ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್

Latest News

ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಹಂತಕ ರಾಬರ್ಟ್​ ಪಯಾಸ್​ಗೆ ಒಂದು ತಿಂಗಳ ಪರೋಲ್​

ಚೆನ್ನೈ: ಮಾಜಿ ಪ್ರಧಾನ ಮಂತ್ರಿ ರಾಜೀವ್​ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ರಾಬರ್ಟ್ ಪಯಾಸ್​ಗೆ ಮದ್ರಾಸ್​ ಹೈಕೋರ್ಟ್​ ಗುರುವಾರ 30 ದಿನಗಳ ಪರೋಲ್​...

ಡಿಕೆಶಿ ಗೆ ಹುಬ್ಬಳ್ಳಿಯಲ್ಲಿ ಭರ್ಜರಿ ಸ್ವಾಗತ ನೀಡಿದ ಅಭಿಮಾನಿಗಳು

ವಿಜಯವಾಣಿ ಸುದ್ದಿಜಾಲ, ಹುಬ್ಬಳ್ಳಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ನಗರದಲ್ಲಿ ಗುರುವಾರ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಭರ್ಜರಿ ಸ್ವಾಗತಿಸಿದರು.ಗೋಕುಲ ರಸ್ತೆ ವಿಮಾನ...

ನಾಳೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿಗೆ ಒಳಗಾಗುತ್ತಿದ್ದಾರೆ ನಟ, ನೇತಾರ ಕಮಲ್ ಹಾಸನ್

ಚೆನ್ನೈ: ಮಕ್ಕಳ್ ನೀದಿ ಮೈಯ್ಯಮ್(ಎಂಎನ್​ಎಂ) ಪಕ್ಷ ಸ್ಥಾಪಕ ನಟ ಕಮಲ್ ಹಾಸನ್ ನಾಳೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಮುಖ ಸರ್ಜರಿಗೆ ಒಳಗಾಗಲಿದ್ದಾರೆ ಎಂದು...

ರಕ್ಷಣಾ ಸಮಿತಿಗೆ ಸಂಸದೆ ಪ್ರಗ್ಯಾ ಸಿಂಗ್​ ಠಾಕೂರ್​ ಆಯ್ಕೆ: ಇದು ದೇಶಕ್ಕೆ ಮಾಡಿದ ಅಪಮಾನವೆಂದ ಕಾಂಗ್ರೆಸ್​

ನವದೆಹಲಿ: ಮಾಲೆಗಾಂವ್​ ಸ್ಪೋಟ(2008) ಪ್ರಕರಣದ ಆರೋಪಿಯಾಗಿರುವ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್​ ಠಾಕೂರ್​, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ನೇತೃತ್ವದ 21 ಸದಸ್ಯರ...

ಶಾಸಕ ತನ್ವೀರ್​ ಸೇಠ್​ ಕಿವಿ ಕೆಳ ಭಾಗದಲ್ಲಿ ಊನ; ಆಪರೇಷನ್​ ನಡೆಸಿದ ವೈದ್ಯರು

ಮೈಸೂರು: ಶಾಸಕ‌ ತನ್ವೀರ್‌ಸೇಠ್ ದೇಹದಲ್ಲಿ ಕಿವಿ ಕೆಳಭಾಗಕ್ಕೆ ಹೊಲಿಗೆ ಹಾಕಲಾಗಿದ್ದ ಸ್ಥಳದಲ್ಲಿ ಊನ ಕಂಡುಬಂದಿದೆ. ಹೊಲಿಗೆ ಹಾಕಿದ್ದ ಭಾಗ ಕಪ್ಪನೆಯ ಬಣ್ಣಕ್ಕೆ ತಿರುಗಿದ್ದರಿಂದ...

