರು:
  ರಾಮಯ್ಯ ಕಾಲೇಜ್ ಆ್ ಆರ್ಟ್ಸ, ಸೈನ್ಸ್ ಅಂಡ್ ಕಾಮರ್ಸ ಕಾಲೇಜಿಗೆ ಸ್ವಾಯತ್ತತೆಯ ಮಾನ್ಯತೆ ಸಿಕ್ಕಿದೆ. ಕಾಲೇಜಿನಲ್ಲಿ ನಡೆದ ಸ್ವಾಯತ್ತತೆಯ ಅನಾವರಣ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ನಿರಂಜನ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯ ಕುಲಪತಿ ಡಾ.ಲಿಂಗರಾಜ ಗಾಂಧಿ ಭಾಗವಹಿಸಿದ್ದರು.
  ಪ್ರೊ.ಎನ್.ನಿಂರಜನ ಮಾತನಾಡಿ, ರಾಮಯ್ಯ ಕಾಲೇಜು ಗುಣಮಟ್ಟ ಶಿಕ್ಷಣಕ್ಕೆ ಹೆಸರಾಗಿದೆ. ಇಲ್ಲಿ ಹಲವು ಕೋರ್ಸ್‌ಗಳಿದ್ದು, ಮೂಲಸೌಕರ್ಯ ಉತ್ತಮವಾಗಿದೆ ಎಂದರು.
  ಪ್ರೊ.ಲಿಂಗರಾಜ ಗಾಂಧಿ ಮಾತನಾಡಿ, ಕಾಲೇಜಿಗೆ ಸ್ವಾಯತ್ತತೆ ಸಿಗುವುದು ಕಾಲೇಜಿನ ಆಡಳಿತ
  ಮಂಡಳಿಗೆ ಬಹಳ ಸಂತಸದ ವಿಷಯವಾಗಿದೆ. ಇದನ್ನು ಪಡೆದುಕೊಳ್ಳಲು ಕಾಲೇಜು ಆಡಳಿತ ಮಂಡಳಿಯವರ ಶ್ರಮ ಮೆಚ್ಚಲೇ ಎಂದರು.
  ಗೋಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್.ಜಯರಾಮ್, ರಾಮಯ್ಯ ಕಾಲೇಜಿನ ನಿರ್ದೇಶಕರಾದ ಜಾನಕಿರಾಮ್, ಕೋದಂಡರಾಮ್, ಗೋಕುಲ ಶಿಕ್ಷಣ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಬಿ.ಎಸ್.ರಾಮಪ್ರಸಾದ್, ಹಣಕಾಸು ಅಧಿಕಾರಿ ಜಿ.ರಾಮಚಂದ್ರ, ಪ್ರಾಂಶುಪಾಲರಾದ ಡಾ.ಜಿ.ವತ್ಸಲಾ ಇತರಿದ್ದರು.

  *ರಾಮಯ್ಯ ಕಾಲೇಜಿಗೆ ಸ್ವಾಯತ್ತತೆ ಸಿಕ್ಕಿರುವುದು ನಿಜಕ್ಕೂ ಸಂತೋಷದ ವಿಷಯವಾಗಿದೆ. ಇದರ ಜತೆಗೆ ಶಿಕ್ಷಣ ಸಂಸ್ಥೆಯ ಜವಾಬ್ದಾರಿ ಸಹ ಹೆಚ್ಚಾಗಿದೆ.
  -ಕೋದಂಡರಾಮ್, ನಿರ್ದೇಶಕ, ಗೋಕುಲ ಶಿಕ್ಷಣ ಸಂಸ್ಥೆ

  *ನಮ್ಮ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರ ಶಿಸ್ತು ಮತ್ತು ಕಠಿಣ ಪರಿಶ್ರಮದ ಫಲವಾಗಿ ನಮಗೆ ಸ್ವಾಯತ್ತತೆ ಸಿಕ್ಕಿದೆ. ನಾವು 6 ದಶಕಗಳಿಂದ ಗುಣಮಟ್ಟತೆಯನ್ನು ಕಾಯ್ದುಕೊಂಡು ಬರುತ್ತಿದ್ದೇವೆ.

  • ಜಾನಕಿರಾಮ್, ನಿರ್ದೇಶಕ, ಗೋಕುಲ ಶಿಕ್ಷಣ ಸಂಸ್ಥೆ

  ಸ್ವಾಯತ್ತತೆ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ: ಜಯರಾಂ
  ಬಾಕ್ಸ್
  *ಕಾಲೇಜಿಗೆ ಸ್ವಾಯತ್ತತೆ ಪಡೆದುಕೊಳ್ಳಲು ನಮ್ಮ ಸಿಬ್ಬಂದಿ ವರ್ಗ ಸಾಕಷ್ಟು ಶ್ರಮಪಟ್ಟಿದ್ದಾರೆ. ಈ ಮೂಲಕ ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ.

  • ಗೋಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್.ಜಯರಾಮ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts