ಸತ್ಯದ ತಳಹದಿಯ ಮೇಲೆ ಸಮಾಜ ಸುಭದ್ರಗೊಳ್ಳಲಿ: ರಂಭಾಪುರಿ ಜಗದ್ಗುರುಗಳು

ವಿಜಯವಾಣಿ ಸುದ್ದಿಜಾಲ ಗದಗ
ಮೌಲ್ಯಾಧಾರಿತ ಚಿಂತನೆಗಳು ಇಮದಿನ ಬದುಕಿಗೆ ಅಗತ್ಯವಿದೆ. ನೀತಿ ನಿಯಮಗಳಿಲ್ಲದೆ ಸಮಾಜ ನಾಡು ಬಲಿಷ್ಠವಾಗಿ ಬೆಳೆಯಲಾಗದು. ಸತ್ಯದ ಮೇಲೆ ಸಮಾಜ ಸುಭದ್ರಗೊಳ್ಳುವ ಅವಶ್ಯಕತೆಯಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ನಗರದ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಬುಧವಾರ ಜರುಗಿದ ಶ್ರೀಮದ್​ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ 41ನೇ ವರುಷದ ಪುಣ್ಯಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮನುಷ್ಯನ ಬಾಳ ಬದುಕು ಹಸನಾಗಲು ಸಂಸ್ಕಾರ ಸಂಸತಿಯ ಅರಿವು ಮುಖ್ಯ. ಭೌತಿಕ ಬದುಕಿಗೆ ಆಧ್ಯಾತ್ಮದ ಅರಿವು ಆದರ್ಶಗಳು ಇಲ್ಲದಿದ್ದರೆ ಬಾಳು ಬೆಳೆಯದು. ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಧರ್ಮಪ್ರಜ್ಞೆ, ರಾಷ್ಟ್ರಪ್ರಜ್ಞೆ ಬೆಳೆಸುವ ಅವಶ್ಯಕತೆಯಿದೆ. ಬೆಳೆಯುವ ಜನಾಂಗದಲ್ಲಿ ವೈಚಾರಿಕತೆ ಅವಶ್ಯವಿದೆ. ಆದರೆ ನಾಸ್ತಿಕ ಮನೋಭಾವ ಬೆಳೆಯಬಾರದು. ಅತಿಶತ್ರುಗಳನ್ನು ನಿಯಂತ್ರಿಸಬಹುದು. ಆದರೆ, ಮತಿಶತ್ರುಗಳನ್ನು ನಿಯಂತ್ರಿಸುವುದು ಕಷ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾಯನಾಡಿದ ಸಚಿವ ಎಚ್​.ಕೆ. ಪಾಟೀಲ. ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಶ್ರೀ ವೀರಗಂಗಾಧರ ಜಗದ್ಗುರುಗಳವರ ಸಂದೇಶ ಸರ್ವಕಾಲಿಕ ಸತ್ಯವಾದ ಮಾತು. ಮಾನವ ಧರ್ಮದ ನೆರಳಿನಲ್ಲಿ ಎಲ್ಲರೂ ಬಾಳುವ ಮನೋಭಾವ ಇಂದು ಬೆಳೆದುಕೊಂಡು ಬರಬೇಕಾಗಿದೆ. ಕರ್ನಾಟಕ ರಾಜ್ಯ ನಾಮಕರಣಗೊಂಡು 50 ವರುಷ ತುಂಬಿದ ಹಿನ್ನೆಲೆ ನ.3ರಂದು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಸರ್ವರೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಹೇಳಿದರು.
ಮುಕ್ತಿಮಂದಿರ ೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಮಾತನಾಡಿ, ಮಾನವನ ಉಸಿರಾಟಕ್ಕೆ ಗಾಳಿ ಎಷ್ಟು ಮುಖ್ಯವೋ ಮಾನವನ ಉಜ್ವಲ ಭವಿಷ್ಯಕ್ಕೆ ಧರ್ಮ ಅಷ್ಟೇ ಮುಖ್ಯ. ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಬೋಧಿಸಿದ ತತ್ವ ಸಿದ್ಧಾಂತಗಳು ಬದುಕಿ ಬಾಳುವ ಜನತೆಗೆ ಆಶಾ ಕಿರಣವಾಗಿವೆ ಎಂದರು.
ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಬೆಳಕಿನಲ್ಲಿ ಬೆಳಕಿಗೆ ಬೆಲೆಯಿರದೇ ಇರಬಹುದು. ಆದರೆ ಕತ್ತಲೆಯಲ್ಲಿ ಕಿರು ದೀಪಕ್ಕೂ ಹಿರಿದಾದ ಬೆಲೆಯಿದೆ. ಸತ್ಯ ಸೈದ್ಧಾಂತಿಕ ತಳಹದಿಯ ಮೇಲೆ ಆರೋಗ್ಯಪ ೂರ್ಣ ಸಮಾಜ ನಿರ್ಮಾಣಕ್ಕೆ ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಶ್ರಮಿಸಿದ್ದನ್ನು ಯಾರೂ ಮರೆಯಲಾಗದು ಎಂದರು.
ಅಡ್ನೂರು ಅಭಿನವ ಪಂಚಾರ ಶಿವಾಚಾರ್ಯ ಶ್ರೀಗಳು, ಡಾ. ಗುರುಸ್ವಾಮಿ ಕಲಕೇರಿ, ಎಸ್​.ಪಿ.ಸಂಶಿಮಠ, ಈಶಣ್ಣ ಮುನವಳ್ಳಿ, ಪ್ರಕಾಶ್​ ಉಗಲಾಟದ, ಶರಣು ಗದಗ, ರಮೇಶ ಶಿಗ್ಲಿ, ವಿಜಯಕುಮಾರ ಹಿರೇಮಠ, ಮಹಾಂತೇಶ ವಸ್ತ್ರದ ಹಲವು ಇದ್ದರು.


Share This Article

ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …

 ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…