| ಪ್ರಶಾಂತ ರಿಪ್ಪನ್​ಪೇಟೆ

ಯಾವುದೇ ಜಾತಿ, ಮತ, ಪಂಥವೆನ್ನದೆ ಸರ್ವ ಜನಾಂಗದವರು ಪಾಲ್ಗೊಳ್ಳುವ ಕಾರ್ಯಕ್ರಮ ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಪೀಠದ ಶರನ್ನವರಾತ್ರಿ ದಸರಾ ಮಹೋತ್ಸವ. ಇದರಲ್ಲಿ ಸರ್ವರಿಗೂ ಜ್ಞಾನದಾಸೋಹದ ಜೊತೆಗೆ ನಿತ್ಯ ಅನ್ನದಾಸೋಹ ನಡೆಯಲಿದ್ದು; ಭಾವೈಕ್ಯ, ಸಾಮರಸ್ಯದ ವಾತಾವರಣಕ್ಕೂ ದಸರಾ ಸಮಾವೇಶ ಮುನ್ನುಡಿ ಬರೆಯಲಿದೆ. ಈ ವರ್ಷ ಗದಗ ಜಿಲ್ಲೆಯ  ಲಕ್ಷ್ಮೇಶ್ವರ ಪಟ್ಟಣದಲ್ಲಿ ಅ. 10ರಿಂದ 19ರ ವರೆಗೆ ನಡೆಯಲಿರುವ ದಸರಾ ಮಹೋತ್ಸವದ ಪರಿಚಯಾತ್ಮಕ ಬರಹ ಇಲ್ಲಿದೆ.

ಭಾರತವನ್ನು ವಿಶ್ವಗುರು ಎಂದು ಜಗತ್ತು ಗೌರವಿಸಲು ಮುಖ್ಯ ಕಾರಣ ಇಲ್ಲಿನ ಅಧ್ಯಾತ್ಮಶಕ್ತಿ ಹಾಗೂ ಸಾಂಸ್ಕೃತಿಕ ವೈಭವ. ಈ ಎರಡನ್ನೂ ಒಳಗೊಂಡಿರುವ ಬಹುದೊಡ್ಡ ಉತ್ಸವ ದಸರಾ. ಮೈಸೂರಿನಲ್ಲಿ ನಡೆಯುವ ಅರಮನೆ ದಸರಾ ವಿಶ್ವವಿಖ್ಯಾತ ಮನ್ನಣೆ ಪಡೆದುಕೊಂಡಿದೆ. ಅರಮನೆ ದಸರಾದಂತೆ ನಾಡಿನ ಕಲೆ, ಸಂಸ್ಕೃತಿ, ಧರ್ವಚರಣೆಯ ದ್ಯೋತಕವಾಗಿ ನಡೆಯುವ ಗುರುಮನೆ ದಸರಾ ಕೂಡ ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಹೆಚ್ಚಿಸಿದೆ. ಗುರುಮನೆ ದಸರಾಕ್ಕೆ ಹೆಸರಾಗಿರುವ ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಪೀಠದ ಶರನ್ನವರಾತ್ರಿ ದಸರಾ ದರ್ಬಾರ್ ಮಹೋತ್ಸವವು ಈ ವರ್ಷ ಗದಗ ಜಿಲ್ಲೆಯ ಲಕ್ಷೆ್ಮೕಶ್ವರ ಪಟ್ಟಣದಲ್ಲಿ ಇದೇ ಅ. 10ರಿಂದ 19ರ ವರೆಗೆ ನಡೆಯಲಿದೆ.

