More

    ಜನರಿಂದ ಛೀ ಥೂ ಎನಿಸಿಕೊಳ್ಳಲಾರೆ…..ಗೌರವದಿಂದಲೇ ರಾಜಕೀಯದಿಂದ ನಿವೃತ್ತಿ ಆಗುವೆ: ರಮೇಶ್ ಜಿಗಜಿಣಗಿ

    ವಿಜಯಪುರ: ಜನರಿಂದ ಛೀ ಥೂ ಎನಿಸಿಕೊಳ್ಳಲಾರೆ…..ಗೌರವದಿಂದಲೇ ರಾಜಕೀಯದಿಂದ ನಿವೃತ್ತಿ ಆಗುವೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.

    ರಾಮಕೃಷ್ಣ ಹೆಗಡೆ ಅವರಂಥ ಸೈದ್ದಾಂತಿಕ ನಾಯಕರ ಗರಡಿಯಲ್ಲಿ ಬೆಳೆದವನು ನಾನು. ರಾಜಕೀಯಕ್ಕೆ ಗೌರವದಿಂದ ಬಂದಿದ್ದೇನೆ. ಗೌರವದಿಂದಲೇ ನಿವೃತ್ತಿಯಾಗುವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ಜಿಲ್ಲೆಯ ಬಹುದಿನದ ಬೇಡಿಕೆಯಾದ ವಿಮಾನ ನಿಲ್ದಾಣ ಕಾಮಗಾರಿ ಶೀಘ್ರದಲ್ಲೇ ಕೈಗೊಳ್ಳಲಾಗುವುದು. ಬರುವ ಸಂಪುಟ ಸಭೆಯಲ್ಲಿ ಅದಕ್ಕೊಂದು ತಾರ್ಕಿಕ ಅಂತ್ಯ ಸಿಗಲಿದೆ. ವಿಮಾನ ಹಾರಿಸಿಯೇ‌ ನಿವೃತ್ತಿಯಾಗುವ ವಿಚಾರ ಮಂಡಿಸುವೆ ಎಂದು ಸ್ಪಷ್ಟಪಡಿಸಿದರು.

    ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ -3 ರಡಿ ಜಿಲ್ಲೆಯ ಒಟ್ಟು 1361.42 ಕಿಮೀ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದು ಜಿಗಜಿಣಗಿ ತಿಳಿಸಿದರು.
    ಈಗಾಗಲೇ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಒಟ್ಟು 11739 ಲಕ್ಷ ರೂ.ಅಂದಾಜು ಮೊತ್ತ ನಿಗದಿಯಾಗಿದ್ದು ಹಂತ ಹಂತವಾಗಿ ಅನುದಾನ ಬಿಡುಗಡೆಯಾಗಲಿದೆ. ವಿಜಯಪುರ- 33, ಬ.ಬಾಗೇವಾಡಿ-34, ಇಂಡಿ- 20, ಸಿಂದಗಿ- 20, ಮುದ್ದೇಬಿಹಾಳ-22 ಹೀಗೆ ಒಟ್ಟು 129 ರಸ್ತೆಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

    ಕಳೆದ ಐದು ವರ್ಷದಲ್ಲಿ ಒಟ್ಟು 12 ಕಾಮಗಾರಿ ಕೈಗೊಳ್ಳಲಾಗಿದ್ದು, 92.58 ಕಿಮೀ ಕಾಮಗಾರಿ ಪೂರ್ಣಗೊಂಡಿದೆ. ಆದಷ್ಟು ಬೇಗೆ ಎಲ್ಲ ಕಾಮಗಾರಿಗಳನ್ನು ಕೈಗೆತ್ತಿಕೊಂಡಿ ನಿಗದಿತ ಅವಧಿಯಲ್ಲಿ ಪೂರ್ಣ ಗೊಳಿಸುವುದಾಗಿ ತಿಳಿಸಿದರು.

    ಕ್ಯಾಬಿನೆಟ್ ಮೀಟಿಂಗ್ ನಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಹಸಿರು ನಿಶಾನೆ ತೋರಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ವಿಮಾನ ನಿಲ್ದಾಣ ಮಾಡಿಯೇ ವಿಶ್ರಾಂತಿ ಪಡೆಯುವೆ. ಮುಂದಿನ ಚುನಾವಣೆ ನಿಲ್ಲಬಾರದೆಂದು ಯೋಚಿಸಿದ್ದೇನೆ ಎಂದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts