ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಟ ರಮೇಶ್ ಅರವಿಂದ್ ಕಳೆದ ಏಪ್ರಿಲ್‌ನಲ್ಲಿ ಬಿಡುಗಡೆಯಾದ ‘ಶಿವಾಜಿ ಸುರತ್ಕಲ್ 2’ ಬಳಿಕ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಆ ಪ್ರಶ್ನೆಗೆ ರಮೇಶ್ ಅರವಿಂದ್ ಅವರ 59ನೇ ಹುಟ್ಟುಹಬ್ಬದಂದೇ ಉತ್ತರ ದೊರೆತಿದೆ. ಹೌದು, ಇಂದು ರಮೇಶ್ ಅರವಿಂದ್ ಬರ್ತ್‌ಡೇ ಪ್ರಯುಕ್ತ ಅವರ 106ನೇ ಸಿನಿಮಾ ಘೋಷಣೆಯಾಗಿದೆ. ಹೆಸರು ‘ದೈಜಿ’. ‘ಶಿವಾಜಿ ಸುರತ್ಕಲ್’ ಸರಣಿಯ ಎರಡು ಚಿತ್ರಗಳನ್ನು ನಿರ್ದೇಶಿಸಿರುವ ಆಕಾಶ್ ಶ್ರೀವತ್ಸ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ.
ಇದನ್ನೂ ಓದಿ : ಕಾಲಾಪತ್ಥರ್ ಆಡಿಯೊ ಲಾಂಚ್ ; ವಿಕ್ಕಿ ವರುಣ್, ಧನ್ಯಾ ರಾಮ್‌ಕುಮಾರ್ ಅಭಿನಯದ ಚಿತ್ರ

‘ದೈಜಿ’ಗೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಅರ್ಥಗಳಿವೆ. ಕೊಂಕಣಿಯಲ್ಲಿ ‘ದೈಜಿ’ ಎಂದರೆ ರಕ್ತಸಂಬಂಧ. ಹಾಗೇ ಜಪಾನೀ ಭಾಷೆಯಲ್ಲಿ ಅದಕ್ಕೆ ಬಹಳ ಕಾಳಜಿ ವಹಿಸಬೇಕಾದ ವಿಚಾರ ಎನ್ನಲಾಗುತ್ತದೆ. ಇದೊಂದು ಮಿಸ್ಟರಿ, ಹಾರರ್ ಜಾನರ್ ಚಿತ್ರವಾಗಿದ್ದು, ನಿರ್ಮಾಪಕ ರವಿ ಕಶ್ಯಪ್ ವಿವರಿಸಿದ ನೈಜ ಘಟನೆಗಳನ್ನು ಆಧರಿಸಿ ಅಭಿಜಿತ್ ವೈ.ಆರ್. ಮತ್ತು ನಿರ್ದೇಶಕ ಆಕಾಶ್ ಶ್ರೀವತ್ಸ ಕಥೆ ಮಾಡಿಕೊಂಡಿದ್ದಾರೆ. ಸದ್ಯ ನಾಯಕಿಯ ಹುಡುಕಾಟ ನಡೆಯುತ್ತಿದ್ದು, ಡಿಸೆಂಬರ್ ಅಥವಾ ಮುಂದಿನ ಜನವರಿಯಿಂದ ಚಿತ್ರೀಕರಣ ಪ್ರಾರಂಭಿಸುವ ಆಲೋಚನೆ ಚಿತ್ರತಂಡದ್ದು. ಚಿತ್ರದ ಬಹುತೇಕ ಕಥೆ ಅಮೆರಿಕದಲ್ಲಿ ನಡೆಯಲಿದೆ.
ಇದನ್ನೂ ಓದಿ : ಒಟಿಟಿಯಲ್ಲೂ ಟ್ರೆಂಡ್ ಆಯ್ತು ರಜನಿಕಾಂತ್ ನಟನೆಯ ‘ಜೈಲರ್’!

ವಿಭಿನ್ನ ಗೆಟಪ್‌ನಲ್ಲಿ ರಮೇಶ್
ಕನ್ನಡ ಸೇರಿ ತಮಿಳು, ತೆಲುಗು, ಮಲಯಾಳಂನಲ್ಲೂ ನಟಿಸಿರುವ ಬಹುಭಾಷಾ ನಟ ರಮೇಶ್ ಅರವಿಂದ್ ‘ದೈಜಿ’ ಚಿತ್ರದಲ್ಲಿ ತೀರಾ ವಿಭಿನ್ನ ಪಾತ್ರದಲ್ಲಿ, ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅದಕ್ಕೆ ಪೂರಕ ಎಂಬಂತೆ ಅವರ ಲುಕ್ ರಿವೀಲ್ ಆಗಿದ್ದು, ಮುಖಕ್ಕೆ ಥರಹೇವಾರಿ ಬಣ್ಣ ಹಚ್ಚಿಕೊಂಡು, ಕಿವಿಗೆ ಓಲೆ ಧರಿಸಿ, ಅದರ ಮೇಲೊಂದು ಹೂವಿಟ್ಟುಕೊಂಡಿರುವ ರಮೇಶ್ ಅರವಿಂದ್ ಲುಕ್ ವೈರಲ್ ಆಗಿದೆ.