ರಮೇಶ್ ಜಾರಕಿಹೊಳಿ ಆವೇಶದಲ್ಲಿ ಮಾತನಾಡುತ್ತಾರೆ ಎಂದ್ರು ಡಿಕೆಶಿ

ಬೆಂಗಳೂರು: ಈಗ ಸಚಿವ ಸಂಪುಟದಲ್ಲಿ ಅವಕಾಶ ನೀಡಿದವರಿಗೆ ಎಲ್ಲರಿಗೂ ಎರಡು ವರ್ಷಕ್ಕೆ ಮಾತ್ರ ಎಂದು ಹೇಳಲಾಗಿದ್ದು, ಆ ಬಳಿಕ ಮತ್ತೆ ರೊಟೇಷನ್​ ಮಾಡುತ್ತೇವೆ ಎಂದು ಸಚಿವ ಡಿ.ಕೆ.ಶಿವಕುಮಾರ್​ ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಬಳಿಕ ಹಲವು ಶಾಸಕರು ಅಸಮಾಧಾನಗೊಂಡ ಬಗ್ಗೆ ಮಾತನಾಡಿದ ಅವರು, ಎಲ್ಲರಿಗೂ ಆಸೆ ಇರುತ್ತದೆ. ಅದೇನು ತಪ್ಪಲ್ಲ ಎಂದರು.

ರಮೇಶ್​ ಜಾರಕಿಹೊಳಿಯವರ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್​, ರಮೇಶ್​ ಜಾರಕಿಹೊಳಿಯವರು ಆವೇಶದಲ್ಲಿ ಮಾತನಾಡಿದ್ದಾರೆ. ನಾನು ಅವರ ಬಳಿ ಚರ್ಚಿಸುತ್ತೇನೆ. ನಾನೂ ಕೂಡ ಈ ಹಿಂದೆ ಸಚಿವ ಸ್ಥಾನ ಸಿಗದೆ, ಏಳೆಂಟು ತಿಂಗಳು ಖಾಲಿ ಇದ್ದೆ. ಧರ್ಮಸಿಂಗ್​ ಅವಧಿಯಲ್ಲೂ ನನ್ನನ್ನು ಹೊರಗೆ ಇಟ್ಟಿದ್ದರು. ಯಾವ ನಾಯಕರೂ ನನ್ನ ಪರ ಮಾತನಾಡಲು ಬರಲಿಲ್ಲ. ಅದಾದ ಬಳಿಕ ಹೈಕಮಾಂಡ್​ ಕರೆದು ಸಚಿವ ಸ್ಥಾನ ಕೊಟ್ಟಿತು ಎಂದು ಹೇಳಿದರು.