ಇಬ್ರಾಹಿಂ ಸುತಾರಗೆ ರೇಣುಕಾಚಾರ್ಯ ಪ್ರಶಸ್ತಿ: ರಂಭಾಪುರಿ ಜಗದ್ಗುರು ಘೋಷಣೆ

>

ಮಸ್ಕಿ: ರಂಭಾಪುರಿ ಪೀಠದ ಪ್ರತಿಷ್ಠಿತ ರೇಣುಕಾಚಾರ್ಯ ಪ್ರಶಸ್ತಿಯನ್ನು ಸೂಫಿಸಂತ, ಕನ್ನಡದ ಕಬೀರ, ಪದ್ಮಶ್ರಿ ಪುರಸ್ಕೃತ ಇಬ್ರಾಹಿಂ ನಾ. ಸುತಾರ ಮಹಾಲಿಂಗಪುರಗೆ ಪ್ರದಾನ ಮಾಡಲಾಗುವುದು ಎಂದು ರಂಭಾಪುರಿ ಪೀಠದ ಜಗದ್ಗುರು ಶ್ರೀ ಪ್ರಸನ್ನರೇಣುಕಾಚಾರ್ಯ ವೀರಸೋಮೇಶ್ವರ ಶಿವಾಚಾರ್ಯರು ಪ್ರಕಟಿಸಿದ್ದಾರೆ

ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಲಿಂ.ಮುರುಘರಾಜೇಂದ್ರ ಸ್ವಾಮಿಗಳ 25ನೇ ಪುಣ್ಯರಾಧನೆ ಹಾಗೂ ವರರುದ್ರಮುನಿ ಶಿವಾಚಾರ್ಯರ ಎರಡನೇ ಪಟ್ಟಾಧಿಕಾರದ ವರ್ದಂತಿ ಸಮಾರಂಭಕ್ಕೆ ಧರ್ಮಧ್ವಜವನ್ನು ಆರೋಹಣ ಮಾಡಿ, ಧರ್ಮಸಭೆಯಲ್ಲಿ ಮಂಗಳವಾರ ಮಾತನಾಡಿದರು.

ಮಾ.19ರಂದು ರಂಭಾಪುರಿ ಪೀಠದಲ್ಲಿ ಕ್ಷೇತ್ರನಾಥನ ಜಾತ್ರೆ ಜರುಗುತ್ತಿದ್ದು, ಗುರು-ವಿರಕ್ತ ಸ್ವಾಮೀಜಿಗಳ ಸಮ್ಮಿಲನದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಧಾರ್ಮಿಕ, ಸಾಮಾಜಿಕ, ಜ್ಞಾನ ಪ್ರಸಾರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಪ್ರಶಸ್ತಿಗಳನ್ನು ಕೊಡಮಾಡುತ್ತಿದ್ದು, ಈ ಬಾರಿ ಹಿಂದು ಮುಸ್ಲಿಂ ಭಾವೈಕದ ಕೊಂಡಿ ಬೆಸೆಯುತ್ತಿರುವ ಇಬ್ರಾಹಿಂದ ಸುತಾರಗೆ ಕೊಡಲಾಗುತ್ತಿದೆ ಎಂದರು.