ನವರಾತ್ರಿ ಎಂದರೆ ಶಕ್ತಿಯ ಆರಾಧನೆಗೆ ಮೀಸಲು. ಒಂಬತ್ತು ದಿನಗಳ ಕಾಲ ಆದಿಶಕ್ತಿಯನ್ನು ವಿವಿಧ ಅವತಾರಗಳಲ್ಲಿ ಪೂಜಿಸುವ ಮೂಲಕ ದಿಗ್ವಿಜಯವನ್ನು ಸಾಧಿಸಿ ಹತ್ತನೆಯ ದಿವಸ ವಿಜಯೋತ್ಸವವನ್ನು ಆಚರಿಸುವ ಸಂಕೇತ. ಮಹಾಭಾರತವನ್ನು ಮೊದಲ್ಗೊಂಡು ಪುರಾತನ ಕಾಲದಿಂದಲೂ ನವರಾತ್ರಿ ಆಚರಣೆಯ ಉಲ್ಲೇಖವನ್ನು ಕಾಣುತ್ತೇವೆ. ನವರಾತ್ರಿ ಉತ್ಸವದ ಸಂದೇಶವೆಂದರೆ; ದುಷ್ಟರ ಸಂಹರಿಸಿ ಅಧರ್ಮದ ನಾಶ ಮಾಡುವುದು; ಶಿಷ್ಟರ ರಕ್ಷಣೆಯೊಂದಿಗೆ ಧರ್ಮವನ್ನು ಕಾಪಾಡುವುದು.

ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸುವ ವೀರಶೈವ ಧರ್ಮದಲ್ಲಿ ಶಿವನಷ್ಟೇ ಆದ್ಯತೆಯನ್ನು ಶಕ್ತಿಗೂ ಕೂಡ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಶ್ರೀಮದ್ ರಂಭಾಪುರಿ ಮಹಾಪೀಠವು ಶಕ್ತಿಯ ಆರಾಧನೆಗೆ ಮೀಸಲಾಗಿರುವ ನವರಾತ್ರಿ ಉತ್ಸವವನ್ನು ವಿಭಿನ್ನವಾಗಿ ಆಚರಿಸಿಕೊಂಡು ಬಂದಿದೆ. ಈ ಹಿಂದೆ ಕೇವಲ ಪೀಠದ ಪರಿಸರದಲ್ಲಿ ಆಚರಿಸಲ್ಪಡುತ್ತಿದ್ದ ದಸರಾ ಮಹೋತ್ಸವವು 118ನೆಯ ಜಗದ್ಗುರು ಶ್ರೀ ಶಿವಾನಂದ ರಾಜೇಂದ್ರ ಭಗವತ್ಪಾದರ ಕಾಲದಲ್ಲಿ ನಾಡಿನ ವಿವಿಧ ಪ್ರಾಂತಗಳಲ್ಲಿ ಆಚರಿಸುವ ಪರಿಪಾಠ ಆರಂಭವಾಯಿತು. 1934ರಲ್ಲಿ ಮೈಸೂರು ಮಹಾರಾಜರ ಕೋರಿಕೆಯಂತೆ ಸ್ವತಃ ಜಗದ್ಗುರುಗಳೇ ಮೈಸೂರು ದಸರಾಕ್ಕೆ ಚಾಲನೆ ನೀಡಿ ಆಶೀರ್ವದಿಸಿದರು. ಅಂದಿನಿಂದ ನಾಡಿನ ಹಲವಾರು ಪ್ರಾಂತಗಳಲ್ಲಿ ದಸರಾ ದರ್ಬಾರ್ ನಡೆಯುವ ಮೂಲಕ ಆಯಾಯ ಪ್ರಾಂತದ ಸಾಂಸ್ಕೃತಿಕ ಇತಿಹಾಸ ಶ್ರೀಮಂತಗೊಂಡಿದೆ.

