ದೇವಸ್ಥಾನಗಳು ಸಂಸ್ಕಾರ, ಜಾಗೃತಿ ಮೂಡಿಸುವ ತಾಣಗಳು: ರಂಭಾಪುರಿ ಜಗದ್ಗುರುಗಳು

ವಿಜಯವಾಣಿ ಸುದ್ದಿಜಾಲ ಗದಗ
ಸಂತೃಪ್ತಿ ಸಮೃದ್ಧಿಗಾಗಿ ಧರ್ಮಾಚರಣೆ ಬೇಕು. ವರ್ತಮಾನ ಮತ್ತು ಭವಿಷ್ಯತ್ತಿಗೆ ಇತಿಹಾಸದ ಅರಿವು ಮುಖ್ಯ. ದೇವಸ್ಥಾನಗಳು ಜನಮನದಲ್ಲಿ ಸಂಸ್ಕಾರ ಮತ್ತು ಜಾಗೃತಿ ಉಂಟು ಮಾಡುವ ಪವಿತ್ರ ತಾಣ. ದೇವಸ್ಥಾನಗಳು ಭಾರತೀಯ ಸಂಸತಿಯ ಶ್ರದ್ಧಾ ಕೇಂದ್ರಗಳಾಗಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಗುರುವಾರ ಬೆಟಗೇರಿಯ ವೀರಭದ್ರೇಶ್ವರ ಹಾಗೂ ಪರ್ವತ ಮಲ್ಲೇಶ್ವರ ದೇವಸ್ಥಾನದ ಶತಮಾನೋತ್ಸವ ಮತ್ತು ಜಾತ್ರಾ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು,
ಸತ್ಯದ ತಳಹದಿಯ ಮೇಲೆ ಆರೋಗ್ಯ ರ್ಪೂಣ ಸಮಾಜ ನಿರ್ಮಾಣಗೊಳ್ಳುವ ಅವಶ್ಯಕತೆಯಿದೆ. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಸರ್ವಕಾಲಕ್ಕೂ ಅನ್ವಯಿಸುತ್ತವೆ. ಧರ್ಮ ಸಂಸತಿ ಮತ್ತು ಪರಂಪರೆ ಉಳಿಸಬೇಕಾದ ಅವಶ್ಯಕತೆಯಿದೆ. ಸಂಪತ್ತೊಂದೇ ಸುಖದ ಮೂಲವಲ್ಲ. ಅದರೊಂದಿಗೆ ಆಧ್ಯಾತ್ಮ ಚಿಂತನದ ಅರಿವು ಮುಖ್ಯವಾಗಿದೆ. ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಬದುಕು ಪರಿಶುದ್ಧಗೊಳಿಸುವುದು ಮುಖ್ಯ. ನಾಗರೀಕತೆ ಹೆಸರಿನಲ್ಲಿ ಸಂಸತಿ ನಾಶಗೊಳ್ಳಬಾರದು. ಯುವ ಜನಾಂಗ ಈ ದೇಶದ ಆಸ್ತಿ ಮತ್ತು ಶಕ್ತಿಯಾಗಿದ್ದಾರೆ. ಅವರಿಗೆ ಯೋಗ್ಯ ಮಾರ್ಗದರ್ಶನ ಮತ್ತು ಸಂಸ್ಕಾರ ಕೊಟ್ಟರೆ ದೇಶದ ಸಂಪತ್ತಾಗುತ್ತಾರೆ ಎಂದರು.
ಸೂಡಿ ಜೂಕ್ತಿ ಹಿರೇಮಠದ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಮಾತನಾಡಿ, ಧರ್ಮ ಪ್ರತಿಷ್ಠಾಪನೆಗೆ ಯುಗಗಳಲ್ಲಿ ಒಬ್ಬರು ಉದ್ಭವಿಸುತ್ತಾರೆ. ಅದರಲ್ಲಿ ವೀರಭದ್ರೇಶ್ವರರೂ ಒಬ್ಬರು. ಶಿವನ ಸಂಸತಿ ಆರಾಧನೆಯೇ ನಮ್ಮ ಪರಂಪರೆ. ವೀರಭದ್ರ ದೇವರು ಕೂಡ ಶಿವನ ಸಂಸತಿ ಭಾಗ. ಧರ್ಮ ನಿಂದನೆ ಮಾಡಿದವರಿಗೆ ಶಿಕ್ಷೆ ನೀಡುವ ಅಧಿಕಾರ ವೀರಭದ್ರನಿಗೆ ಇದೆ. ಭಾರತ ದೇವಾಲಯಗಳ ನಾಡು. ನೂರು ವರ್ಷದ ಹಿಂದೆ ಶಹಪೂರಪೇಟೆಯಲ್ಲಿ ಹಿಂದಿನ ಐತಿಹಾಸಿಕ ಪುರುಷರು ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಇದು ಭಾವೈಕ್ಯತೆಯ ದೇವಸ್ಥಾನ. ಇಲ್ಲಿ ಎಲ್ಲ ಸಮುದಾಯದ ಭಕ್ತರಿದ್ದಾರೆ. ಎಲ್ಲರೂ ಒಂದೇ ಧರ್ಮದ ಭಾಗವಾಗಿದ್ದಾರೆ. ಧರ್ಮವು ಸಂಸತಿ ಬೆಳೆಸುತ್ತದೆ. ರಂಭಾಪುರಿ ಕ್ಷೇತ್ರದ ಗೋತ್ರಪುರಷನೇ ವೀರಭದ್ರ ದೇವರು ಎಂದು ಸೂಡಿ ಜೂಕ್ತಿ ಹಿರೇಮಠ ಶ್ರೀಗಳು ಹೇಳಿದರು.
ರಾಣೆಬೆನ್ನೂರು ಗಚ್ಚಿನಮಠದ ಶಿವಯೋಗಿ ಶಿವಾಚಾರ್ಯ ಶ್ರೀಗಳು ಮಾತನಾಡಿ, ಹಿಂದಿನ ಹಿರಿಯರ ಸ್ಮರಣೆಲ್ಲಿ ವೀರಭದ್ರೇಶ್ವರ ಶತಮಾನೋತ್ಸ ನಡೆಯುತ್ತಿದೆ. ಅಂದಿನ ಹಿರಿಯರ ಶ್ರಮದ ಫಲವೇ ಇಂದಿನ ಶತಮಾನೋತ್ಸವ ಸಮಾರಂಭ. ದಕ್ಷಭ್ರಹ್ಮನ ಅಹಂಕಾರ ಶಮನ ಮಾಡಿ, ಭಕ್ತಿ ಮಾರ್ಗಕ್ಕೆ ಕರೆದುಕೊಂಡು ಬಂದವರೇ ವೀರಭದ್ರ ಸ್ವಾಮಿ. ಪೌರಾಣಿಕ ಹಿನ್ನೆಲೆ ಇರುವ ವೀರಭದ್ರೇಶ್ವರನ ಮಾರ್ಗದಲ್ಲಿ ಜೀವನ ನಡೆಸಿದರೆ ಉತ್ತಮ ಸಂಸ್ಕಾರ ಸಿಗುತ್ತದೆ ಎಂದು ಶಿವಯೋಗಿ ಶ್ರೀಗಳು ಹೇಳಿದರು.
ಅಡ್ನೂರು ಮಠದ ಶ್ರೀಗಳು ಮಾತನಾಡಿ, ಶಹಪೂರಪೇಟೆ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ವೀರಭದ್ರೇಶ್ವರ ಕೃಪೆಯಿಂದ ಭಕ್ತರ ಮನೆ ಬೆಳಗಲಿ. ಶ್ರೀಗಳ ಸಾನ್ನಿಧ್ಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿದೆ ಎಂದರು.
ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕ ಮಾತನಾಡಿ, ವೀರಭದ್ರ ಪರಂಪರೆ ಕುರಿತು 2014 ರಲ್ಲಿ ರಂಭಾಪುರಿ ಜಗದ್ಗುರು ಅವರಿಂದ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಿದ್ದರು. ವಿಶ್ವದ ಅನೇಕ ದೇಶದ ವಿದ್ವಾಂಸರು ಈ ಸಂಕಿರಣದಲ್ಲಿ ಭಾಗವಹಿಸಿದ್ದರು. ಅಂತಹ ಮಹಾನ್​ ಕಾರ್ಯ ಜಗದ್ಗುರು ಪೀಠಕ್ಕೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ರಂಭಾಪುರಿ ಜಗದ್ಗುರುಗಳನ್ನು ಸಾರೋಟ ಮೆರವಣಿಗೆ, ರ್ಪೂಣ ಕುಂಭದೊಂದಿಗೆ ವೇದಿಕೆಗೆ ಕರೆತರಲಾಯಿತು. ಕಾರ್ಯಕ್ರಮದಲ್ಲಿ “ಗುಗ್ಗುಳ ಪ್ರೀಯ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಸಾಮೂಹಿಕ ವಿವಾಹ ಜರುಗಿತು. ಭಕ್ತರಿಗೆ, ದಾನಿಗಳಿಗೆ ಜಗದ್ಗುರುಗಳು ಸನ್ಮಾನಿಸಿದರು.

ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ, ರವಿಕುಮಾರ ಪಟ್ಟಣಶೆಟ್ಟರ, ಗಂಗಾಧರಪ್ಪ ಕೋಟಿ, ಕರಬಸಪ್ಪ ಹಂಚಿನಾಳ, ಪ್ರಭು ಪವಾಡದ, ರವೀಂದ್ರ ಕಲಬುಗಿರ್, ಪ್ರಭುಸ್ವಾಮಿ ಹಲವರು ಇದ್ದರು.

Share This Article

ಎಚ್ಚರ, ದೇಹ ದಣಿದಿದ್ರೂ ನಿದ್ದೆ ಬರ್ತಿಲ್ಲವೇ? ಸಿರ್ಕಾಡಿಯನ್ ಸಿಂಡ್ರೋಮ್​ ಇರಬಹುದು!!

ಬೆಂಗಳೂರು: ದೇಹ ದಣಿದಿರುತ್ತದೆ. ಆದರೆ ನಿದ್ರೆ ಬರುತ್ತಿಲ್ಲ. ಇದಕ್ಕೆ ದೇಹದ ಸಿರ್ಕಾಡಿಯನ್ ಲಯ ತಪ್ಪಿರುವುದು, ಅತಿಯಾದ…

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…