‘ಜಾಡಿಸಿ ಒದಿಬೇಕು, ಹುಚ್ಚರು ನೀವು’ ಎಂದು ಮಾಧ್ಯಮದವರ ಮೇಲೆ ಗರಂ ಆದ ರಮೇಶ್​ ಜಾರಕಿಹೊಳಿ

ಬೆಳಗಾವಿ: “ಒದಿಯಬೇಕು ನಿಮ್ಮನ್ನ ಜಾಡಿಸಿ ಒದಿಯಬೇಕು. ಹುಚ್ಚರು ಇದ್ದೀರಿ ನೀವು, ಅತಿಯಾಯ್ತು ನಿಮ್ದು” ಎಂದು ಕಣ್ಮರೆಯಾಗಿದ್ದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಮಾಧ್ಯಮದವರ ವಿರುದ್ಧ ಹರಿಹಾಯ್ದಿದ್ದಾರೆ.

ಕಳೆದ ಎಂಟು ದಿನಗಳಿಂದ ಸ್ವತಃ ಕಾಂಗ್ರೆಸ್​ನವರಿಗೇ ಸಿಗದೆ ಕಣ್ಮರೆಯಾಗಿದ್ದ ರಮೇಶ್​ ಜಾರಕಿಹೊಳಿ ಗೋಕಾಕ್​ಮಿಲ್​ನಲ್ಲಿರುವ ಮೈದಾನದಲ್ಲಿ ಬ್ಯಾಡ್ಮಿಂಟನ್ ಆಡಿ ನಿವಾಸಕ್ಕೆ ಹಿಂದಿರುಗುವಾಗ ಪ್ರತ್ಯಕ್ಷರಾಗಿದ್ದರು. ಆಗ  ವರದಿಗಾರರು ರಮೇಶ್​ ಅವರ ಮುಂದಿನ ರಾಜಕೀಯ ನಿಲುವುಗಳ ಬಗ್ಗೆ ಪ್ರತಿಕ್ರಿಯೆ ಕೇಳಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಕಾರಿನಿಂದ ಇಳಿಯುತ್ತಿದ್ದಂತೆ ಮಾಧ್ಯಮದವರ ವಿರುದ್ಧ ಈ ರೀತಿ ಗರಂ ಆಗಿ ಮಾತನಾಡಿ, ಯಾವುದೇ ಪ್ರತಿಕ್ರಿಯೆ ನೀಡದೆ ಮನೆಯೊಳಕ್ಕೆ ತೆರಳಿದ್ದಾರೆ.

ಕಳೆದ ಎಂಟು ದಿನಗಳಿಂದ ಅಜ್ಞಾತವಾಗಿದ್ದ ರಮೇಶ್ ಬುಧವಾರ ಗೋಕಾಕ್​ನ ತಮ್ಮ ನಿವಾಸದಲ್ಲಿ ಪ್ರತ್ಯಕ್ಷರಾಗಿದ್ದರು. (ದಿಗ್ವಿಜಯ ನ್ಯೂಸ್)