More

  ವಿಪ್ರರಿಂದ ರಾಮತಾರಕ ಲಕ್ಷ ಜಪ

  ಕಿಕ್ಕೇರಿ: ಪಟ್ಟಣದಲ್ಲಿ ವಿಪ್ರ ಬಾಂಧವ ಸೇವಾ ಸಮಿತಿಯಿಂದ ಸೋಮವಾರ ರಾತ್ರಿ ಶ್ರದ್ಧಾಭಕ್ತಿಯಿಂದ ಒಂದು ಲಕ್ಷ ರಾಮತಾರಕ ನಾಮ ಜಪ ಪಠಣ ನೆರವೇರಿತು.

  ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆ ನೆರವೇರಿದ ಅಂಗವಾಗಿ ಸಾಮೂಹಿಕವಾಗಿ ವಿಪ್ರರು ಸುಬ್ಬರಾಯಛತ್ರದ ಶಂಕರ ಮಂಟಪದಲ್ಲಿ ಪಾಲ್ಗೊಂಡು ರಾಮಭಕ್ತಿ ಮೆರೆದರು. ರಾಮನಾಮದಿಂದ ದೇವರಿಗೆ ಕುಂಕುಮಾರ್ಚನೆ, ಕೀರ್ತನೆ, ಪಾರಾಯಣದಂತಹ ವಿವಿಧ ಕೈಂಕರ್ಯಗಳು ಜರುಗಿದವು.

  ವೇದಬ್ರಹ್ಮಶ್ರೀ ಅನಿಲ್‌ಶಾಸ್ತ್ರಿ ಮಾರ್ಗದರ್ಶನದಲ್ಲಿ ರಾಮದೇವರಿಗೆ ಪಂಚಾಮೃತ ಸೇವೆ, ಪುಷ್ಪಾರ್ಚನೆ, ಕುಂಕುಮಾರ್ಚನೆ ಸೇವೆಗಳು ನಡೆದವು. ನಂತರ ಮಾತನಾಡಿದ ಅವರು, ರಾಮನ ಹೆಸರನ್ನು ಜಪ ಮಾಡಿದರೆ ಮನವು ನೆಮ್ಮದಿಯ ತಾಣವಾಗಲಿದೆ. ದೇಶ ಸಮೃದ್ಧಿಯಾಗಲಿದೆ. ಹಾಗಾಗಿ ಶುದ್ಧ ಮನಸ್ಸಿನಿಂದ ರಾಮ ನಾಮವನ್ನು ನಿತ್ಯ ಪಠಿಸಿ ಎಂದು ಸಲಹೆ ನೀಡಿದರು.

  ಶ್ರೀರಾಮದೇವರ ವಿಗ್ರಹ, ಭಾವಚಿತ್ರಕ್ಕೆ ವಿವಿಧ ಪರಿಮಳ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ರಾಮ ಜೈಕಾರದ ಉದ್ಘೋಷ, ಶಂಖ, ಜಾಗಟೆ, ಘಂಟಾನಾದ ಸೇವೆ ಅರ್ಪಿಸಲಾಯಿತು.

  ಮುಖಂಡರಾದ ಅನಂತಸ್ವಾಮಿ, ವೆಂಕಟೇಶ್, ಮಹಾಬಲಶರ್ಮ, ಗಣೇಶರಾವ್, ಕೆ.ಎಸ್. ಪ್ರಭಾಕರ್, ರಾಮಣ್ಣ ಮಾಸ್ಟರ್, ಕೆ.ಎಸ್. ಪರಮೇಶ್ವರಯ್ಯ, ಶ್ರೀಹರಿ, ನರಸಿಂಹ, ಸೀತಾರಾಮು, ಮಹಾಬಲರಾವ್, ನಾಗೇಂದ್ರ, ಪ್ರಸಾದ್, ಗಿರಿಜಾ, ಸುಮಾ, ಮೇಘನಾ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts