ಗೋಕಾಕ: ರಮೇಶ ಮುಂಬೈಗೆ ಹೋಗಿದ್ದನ್ನು ಮರೆಯಬೇಡಿ

ಗೋಕಾಕ: ನೆರೆಯಿಂದ ಸಾವಿರಾರು ಜನರು ಸಂತ್ರಸ್ತರಾದಾಗ ರಾಜ್ಯದ ವಿವಿಧ ಭಾಗಗಳಿಂದ ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕರಿಂದ ನೆರವು ಹರಿದು ಬಂದರೂ, ಇಲ್ಲಿಯ ಶಾಸಕರು ಮಾತ್ರ ಮುಂಬೈನಲ್ಲಿ ಅಧಿಕಾರಕ್ಕಾಗಿ ಠಿಕಾಣಿ ಹೂಡಿದ್ದನ್ನು ಜನತೆ ಮರೆಯಬಾರದು ಎಂದು ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ನಗರದ ಹಾಳಬಾಗ ಗಲ್ಲಿಯಲ್ಲಿ ಮಂಗಳವಾರ ಸಂಜೆ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶ ಸ್ವಚ್ಛತೆ ಮಾಡಿದ ಹಿನ್ನೆಲೆಯಲ್ಲಿ ಸ್ಥಳೀಯರು ಆಯೋಜಿಸಿದ್ದ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು. ಪ್ರವಾಹ ಇಳಿದ ನಂತರ ನಗರ ಸ್ವಚ್ಛತೆಯಿಂದ ಜನರಿಗೆ ಅನುಕೂಲದೊಂದಿಗೆ ಮುಂದಾಗುವ ಜನರ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ಗಮನಿಸಿ ನಾವು ಸ್ವಚ್ಛತೆ ಕಾರ್ಯವನ್ನು ಮಾಡಿದ್ದೇವೆ. ಆದರೆ, ಈ ಕಾರ್ಯ ಮಾಡಬೇಕಾದವರು ನೋಡುತ್ತ ಕೇವಲ ಭಾಷಣಕ್ಕೆ ಸೀಮಿತಗೊಳಿಸಿದ್ದಾರೆ. 22 ವರ್ಷಗಳಿಂದಲೂ ಅವರ ದರ್ಶನ ನಿಮಗೆ ಕಡಿಮೆ. ಕ್ಷೇತ್ರದಲ್ಲಿ ರಾಮರಾಜ್ಯ ಹೋಗಿ ರಾವಣ ರಾಜ್ಯ ಸ್ಥಾಪಿತವಾಗಿದೆ. ಜನತೆ ಜಾಗೃತರಾಗಿ ಬದಲಾವಣೆಗೆ ಮುಂದಾಗಬೇಕು. ನಾವು ನಮ್ಮ ಸಂಸ್ಥೆಗಳ ವತಿಯಿಂದ 50 ಲಕ್ಷ ರೂ.ಗಳ ವೆಚ್ಚದಲ್ಲಿ ಗೋಕಾಕ ನಗರ ಸೇರಿ ಸುಮಾರು 40 ಗ್ರಾಮಗಳನ್ನು ಸ್ವಚ್ಛಗೊಳಿಸಿದರೆ ಇಲ್ಲಿಯ ನಗರಸಭೆಯವರು ನೆರೆಯಿಂದ ಹರಿದು ಬಂದ ಮಣ್ಣನ್ನು ತೆಗೆಯಲು 80 ಲಕ್ಷ ರೂ.ಖರ್ಚನ್ನು ಹಾಕಿದ್ದಾರೆ. ಈ ಕುರಿತು ನಗರಸಭೆಯವರೇ ನೀಡಿದ ಅಕೃತ ದಾಖಲೆ ನಮ್ಮಲ್ಲಿ ಇದೆ. ಒಂದು ಟ್ರಿಪ್ ಟ್ರಾಕ್ಟರ್‌ಗೆ 400 ರೂ.ಗಳ ಬದಲಾಗಿ 1200 ರೂ.ಗಳ ಖರ್ಚು ತೋರಿಸಿ ಲಕ್ಷಾಂತರ ರೂ.ಗಳನ್ನು ಅಂಬಿರಾವ್ ಪಾಟೀಲ ಹಾಗೂ ಎಸ್.ಎ.ಕೋತವಾಲ ಜೇಬಿಗೆ ಇಳಿಸಿದ್ದಾರೆ ಎಂದು ಆರೋಪಿಸಿದರು.

ಉಪಚುನಾವಣೆ ಪ್ರಚಾರದ ಸಮಯದಲ್ಲಿ ಯಡಿಯೂರಪ್ಪ ಹಾಗೂ ರಮೇಶ ಜಾರಕಿಹೊಳಿ ಬಣ್ಣದ ಮಾತಿಗೆ ಹಾಗೂ ಅವರ ಕಣ್ಣೀರಿಗೆ ಮರುಳಾದರೆ ತಾವು ಮುಂದಿನ 5 ವರ್ಷಗಳವರೆಗೆ ಅಲೆದಾಡಬೇಕಾಗುತ್ತದೆ. ಹಾಗಾಗಿ ನೀವು ಬದಲಾವಣೆಗೆ ಸಿದ್ಧರಾಗಬೇಕು ಎಂದು ಕರೆ ನೀಡಿದರು. ಯುವ ಮುಖಂಡ ಲಖನ ಜಾರಕಿಹೊಳಿ ಮಾತನಾಡಿ, ಕೆಲವು ಸ್ವಾರ್ಥಿಗಳ ದುರಾಡಳಿತದಿಂದ ಜನ ಅಭಿವೃದ್ಧಿಯಿಂದ ವಂಚಿತರಾಗಿದ್ದಾರೆ. ಇಲ್ಲಿಯ ರಾವಣ ರಾಜ್ಯವನ್ನು ಅಂತ್ಯ ಮಾಡಿ ರಾಮರಾಜ್ಯ ಕಟ್ಟಲು ತಮ್ಮ ಬೆಂಬಲ ಅಗತ್ಯವೆಂದು ಜನತೆಯಲ್ಲಿ ಮನವಿ ಮಾಡಿದರು. ರಾಯಪ್ಪ ಭಂಡಾರಿ, ಎಸ್.ಎನ್. ಮಕಾನದಾರ, ಶಿವು ಪಾಟೀಲ, ರಿಯಾಜ ಚೌಗಲಾ, ಶಿವು ಪೂಜೇರಿ, ಮುನ್ನಾ ಖತೀಬ, ಆರ್ೀ ಪೀರಜಾದೆ, ನಿತಿನ್ ಮುತ್ನಾಳೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ಹೊಸ ಕಾರ್ಖಾನೆ ಸ್ಥಾಪನೆಗೆ ಹಿಂದೇಟು

ಬೆಳಗಾವಿ ನಂತರ ಗೋಕಾಕ ನಗರ ಅಭಿವೃದ್ಧಿ ಪಥದತ್ತ ಸಾಗಬೇಕಾಗಿತ್ತು. ಆದರೆ, ಶತಮಾನಗಳ ಇತಿಹಾಸ ಹೊಂದಿದ್ದ ಇಲ್ಲಿಯ ಾಲ್ಸ್ ಮಿಲ್‌ಲ್ 8 ಸಾವಿರ ಕಾರ್ಮಿಕರಿಂದ 7 ನೂರಕ್ಕೆ ಇಳಿದಿದೆ. ಇದಕ್ಕೆ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಕಾರಣ. ರಿದ್ದಿ-ಸಿದ್ದಿ ಕಾರ್ಖಾನೆಗೆ ಇದೇ ಗತಿ ಬರುವುದು ಖಚಿತ. ಅಲ್ಲದೆ ಇದರಿಂದ ಯಾವುದೇ ಹೊಸ ಕಾರ್ಖಾನೆಗಳು ಗೋಕಾಕದಲ್ಲಿ ಪ್ರಾರಂಭ ಮಾಡಲು ಉದ್ಯೋಗಪತಿಗಳು ಮುಂದೆ ಬರುತ್ತಿಲ್ಲ ಎಂದು ಶಾಸಕ ಸತೀಶ ಜಾರಕಿಹೊಳಿ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *