Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ರಮೇಶ್​ ಜಾರಕಿಹೊಳಿ ಅಚ್ಚರಿಯ ನಡೆ; ಡಿಕೆಶಿ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ದೌಡು

Wednesday, 19.09.2018, 10:54 PM       No Comments

ಬೆಂಗಳೂರು: ಬೆಂಗಳೂರಿನ ಶೇಷಾದ್ರಿಪುರಂನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಡಿ.ಕೆ ಶಿವಕುಮಾರ್​ ಅವರನ್ನು ಬುಧವಾರ ರಾತ್ರಿ ಭೇಟಿಯಾದ ರಮೇಶ್​ ಜಾರಕಿಹೊಳಿ ಆರೋಗ್ಯ ವಿಚಾರಿಸಿದ್ದಾರೆ. ಈ ಮೂಲಕ ರಾಜಕೀಯ ವಲಯದಲ್ಲಿ ಹಲವರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪ ಹೆಚ್ಚಾಗಿದೆ ಎಂದು ಮುನಿಸಿಕೊಂಡಿದ್ದ ರಮೇಶ್​ ಜಾರಕಿಹೊಳಿ, ಇದೇ ವಿಚಾರವನ್ನೇ ಮುಂದಿಟ್ಟುಕೊಂಡು ರಾಜಕೀಯ ಸ್ಥಿತ್ಯಂತರಕ್ಕೆ ಮುಂದಡಿ ಇಟ್ಟಿದ್ದರು. ಆದರೆ, ಡಿಕೆಶಿ ಅಸೌಖ್ಯ ಎಂದು ಗೊತ್ತಾಗುತ್ತಲೇ ಮುನಿಸು ಬದಿಗಿಟ್ಟು ಆಸ್ಪತ್ರೆಗೆ ತೆರಳಿ, ಆರೋಗ್ಯ ವಿಚಾರಿಸಿದ್ದಾರೆ. ರಮೇಶ್​ ಅವರ ನಡೆ ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಆಸ್ಪತ್ರೆಯಲ್ಲಿರುವ ಡಿಕೆಶಿಯನ್ನು ಕಾಣಲು ತೆರಳಿದ ರಮೇಶ್​ ಜತೆಗೆ ಅವರ ಆಪ್ತ ಶಾಸಕರೂ ಇದ್ದರು. ಇಬ್ಬರೂ ನಾಯಕರು ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಅಭಿವೃದ್ಧಿಯ ವಿಚಾರದಲ್ಲಿ ಪರಸ್ಪರ ಸಹಕಾರ ಪಡೆಯುವ ಚರ್ಚೆಯನ್ನೂ ನಡೆಸಿದರು ಎಂದು ಗೊತ್ತಾಗಿದೆ.

ಅಸೌಖ್ಯಕ್ಕೆ ಈಡಾಗಿರುವ ಡಿಕೆಶಿ ಅವರನ್ನು ಕಾಣಲು ಗಣ್ಯರ ದಂಡೇ ಆಸ್ಪತ್ರೆಗೆ ಬರುತ್ತಿದೆ. ಅವದೂತ ಅರ್ಜುನ ಗುರು, ಸಚಿವ ಯು.ಟಿ ಖಾದರ್​, ಶಾಸಕರಾದ ಪ್ರಸಾದ್ ಅಬ್ಬಯ್ಯ,ಮಹಾಂತೇಶ್ ಕೌಜಲಗಿ, ಕುಮಟಳ್ಳಿ, ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಹಲವರು ಆಸ್ಪತ್ರೆಗೆ ತೆರಳಿ ಡಿಕೆಶಿ ಆರೋಗ್ಯ ವಿಚಾರಿಸಿದ್ದಾರೆ.

ಫುಡ್​ ಪಾಯ್ಸನ್​ನಿಂದಾಗಿ (ಕೆಟ್ಟ ಆಹಾರ ಸೇವನೆ) ಅನಾರೋಗ್ಯಕ್ಕೀಡಾಗಿರುವ ಸಚಿವ ಡಿ.ಕೆ ಶಿವಕುಮಾರ್​ ಮಂಗಳವಾರ ಸಂಜೆ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಬುಧವಾರ ಬಿಜೆಪಿ ನಾಯಕರು ಡಿಕೆಶಿ ವಿರುದ್ಧ ಸುದ್ಧಿಗೋಷ್ಠಿ ನಡೆಸಿದ ಹಿನ್ನೆಲೆಯಲ್ಲಿ ಸಂಜೆ ಐದು ಗಂಟೆಯಲ್ಲಿ ಆಸ್ಪತ್ರೆಯಿಂದ ನೇರವಾಗಿ ಗೃಹ ಕಚೇರಿಗೆ ಆಗಮಿಸಿದ್ದ ಡಿ.ಕೆ ಶಿವಕುಮಾರ್​ ಬಿಜೆಪಿ ವಿರುದ್ಧ ಅಬ್ಬರಿಸಿ ಸುದ್ದಿಗೋಷ್ಠಿ ನಡೆಸಿದ್ದರು. ನಂತರ ಮರಳಿ ಆಸ್ಪತ್ರೆಗೆ ತೆರಳಿದ್ದರು.

Leave a Reply

Your email address will not be published. Required fields are marked *

Back To Top