ಜಾಹೀರಾತು ನೀತಿ ವಾಪಸಿಗೆ ರಮೇಶ್ ಎನ್.ಆರ್ ಆಗ್ರಹ

ಬೆಂಗಳೂರು: ಬಿಬಿಎಂಪಿ ಪ್ರಕಟಿಸಿರುವ ಹೊಸ ಜಾಹೀರಾತು ಕರಡು ನೀತಿಯಲ್ಲಿ ಅಧಿಕೃತ ಜಾಹೀರಾತು ಏಜೆನ್ಸಿಗಳಿಂದ 646.17 ಕೋಟಿ ರೂ. ಮೊತ್ತದ ಬಾಕಿ ವಸೂಲಾತಿಗೆ ಯಾವುದೇ ಪ್ರಸ್ತಾಪ ಇಲ್ಲ. ಈ ಲೋಪದಿಂದ ಸಂಸ್ಥೆಗೆ ಬೃಹತ್ ಮೊತ್ತವು ಕೈಬಿಡಲಿರುವ ಕಾರಣ ಕರಡು ನೀತಿಯನ್ನು ವಾಪಸ್ ಪಡೆಯಬೇಕು ಎಂದು ಪಾಲಿಕೆಗೆ ಆಡಳಿತ ಪಕ್ಷದ ಮಾಜಿ ನಾಯಕ ರಮೇಶ್ ಎನ್.ಆರ್. ಆಗ್ರಹಿಸಿದ್ದಾರೆ.

ಪ್ರಸ್ತುತ ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸುವ ಗುತ್ತಿಗೆಯನ್ನು ಪಡೆದಿರುವ 110 ಅಧಿಕೃತ ಜಾಹೀರಾತು ಏಜೆನ್ಸಿಗಳು ಹಾಗೂ 2,621 ಅನಧಿಕೃತ ಜಾಹೀರಾತು ಏಜೆನ್ಸಿಗಳಿವೆ. 2018ರವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ವಿಧದ ಜಾಹೀರಾತು ಫಲಕಗಳನ್ನು ಅಳವಡಿಸುವ ಗುತ್ತಿಗೆಯನ್ನು ಪಡೆದಿದ್ದ 110 ಅಧಿಕೃತ ಜಾಹೀರಾತು ಏಜೆನ್ಸಿಗಳು ಅಳವಡಿಸಿದ್ದ 10,172 ಜಾಹೀರಾತು ಫಲಕಗಳ ಪೈಕಿ ಒಟ್ಟು 5,522 ಜಾಹೀರಾತು ಫಲಕಗಳಿಂದ 331.92 ಕೋಟಿ ರೂ. ಶುಲ್ಕವನ್ನು ಬಾಕಿ ಉಳಿಸಿಕೊಂಡಿದ್ದವು. ಈ ವಿಷಯವನ್ನು ಆಗಲೇ ಹೈಕೋರ್ಟ್‌ಗೆ ತಿಳಿಸಲಾಗಿತ್ತು. ಜತೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಖಾಸಗಿ ಜಾಹೀರಾತು ಸಂಸ್ಥೆಗಳು ಪಿಪಿಪಿ ಅಡಿಯಲ್ಲಿ ನಿರ್ಮಿಸಿರುವ ಬಸ್ ತಂಗುದಾಣ ಮತ್ತು ಇತರೆಡೆ ಹಾಕಿದ್ದ ಜಾಹೀರಾತು ಫಲಕಗಳಿಂದ 2017ರಿಂದ 2024 ರವರೆಗೆ 314.25 ಕೋಟಿ ರೂ. ಶುಲ್ಕ ಬಾಕಿ ಉಳಿಸಿಕೊಂಡಿವೆ. ಈ ಮೊತ್ತವನ್ನು ಇವರೆಗೂ ವಸೂಲೂ ಮಾಡದ ಕಾರಣ ಸಂಸ್ಥೆಗೆ ನಷ್ಟವಾಗಿದೆ ಎಂದು ಅವರು ಡಿಸಿಎಂ ಹಾಗೂ ಪಾಲಿಕೆಯ ಆಡಳಿತಾಧಿಕಾರಿಗೆ ಪತ್ರ ಬರೆದಿದ್ದಾರೆ.

ಒಟ್ಟು ಮೊತ್ತದಲ್ಲಿ ಒಂದೇ ಏಜೆನ್ಸಿಯು 80 ಕೋಟಿ ರೂ.ಮೊತ್ತದ ಶುಲ್ಕವನ್ನು ಬಾಕಿ ಉಳಿಸಿಕೊಂಡಿದೆ. ಇಂತಹ ಜಾಹೀರಾತು ಕಂಪನಿಗಳು ಲಾಬಿ ಮಾಡಿ ಹಿಂಬಾಕಿ ವಸೂಲಾತಿಗೆ ಕರಡು ನೀತಿಯಲ್ಲಿ ಯಾವುದೇ ನಿಯಮವನ್ನು ಸೇರಿಸದಂತೆ ಪಾಲಿಕೆ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ. ಇದನ್ನು ನಗರಾಭಿವೃದ್ಧಿ ಕೂಡ ಪರಾಮರ್ಶೆಗೆ ಒಳಪಡಿಸದೆ ಕಣ್ಮುಚ್ಚಿ ಅಧಿಸೂಚನೆಗೆ ಸಹಿ ಹಾಕಿದೆ. ಹಾಗಾಗಿ ಬಾಕಿ ವಸೂಲಾತಿಗೆ ತಕ್ಷಣವೇ ಕ್ರಮ ಕೈಗೊಳ್ಳಲು ಹೊಸದಾಗಿ ಜಾಹೀರಾತು ನೀತಿಹನ್ನು ಪ್ರಕಟಿಸಬೇಕು ಎಂದು ರಮೇಶ್ ಎನ್.ಆರ್ ಅವರು ಡಿಸಿಎಂರನ್ನು ಒತ್ತಾಯಿಸಿದ್ದಾರೆ.

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…