ಶ್ರೀಪೀಠದ ಪರಂಪರೆಯಲ್ಲಿ 121ನೆಯ ಜಗದ್ಗುರುಗಳಾಗಿರುವ ಪ್ರಸ್ತುತ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಕಾಲದಲ್ಲಿ ದಸರಾ ಮಹೋತ್ಸವಕ್ಕೆ ಹೊಸ ಮೆರಗು ಬಂದಿದೆ. ಕಳೆದ ಇಪ್ಪತ್ತಾರು ವರ್ಷಗಳಿಂದ ವಿಭಿನ್ನವಾಗಿ ದಸರಾ ದರ್ಬಾರ್ ನಡೆಸಿಕೊಂಡು ಬಂದಿರುವ ಜಗದ್ಗುರುಗಳ ಇಪ್ಪತ್ತೇಳನೆಯ ದಸರಾ ಮಹೋತ್ಸವವು ಈ ಬಾರಿ ಗದಗ ಜಿಲ್ಲೆಯ ಲಕ್ಷೆ್ಮೕಶ್ವರದಲ್ಲಿ ನಡೆಯಲಿದೆ.

ಧರ್ಮಜಾಗೃತಿ, ಸಂಸ್ಕೃತಿಯ ಪೋಷಣೆ, ಸಾಹಿತ್ಯದ ಅಭಿವೃದ್ಧಿ, ಕೃಷಿಗೆ ಪ್ರೇರಣೆ, ಸಾಮಾಜಿಕ ಕಳಕಳಿ, ಶೈಕ್ಷಣಿಕ ಆಸಕ್ತಿ – ಹೀಗೆ ಎಲ್ಲ ಕ್ಷೇತ್ರಗಳಿಗೆ ಪ್ರಾಮುಖ್ಯತೆಯನ್ನು ನೀಡಿ ರಾಷ್ಟ್ರಭಕ್ತಿಯನ್ನು ಬೆಳೆಸುವ ಉದಾತ್ತ ಚಿಂತನೆಯೊಂದಿಗೆ ರೂಪಿಸಲ್ಪಡುವ ರಂಭಾಪುರಿ ಪೀಠದ ಶರನ್ನವರಾತ್ರಿ ದಸರಾ ಮಹೋತ್ಸವವು ನವರಾತ್ರಿಗೆ ಹೊಸ ಅರ್ಥವಂತಿಕೆ ತಂದು ಕೊಡಲಿದೆ.

ಸಾಮಾಜಿಕ ಬಲವರ್ಧನೆಗೆ ವೇದಿಕೆ

ಧಾರ್ವಿುಕ ಪರಂಪರೆಯ ಹಿನ್ನೆಲೆಯಲ್ಲಿ ನಡೆಯುವ ದಸರಾ ಮಹೋತ್ಸವವು ಸಾಮಾಜಿಕ ಬಲವರ್ಧನೆಗೂ ನಾಂದಿಯಾಗಲಿದೆ. ಹತ್ತು ದಿನಗಳ ಕಾಲ ನಡೆಯುವ ಧರ್ಮ ಸಮಾವೇಶದಲ್ಲಿ ಆ ಭಾಗದ ಜ್ವಲಂತ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಯತ್ನ ನಡೆಯಲಿದೆ. ಕೃಷಿ, ಸಾಹಿತ್ಯ, ಸಂಗೀತ, ಕಲೆ – ಹೀಗೆ ವಿವಿಧ ಕ್ಷೇತ್ರದ ಗಣ್ಯರಿಗೆ ವೇದಿಕೆಯನ್ನು ಕಲ್ಪಿಸಿಕೊಡುವುದರ ಜೊತೆಗೆ ಪ್ರತಿಭಾವಂತರಿಗೆ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸುವುದರಿಂದ ಸಾಧಕರ ಆತ್ಮವಿಶ್ವಾಸ ವೃದ್ಧಿಯ ಜೊತೆಗೆ ಇತರರಿಗೂ ಪ್ರೇರಣೆ ನೀಡಿದಂತಾಗುತ್ತದೆ.

