ಮೂರನೇ ಮಗುವಿನ ಸೀಮಂತದಲ್ಲಿ ‘ರಂಭಾ’ ಸ್ಟೆಪ್

ಪಂಚ ಭಾಷಾ ತಾರೆ, ಸೌತ್​ ಇಂಡಿಯಾದ ಲಕ್ಕಿ ಹೀರೋಯಿನ್ ಎಂದೇ ಕರೆಯಲ್ಪಡುವ ರಂಭಾ ಈಗ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೌದು, ಈಗಾಗಲೇ ಇಬ್ಬರು ಮುದ್ದಾದ ಹೆಣ್ಣು ಮಕ್ಕಳನ್ನು ಪಡೆದಿರುವ ರಂಭಾ ಮೂರನೇ ಮಗುವಿಗೆ ಜನ್ಮ ನೀಡಲು ಸಿದ್ಧರಾಗಿದ್ದು, ಸೀಮಂತ ಕಾರ್ಯಕ್ರಮದಲ್ಲಿ ಸಖತ್​ ಸ್ಟೆಪ್​ ಹಾಕಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಆಂಧ್ರದ ಈ ಚೆಲುವೆ ಸದ್ಯ ಸಿನಿಮಾದಿಂದ ದೂರ ಉಳಿದಿದ್ದು, ಪತಿ ಇಂದ್ರಕುಮಾರ್​ ಜತೆ ಕೆನಡಾದಲ್ಲಿ ಸೆಟಲ್​ ಆಗಿದ್ದಾರೆ. 40 ವರ್ಷ ದಾಟಿದರೂ ರಂಭಾ ಅದೇ ಚಾರ್ಮ್​ ಉಳಿಸಿಕೊಂಡಿದ್ದು, ಅಪರೂಪಕ್ಕೊಮ್ಮೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ನಿನ್ನೆ ಕೆನಡಾದಲ್ಲಿ ನಡೆದ ಅದ್ಧೂರಿ ಸೀಮಂತ ಸಮಾರಂಭದ ಝಲಕ್​ ಇಲ್ಲಿದೆ:

 

View this post on Instagram

#rambhababy #baby #babyshower #rambhababyshower

A post shared by RambhaIndrakumar💕 (@rambhaindran_) on