Friday, 16th November 2018  

Vijayavani

Breaking News

ನಮ್ಮ ಸಿಟ್ಟು ಮುಗಿದುಹೋಗಿದೆ ಸ್ವಾಮಿ, ಎಲ್ಲ ಸಮಸ್ಯೆ ಬಗೆಹರಿದಿದೆ: ರಮೇಶ್​ ಜಾರಕಿಹೊಳಿ

Tuesday, 11.09.2018, 1:47 PM       No Comments

ಬೆಂಗಳೂರು: ಡಿಸಿಎಂ ಡಾ. ಜಿ. ಪರಮೇಶ್ವರ್​ ಹಾಗೂ ಸಚಿವ ದಿನೇಶ್​ ಗುಂಡೂರಾವ್​ ಅವರು ಬೆಳಗಾವಿ ವಿಚಾರದಲ್ಲಿದ್ದ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಅವರು ಹೇಳಿದ್ದೆಲ್ಲಾ ಸರಿ ಇದೆ. ನನಗೆ ಯಾವುದೇ ಇನ್ನು ಯಾವುದೇ ಅಸಮಾಧಾನ ಇಲ್ಲ ಎಂದು ರಮೇಶ್​ ಜಾರಕಿಹೊಳಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ದಿನೇಶ್​ ಗುಂಡೂರಾವ್​ ಹಾಗೂ ಪರಮೇಶ್ವರ್​ ಅವರು ನಮಗೆ ನೀಡಿರುವ ಭರವಸೆಗಳ ಬಗ್ಗೆ ವಿವರ ನೀಡುವಂತಿಲ್ಲ ಎಂದರು.

ಬಿಜೆಪಿಯಿಂದ ನನಗೆ ಯಾವುದೇ ಆಹ್ವಾನ ಬಂದಿಲ್ಲ. ಇದು ಶುದ್ಧ ಸುಳ್ಳು. ಇನ್ನು ಸತೀಶ್​ ಜಾರಕಿಹೊಳಿಗೆ ಆಹ್ವಾನ ಬಂದಿರುವುದರ ಕುರಿತು ನನಗೆ ಏನೂ ತಿಳಿದಿಲ್ಲ ಎಂದಿದ್ದಾರೆ.

ನಮ್ಮ ಪಕ್ಷದ ವಿರುದ್ಧ ನಾವು ಸಿಡಿದೇಳುವುದಿಲ್ಲ. ಮನುಷ್ಯನಿಗೆ ಸಿಟ್ಟು ಬರುವುದು ಸಾಮಾನ್ಯ. ನಮ್ಮ ಸಿಟ್ಟನ್ನು ಪಕ್ಷದ ಮುಖಂಡರ ಬಳಿ ತಿಳಿಸಿದ್ದೇವೆ. ಅದನ್ನು ಅವರು ಬಗೆ ಹರಿಸಿದ್ದಾರೆ ಎಂದರು.

ಇನ್ನೂ ಮಸ್ಕಿ ಶಾಸಕ ಪ್ರತಾಪ್​ಗೌಡ ಪಾಟೀಲ್​ ಮಾತನಾಡಿ, ಕಾಂಗ್ರೆಸ್​​ನಿಂದ ಗೆದ್ದು ಬಂದಿದ್ದೇವೆ. ಇದೇ ಪಕ್ಷದಲ್ಲಿ ಇರುತ್ತೇನೆ. ರಮೇಶ್​ ಜಾರಕಿಹೊಳಿ ಅವರು ಕೂಡ ಕಾಂಗ್ರೆಸ್​ ಬಿಡುವುದಿಲ್ಲ ಎಂದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top