 

ಪರಂಪರೆಯ ಅನಾವರಣ

ಸುದೀರ್ಘ ಇತಿಹಾಸವಿರುವ ರಂಭಾಪುರಿ ಪೀಠದ ದಸರಾ ಮಹೋತ್ಸವಕ್ಕೆ ಧಾರ್ವಿುಕ ಮತ್ತು ಸಾಂಸ್ಕೃತಿಕ ಹಿರಿಮೆಯನ್ನು ಹೆಚ್ಚಿಸಿದ ಕೀರ್ತಿ ಮಹಾತಪಸ್ವಿ ಲಿಂಗೈಕ್ಯ ಜಗದ್ಗುರು ಶ್ರೀ ವೀರಗಂಗಾಧರ ಭಗವತ್ಪಾದರಿಗೆ ಸಲ್ಲುತ್ತದೆ. ಲಕ್ಷ್ಮೇಶ್ವರವು ಗಂಗಾಧರ ಜಗದ್ಗುರುಗಳ ತಪೋಭೂಮಿಯಾಗಿದ್ದು, ಇಲ್ಲಿನ ಮುಕ್ತಿಮಂದಿರದಲ್ಲಿ ಅವರ ದಿವ್ಯ ಗದ್ದುಗೆಯಿದೆ. ನ ಭೂತೋ ನ ಭವಿಷ್ಯತಿ ಎಂಬಂತೆ ಅವರ ಕಾಲದಲ್ಲಿ 1008 ಅಡ್ಡಪಲ್ಲಕ್ಕಿ ಮಹೋತ್ಸವವನ್ನು ಮಾಡುವ ಮೂಲಕ ಇದೇ ಲಕ್ಷೆ್ಮೕಶ್ವರದಲ್ಲಿ ದಾಖಲೆ ನಿರ್ವಿುಸಿದ್ದರು. ಜೊತೆಗೆ ಜಗದ್ಗುರು ರೇಣುಕಾಚಾರ್ಯರ ಇತಿಹಾಸದಲ್ಲಿ ಉಲ್ಲೇಖಗೊಂಡಿರುವ ತ್ರಿಕೋಟಿ ಲಿಂಗಸ್ಥಾಪನೆ ಮಾಡಲು ಸಂಕಲ್ಪ ಮಾಡಿ ಆ ಕಾರ್ಯಕ್ಕೂ ಚಾಲನೆ ನೀಡಿದ್ದರು. ಇಂತಹ ಪುಣ್ಯಭೂಮಿಯಲ್ಲಿ ಗಂಗಾಧರ ಜಗದ್ಗುರುಗಳು ಸ್ವತಃ ದಸರಾ ದರ್ಬಾರ್ ನಡೆಸಿದ್ದರು.

ಈಗ ಪ್ರಸ್ತುತ ಜಗದ್ಗುರುಗಳ ದಸರಾ ಮಹೋತ್ಸವ ಇಲ್ಲಿಯೇ ನಡೆಯುತ್ತಿರುವುದರಿಂದ ಇತಿಹಾಸ ಮರುಕಳಿಸಿದಂತಾಗಿದೆ. ಲಕ್ಷೆ್ಮೕಶ್ವರವು ಐತಿಹಾಸಿಕ ಸ್ಥಳ. ಪ್ರಾಚೀನ ಕಾಲದಲ್ಲಿ ಈ ಊರಿಗೆ ಪುಲಿಗೆರೆ ಎಂಬ ಹೆಸರಿತ್ತು. ಇಲ್ಲಿ ಅತ್ಯಂತ ಪುರಾತನ ಸೋಮೇಶ್ವರ ದೇವಾಲಯವಿದೆ. ಈ ದೇವಾಲಯವು ಇತ್ತೀಚೆಗೆ ಸಂಪೂರ್ಣ ಜೀಣೋದ್ಧಾರಗೊಂಡಿದೆ.

