ಗಂಡು ಮಗುವಿಗೆ ಜನ್ಮ ನೀಡಿದ ನಟಿ ರಂಭಾ

ನಟಿ ರಂಭಾ ಮತ್ತು ಪತಿ ಇಂದ್ರನ್ ಪದ್ಮನಾಥನ್​​​ ದಂಪತಿ ಮೂರನೇ ಮಗುವನ್ನು ಸ್ವಾಗತಿಸಿದ್ದು, ಸೆಪ್ಟೆಂಬರ್‌ 23ರಂದು ಗಂಡು ಮಗುವಿಗೆ ರಂಭಾ ಜನ್ಮ ನೀಡಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದು, ನಾವು ಗಂಡು ಮಗುವಿನ ಜನ್ಮದೊಂದಿಗೆ ಆಶೀರ್ವಾದ ಪಡೆದಿದ್ದು, ಸೆಪ್ಟೆಂಬರ್‌ 23ರಂದು ಮೌಂಟ್‌ ಸಿನಾಯಿ ಆಸ್ಪತ್ರೆಯಲ್ಲಿ ಮಗು ಜನಿಸಿದೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯದಿಂದ ಇದ್ದಾರೆ ಎಂದು ಪತಿ ಇಂದ್ರನ್​ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವ ರಂಭಾ ಬೇಬಿ ಬಂಪ್‌ ಫೋಟೊ ಶೇರ್‌ ಮಾಡಿ ಹ್ಯಾಪಿ 9 ಮಂತ್‌ ಪಿಕ್‌(Happy 9th month pic) ಎಂದು ಬರೆದುಕೊಂಡಿದ್ದರು. ಆನಂತರವೇ ರಂಭಾ ಮೂರನೇ ಮಗುವಿಗೆ ತಾಯಿಯಾಗುತ್ತಿರುವ ಕುರಿತು ಸುದ್ದಿಯಾಗಿತ್ತು.

2010ರಲ್ಲಿ ಕೆನಡಿಯನ್ ಮೂಲದ ಉದ್ಯಮಿ ಇಂದ್ರನ್​ ಅವರನ್ನು ಮದುವೆಯಾದ ರಂಭಾ, ಲಾನ್ಯ ಮತ್ತು ಸಾಶಾ ಎಂಬಿಬ್ಬರು ಪುತ್ರಿಯರಿಗೆ ಜನ್ಮ ನೀಡಿದ್ದರು. ಇದೀಗ ಮೂರನೇ ಮಗು ಗಂಡಾಗಿದೆ.

ಜೂನಿಯರ್‌ ಎನ್‌ಟಿಆರ್‌ ಜತೆಗಿನ ತೆಲುಗಿನ ಯಮಗೊಂಡ ಸಿನಿಮಾದಲ್ಲಿ ರಂಭಾ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. (ಏಜೆನ್ಸೀಸ್)