ರಾಮದುರ್ಗ: ಮಹಿಳೆಯರಿಗೆ ಪ್ರೋತ್ಸಾಹ ನೀಡಿ

ರಾಮದುರ್ಗ:  ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ ಲಕ್ಷ್ಮೀ ನಗರದ ಮಹಿಳಾ ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರೀಪತಿ ನಗರದ ಸಿದ್ಧಾರೂಢ ಮಠದ ಅನಾಥಾಶ್ರಮದ ಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಸಸಿ ವಿತರಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಸಿದ್ಧಾರೂಢ ಮಠದ ಜಗದಾತ್ಮಾನಂದ ಸ್ವಾಮೀಜಿ, ಪ್ರತಿಭಾವಂತ ಮಹಿಳೆಯರಿಗೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಲು ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಅವಶ್ಯ ಕಾರ್ಯಸೂಚಿ ಕುರಿತು ಚರ್ಚಿಸಿ ಜಾರಿಗೆ ತರಬೇಕು ಎಂದರು.
ಸನ್ಮಾನ ಸ್ವೀಕರಿಸಿ ಪುರಸಭೆ ಸದಸ್ಯೆ ಪದ್ಮಾ ಸಿದ್ಲಿಗಂಪ್ಪನವರ ಮಾತನಾಡಿದರು.

ಶೋಭಾ ಸುರಪುರ, ರಂಜನಾ ದಿಂಡಿವಾರ, ಸುಮಂಗಲಾ ಮುಳ್ಳೂರ, ಸುಧಾ ಅಂಗಡಿ ಇತರರು ಇದ್ದರು. ಪುಷ್ಪಾ ಸಿದ್ಧಾಟಗಿಮಠ ಪ್ರಾಸ್ತಾವಿಕ ಮಾತನಾಡಿದರು. ರೇಣುಕಾ ಪಾಟೀಲ ಸ್ವಾಗತಿಸಿದರು. ರಾಮಚಂದ್ರ ಯಾದವಾಡ ನಿರೂಪಿಸಿದರು. ಶ್ವೇತಾ ಅಂಗಡಿ ವಂದಿಸಿದರು.