ಹತ್ತು ದಿನಗಳ ಧರ್ಮಯಜ್ಞ

ಪೀಠದ ವಾರ್ಷಿಕ ಕಾರ್ಯಕ್ರಮಗಳಲ್ಲೇ ಅತ್ಯಂತ ಆಕರ್ಷಕ ಮತ್ತು ಬೃಹತ್ ಕಾರ್ಯಕ್ರಮ ಶರನ್ನವರಾತ್ರಿ ದಸರಾ ಮಹೋತ್ಸವ. ಅ. 10ರಿಂದ ಆರಂಭವಾಗಿ ಹತ್ತು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಪಾರಂಪರಿಕವಾದ ಹತ್ತುಹಲವು ಧಾರ್ವಿುಕ ಆಚರಣೆಗಳು ನಿರಂತರವಾಗಿ ನಡೆಯಲಿವೆ. ಪ್ರತಿನಿತ್ಯ ಮುಂಜಾನೆ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ಸಂಜೆ ಧರ್ಮಸಮಾವೇಶ ನಡೆಯಲಿದೆ. ಪ್ರತಿನಿತ್ಯ ಧರ್ಮಸಮಾವೇಶದ ನಂತರ ಶಿವಾಚಾರ್ಯರು, ಪೀಠದ ಸಿಬ್ಬಂಧಿಗಳು, ಪಟ್ಟದ ಆನೆ ಹಾಗೂ ವಿವಿಧ ಸಂಘಟನೆಗಳ ಕಾಯಕರ್ತರು ಜಗದ್ಗುರುಗಳಿಗೆ ನಜರ್ ಸಮರ್ಪಣೆ ಮಾಡಲಿದ್ದಾರೆ.

ಸೆ. 19ರಂದು ವಿಜಯದಶಮಿಯ ದಿವಸ ಮುಂಜಾನೆ ಸ್ವತಃ ಜಗದ್ಗುರುಗಳೇ ಅಗ್ರೋದಕವನ್ನು ಹೊತ್ತು ತಂದು ಮಹಾಪೂಜೆ ನೆರವೇರಿಸುತ್ತಾರೆ. ಅಂದು ಮಧ್ಯಾಹ್ನ ಮಂಗಲವಾದ್ಯಗಳೊಂದಿಗೆ ಜಗದ್ಗುರುಗಳನ್ನು ಅಡ್ಡಪಲ್ಲಕ್ಕಿಯಲ್ಲಿ ಶಮೀಮಂಟಪದವರೆಗೆ ಕರೆತರಲಾಗುತ್ತದೆ. ಈ ಮೂಲಕ ಸೀಮೋಲ್ಲಂಘನೆ ಮಾಡುವ ಜಗದ್ಗುರುಗಳು ಬನ್ನಿವೃಕ್ಷಕ್ಕೆ ಪೂಜೆ ಸಲ್ಲಿಸಿ ಭಕ್ತರಿಗೆ ಬನ್ನಿಬಂಗಾರವನ್ನು ನೀಡಿ ಹರಸಲಿದ್ದಾರೆ. ಸಂಜೆ ಮಾನವಧರ್ಮ ಮಹಾಮಂಟಪದಲ್ಲಿ ವೀರಸಿಂಹಾಸನಾರೋಹಣ ಮಾಡಲಿರುವ ಜಗದ್ಗುರುಗಳು ಶಾಂತಿ ಸಂದೇಶವನ್ನು ಅನುಗ್ರಹಿಸಲಿದ್ದಾರೆ. ಪೀಠದ ಪರಂಪರೆಯಂತೆ ಅಂತಿಮವಾಗಿ ಕುಶಾಲು ತೋಪನ್ನು ಹಾರಿಸುವ ಮೂಲಕ ಹತ್ತು ದಿನಗಳ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

- Advertisement -

Stay connected

278,645FansLike
573FollowersFollow
611,000SubscribersSubscribe

ವಿಡಿಯೋ ನ್ಯೂಸ್

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ...

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​ ಬೆಲ್ಟ್​ ಹಾಕಿಕೊಂಡಿರುವುದಿಲ್ಲ...ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ....

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ ಹರಿಬಿಡುವ ಮೂಲಕ ಸೋದರ ರಮೇಶ್​ ಜಾರಕಿಹೊಳಿಗೆ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...