ಕೋಲಾರ: ಕರೊನಾ ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಯಾರಾದರೂ ಆಹಾರದ ಕಿಟ್ ಕೊಟ್ಟರೆ ನಾನು ಸ್ವೀಕರಿಸುತ್ತೇನೆ ಎಂದು ವಿಧಾನಸಭೆಯ ಮಾಜಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ರಮೇಶ್‌ಕುಮಾರ್ ಹೇಳಿದ್ದಾರೆ!
ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೆ.ಸಿ. ವ್ಯಾಲಿ ಕುರಿತ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಲಾಕ್‌ಡೌನ್ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡುವಷ್ಟು ಶಕ್ತಿ ನನ್ನಲ್ಲಿ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ವಲಸೆ ಕಾರ್ಮಿಕರಿಗೆ ಬಸ್ ಕಳಿಸಿದ್ದೇವೆಂದ ಪ್ರಿಯಾಂಕಾ; ನೋಂದಣಿ ಸಂಖ್ಯೆ ಪರಿಶೀಲಿಸಿದಾಗ ಬಯಲಾಯ್ತು ಅಸಲಿಯತ್ತು
ಕೇಂದ್ರ ಸರ್ಕಾರ ಲಕ್ಷಾಂತರ ಕೋಟಿ ರೂ.ಗಳಷ್ಟು ದೊಡ್ಡ ಪ್ಯಾಕೇಜನ್ನು ಬಡವರಿಗಾಗಿ ಬಿಡುಗಡೆ ಮಾಡಿದೆ. ಲಕ್ಷ ಕೋಟಿಯಲ್ಲಿ ಎಷ್ಟು ಸೊನ್ನೆಗಳು ಇರುತ್ತವೆ ಎಂಬುದೂ ನನಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ನಾನು ಎರಡು ಸಾವಿರ, ಮೂರು ಸಾವಿರ ರೂ. ಎಣಿಸುತ್ತೇನೆ. ಒಂದು ಲಕ್ಷ ರೂ. ಬಂದರೆ ಅದನ್ನು ಎಣಿಸುವುದಕ್ಕೆ ಎರಡು ಗಂಟೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಸುತ್ತಲಿದ್ದವರಲ್ಲಿ ಅಚ್ಚರಿ ಮೂಡಿಸಿದರು.
ಇದನ್ನೂ ಓದಿ: ಸುದ್ದಿವಾಹಿನಿಯೊಂದರ 25ಕ್ಕೂ ಹೆಚ್ಚು ಮಂದಿಗೆ ಕರೊನಾ ಪಾಸಿಟಿವ್; ಕಚೇರಿ ಸೀಲ್ ಡೌನ್