ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಧರ್ಮವಾಗಲಿ

bhr balehonur

ಬಾಳೆಹೊನ್ನೂರು:ಮನುಷ್ಯ ಸುಖ, ಶಾಂತಿ ಮತ್ತು ನೆಮ್ಮದಿಯಿಂದ ಬದುಕಬೇಕಾದರೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಧರ್ಮವಾಗಬೇಕು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ರಂಭಾಪುರಿ ಪೀಠದ ಯಾತ್ರಿ ನಿವಾಸದ ಹಿಂಭಾಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ತೆಂಗಿನ ಸಸಿ ನೆಟ್ಟು ಪರಿಸರ ಸಂರಕ್ಷಣೆ ಚಿಂತನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಮಾನವ ಜನಾಂಗದ ಅಳಿವು-ಉಳಿವು ಪರಿಸರ ಸಂರಕ್ಷಣೆಯಲ್ಲಿ ಅಡಗಿದೆ. ಮನುಷ್ಯನ ವೈಯಕ್ತಿಕ ಹಿತಾಸಕ್ತಿಗಾಗಿ ಕಾಡು ನಾಶವಾಗುತ್ತಿದೆ. ಪರಿಸರ ಸಂರಕ್ಷಣೆಯತ್ತ ಆಸಕ್ತಿಯಿಲ್ಲದ ಕಾರಣ ಜೀವಸಂಕುಲ ಬಹಳಷ್ಟು ನೋವುಗಳನ್ನು ಅನುಭವಿಸಬೇಕಾಗಿದೆ. ಜನಸಂಖ್ಯೆ ಹೆಚ್ಚಳ, ಕೃಷಿಗಾಗಿ ಮತ್ತು ಕೈಗಾರಿಕೆಗಳ ಸ್ಥಾಪನೆಗಾಗಿ ಅರಣ್ಯ ಪ್ರದೇಶ ನಾಶವಾಗುತ್ತಿದೆ ಎಂದರು.
ಅರಣ್ಯ ನಾಶದಿಂದ ಸಕಾಲಕ್ಕೆ ಮಳೆ ಬರುತ್ತಿಲ್ಲ. ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ. ಊರಿಗೊಂದು ಶಾಲೆ ಮನೆಗೊಂದು ಮರ ನೆಡಬೇಕಾದ ಸದುದ್ದೇಶ ಎಲ್ಲರಲ್ಲೂ ಬೆಳೆಯಬೇಕಿದೆ. ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಅರಿವು ಉಂಟುಮಾಡುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.
ಪರಿಸರಕ್ಕೆ ಮಾರಕವಾದ ರಾಸಾಯನಿಕ ಗೊಬ್ಬರದ ಬದಲಾಗಿ ನೈಸರ್ಗಿಕ ಗೊಬ್ಬರ ಬಳಸುವುದರಿಂದ ಭೂಮಿಯ ಫಲವತ್ತತೆ ಉಳಿಯುತ್ತದೆ. ಪ್ರತಿವರ್ಷ ಜೂ.5ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಿ ಕೈಬಿಡುವುದಲ್ಲ. ನಿರಂತರ ಪರಿಸರ ಸಂರಕ್ಷಣೆ ಬಗ್ಗೆ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಗುಳೇದಗುಡ್ಡದ ಅಭಿನವ ಕಾಡಸಿದ್ಧೇಶ್ವರ ಶ್ರೀ, ದೋಟಿಹಾಳ ಚಂದ್ರಶೇಖರ ಶ್ರೀ, ಗುರುಕುಲ ಕುಲಪತಿ ಸಿದ್ಧಲಿಂಗಯ್ಯ ಶಾಸಿ, ಕುಮಾರಸ್ವಾಮಿ ಹಿರೇಮಠ, ಚನ್ನವೀರಯ್ಯ ಚಿಗರಿಮಠ, ಸಿಂದಗಿ ಹಿರೇಮಠದ ಶಾಂತವೀರಸ್ವಾಮಿ, ಗುಂಡೇನಹಳ್ಳಿ ಕುಮಾರ, ಶಿವಾನಂದ ಇತರರಿದ್ದರು.

Share This Article

ನೀವಿದನ್ನು ನಿತ್ಯವೂ ಚಾಚೂ ತಪ್ಪದೇ ಅನುಸರಿಸಿದರೆ ನೀವು ಖಂಡಿತ ಶ್ರೀಮಂತರಾಗ್ತೀರಿ! Rich Person

ಇಂದು ಪ್ರತಿಯೊಬ್ಬರು ಶ್ರೀಮಂತರಾಗಲು ( Rich Person ) ಬಯಸುತ್ತಾರೆ. ತಾವು ದುಡಿದ ಹಣವನ್ನು ಸರಿಯಾದ…

ಈ ಸಲಹೆಗಳನ್ನು ಪಾಲಿಸಿದ್ರೆ..ಮಾತ್ರೆ ನುಂಗದೆ ಕ್ಷಣ ಮಾತ್ರದಲ್ಲೇ ತಲೆ ನೋವು ಮಾಯ! Headache Health Tips

 ಬೆಂಗಳೂರು: ಇಂದಿನ ಬಿಡುವಿಲ್ಲದ ಜೀವನದಲ್ಲಿ ತಲೆನೋವು ( Headache Health Tips ) ಸಾಮಾನ್ಯವಾಗಿದೆ. ಈ…

ಪೇರಲೆ ಹಣ್ಣಿನಲ್ಲಿ ಮಾತ್ರವಲ್ಲ ಎಲೆಗಳಲ್ಲೂ ಇದೆ ಔಷಧೀಯ ಗುಣ; ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಎಲೆಗಳನ್ನು ಜಗಿದ್ರೆ ಸಾಕು.. Guava Leaves Benefits

ಬೆಂಗಳೂರು:  ಸೀಸನಲ್ ಹಣ್ಣುಗಳಲ್ಲಿ ಪೇರಲ ಕೂಡ ಒಂದು. ಪೇರಲ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದಕ್ಕೇ…