ಮೊದಲು ಹಕ್ಕು ಚಲಾಯಿಸಿದ ರಂಭಾಪುರಿ ಶ್ರೀ

ಬಾಳೆಹೊನ್ನೂರು: ರಂಭಾಪುರಿ ಪೀಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆ 209ರಲ್ಲಿ ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮೊದಲಿಗರಾಗಿ ತಮ್ಮ ಹಕ್ಕು ಚಲಾಯಿಸಿದರು.

ರಂಭಾಪುರಿ ಪೀಠದಲ್ಲಿ ಪೂಜಾ ವಿವಿಧಾನಗಳನ್ನು ನೆರವೇರಿಸಿದ ಶ್ರೀಗಳು ಬೆಳಗ್ಗೆ 7 ಗಂಟೆಗೆ ಮತಗಟ್ಟೆಗೆ ಆಗಮಿಸಿದ್ದರು. ಮತಗಟ್ಟೆ ಅಧಿಕಾರಿಗಳಿಗೆ ಶ್ರೀಗಳು ತಮ್ಮ ಸಂಪೂರ್ಣ ಹೆಸರರು ತಿಳಿಸಿದರು. ಬಳಿಕ ಅಧಿಕಾರಿಗಳು ಶ್ರೀಗಳ ಗುರುತಿನ ಚೀಟಿ ಪರಿಶೀಲಿಸಿದರು.ನಂತರ ಶ್ರೀಗಳು ಮತಗಟ್ಟೆ ಪುಸ್ತಕದಲ್ಲಿ ಸಹಿ ಮಾಡಿ ಅಧಿಕಾರಿಗಳಿಂದ ತಮ್ಮ ಬೆರಳಿಗೆ ಶಾಹಿ ಹಾಕಿಸಿಕೊಂಡರು. ಮತಗಟ್ಟೆಯಲ್ಲಿ ಮೊದಲಿಗರಾಗಿ ಮತ ಚಲಾಯಿಸಿದ ಶ್ರೀಗಳು ಇತರೆ ಮತದಾರರಿಗೆ ಮಾದರಿಯಾದರು.

ರಂಭಾಪುರಿ ಪೀಠದ ಮತಗಟ್ಟೆ ಕೇಂದ್ರದ ಮತಪಟ್ಟಿಯಲ್ಲಿ ಜಗದ್ಗುರುಗಳ ಹೆಸರು ಒಂದನೇ ಕ್ರಮ ಸಂಖ್ಯೆಯಾಗಿರುವುದೂ ವಿಶೇಷ. ಜಗದ್ಗುರುಗಳು ಮತ ಚಲಾಯಿಸುತ್ತಿದ್ದಂತೆ ಶ್ರೀಪೀಠದ ಸಿಬ್ಬಂದಿ ಸಹ ತಮ್ಮ ಹಕ್ಕು ಚಲಾಯಿಸಿದರು.

ಯೋಗ್ಯರನ್ನು ಆರಿಸಬೇಕು: ಮತ ಚಲಾವಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಂಭಾಪುರಿ ಜಗದ್ಗುರುಗಳು, ಪ್ರಜಾಪ್ರಭುತ್ವ ಬೆಳವಣಿಗೆಗೆ ಮತದಾನ ಮಾಡುವುದು ಅವಶ್ಯಕ ಎಂದರು. ದೇಶದ ಗೌರವ, ಘನತೆ, ಸಂಸ್ಕೃತಿ, ಸಂಪ್ರದಾಯ ಎತ್ತಿಹಿಡಿಯುವಂತಹ ಯೋಗ್ಯ ಅಭ್ಯರ್ಥಿಗಳನ್ನು ಆರಿಸಬೇಕಿದೆ. ಮತದಾನ ನಮ್ಮ ಹಕ್ಕಾಗಿದ್ದು ಯಾರೂ ಉದಾಸೀನತೆ ಮಾಡದೆ ಮತ ಚಲಾಯಿಸಬೇಕು. ಮತದಾನ ಮಾಡದೆ ಹೋದರೆ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದಂತೆ ಎಂದರು.

Leave a Reply

Your email address will not be published. Required fields are marked *