ಮಾಧ್ಯಮದವರೇ ನನ್ನನ್ನು ಹಾಳು ಮಾಡಿದ್ದು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಗರಂ

ಬೆಳಗಾವಿ: ಮಾಧ್ಯಮದವರೇ ನನ್ನನ್ನು ಹಾಳು ಮಾಡಿದ್ದು ಎಂದು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಮಾಧ್ಯಮದವರ ವಿರುದ್ಧ ಕಿಡಿಕಾರಿದ್ದಾರೆ.

ಗೋಕಾಕ್​ ಫಾಲ್ಸ್​ ಕೈಗಾರಿಕ ಪ್ರದೇಶದಲ್ಲಿ ಬ್ಯಾಡ್ಮಿಂಟನ್​ ಆಟ ಆಡುತ್ತಿದ್ದ ರಮೇಶ್​ ಜಾರಕಿಹೊಳಿ ಬಳಿ ಪ್ರತಿಕ್ರಿಯೆ ಕೇಳಲು ಹೋದಾಗ ಗರಂ ಆದ ಅವರು, ಮಾಧ್ಯಮದವರ ಜತೆ ನಾನು ಮಾತನಾಡುವುದಿಲ್ಲ. ಟಿವಿಯವರೇ ನಮ್ಮನ್ನು ಹಾಳು ಮಾಡಿದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿನ್ನೆ ಸಚಿವ ಸಂಪುಟ ವಿಸ್ತರಣೆಯಾದಾಗಿನಿಂದಲೂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ರಮೇಶ್​ ನಿರಾಕರಿಸುತ್ತಿದ್ದಾರೆ.