ಸಚಿವ ರಮೇಶ್​ ಜಾರಕಿಹೊಳಿ ರಾಜೀನಾಮೆ?

ಬೆಂಗಳೂರು: ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ  ಸಚಿವ ರಮೇಶ್​ ಜಾರಕಿಹೊಳಿ ಅವರು ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಸಂಪುಟ ಸಭೆಯಲ್ಲಿ ಕಬ್ಬು ಬೆಳಗಾರರ ಸಮಸ್ಯೆ ಚರ್ಚಿಸುತ್ತಿದ್ದ ವೇಳೆ ರಮೇಶ್​ ಜಾರಕಿಹೊಳಿ ಅವರು ತಮ್ಮ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ.

” ಕಬ್ಬು ಬೆಳೆಗಾರರು ಪ್ರತಿಭಟನೆ ಮಾಡುತ್ತಿದ್ದರೂ, ಸ್ಥಳಕ್ಕೆ ತೆರಳಿ ರೈತರನ್ನು ಏಕೆ ಭೇಟಿ ಮಾಡಲಿಲ್ಲ? ಎಂದು ಸಿಎಂ ಎಚ್ಡಿಕೆ ಪ್ರಶ್ನಿಸಿದರು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡಿರುವ ರಮೇಶ್​​ ಜಾರಕಿಹೊಳಿ ಸಿಎಂಗೆ ರಾಜೀನಾಮೆ ಸಲ್ಲಿಸಿ ಸಭೆಯಿಂದ ಹೊರ ಬಂದರು ಎಂದು ಗೊತ್ತಾಗಿದೆ.