More

    ಸಿಡಿಲು ಬಡಿದು ಮೂವರಿಗೆ ಗಾಯ4 ಮೇಕೆಗಳು ಸಾವು, ಹಾರಿಹೋದ ಸಿಮೆಂಟ್ ಶೀಟ್

    ವಿಜಯವಾಣಿ ಸುದ್ದಿಜಾಲ ಕೈಲಾಂಚ (ರಾನನಗರ)
    ಹೋಬಳಿಯ ಅಣ್ಣಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ 5 ಗಂಟೆ ಸಮಯದಲ್ಲಿ ಸಿಡಿಲು ಬಡಿದು ನಾಲ್ಕು ಮೇಕೆಗಳು ಮೃತಪಟ್ಟಿದ್ದು, ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಬಿರುಗಾಳಿಗೆ ಅಣ್ಣಹಳ್ಳಿ ಪರೇಗೌಡನಪಾಳ್ಯ ಗ್ರಾಮದಲ್ಲಿ ನಾಲ್ಕು ಮನೆಗಳು ಹಾನಿಯಾಗಿದೆ.

    ನರಸಿಂಗಯ್ಯ ಎಂಬುವರು ಅಣ್ಣಹಳ್ಳಿಯ ತಮ್ಮ ಜಮೀನಿನಲ್ಲಿ ಮೇಕೆ ಮೇಯಿಸುತ್ತಿದ್ದಾಗ ಸಂಜೆ 5 ಗಂಟೆ ಸಮಯದಲ್ಲಿ ಬಿರುಗಾಳಿ ಸಹಿತ ಮಳ ಆರಂಭವಾಗಿದೆ. ಈ ವೇಳೆ ಪಕ್ಕದ ಜಮೀನಿನ ನಾಗೇಂದ್ರ, ನಿಂಗಯ್ಯ ಮತ್ತು ನರಸಿಂಗಯ್ಯ ಅಲ್ಲೇ ಇದ್ದ ಮರವೊಂದರ ಕೆಳಗೆ ಆಶ್ರಯ ಪಡೆದಿದ್ದಾರೆ. ಮೇಕೆಗಳು ಕೂಡ ಇವರ ಜತೆ ಇದ್ದವು. ಈ ವೇಳೆ ಸಿಡಿಲು ಬಡಿದ ಪರಿಣಾಮ ಮರದಡಿ ಆಶ್ರಯ ಪಡೆದಿದ್ದ ನಾಲ್ಕು ಮೇಕೆಗಳು ಮೃತಪಟ್ಟಿವೆ. ನಾಗೇಂದ್ರ ಎಂಬುವರಿಗೆ ಸಿಡಿಲು ಬಡಿದು ಮೈಮೇಲೆ ಚಾವಟಿಯಿಂದ ಬಾಸುಂಡೆ ಬಂದಿದೆ. ಜತೆಯಲ್ಲಿದ್ದ ನರಸಿಂಗಯ್ಯ, ನಿಂಗಣ್ಣ ಅವರಿಗೂ ಗಾಯವಾಗಿದ್ದು ಸ್ಥಳೀಯರು ಕೂಡಲೇ ಮೂವರನ್ನು ಬಿಡದಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಬಿರುಗಾಳಿ
    ಒಂದೇ ಸಮನೆ ಬೀಸಿದ ಬಿರುಗಾಳಿಗೆ ರೇಣುಕಪ್ಪ ಎಂಬುವರ ಮನೆಯ ಛಾವಣಿಗೆ ಹಾಕಿದ್ದ ಸಿಮೆಂಟ್ ಶೀಟ್‌ಗಳು ಹಾರಿಹೋಗಿ ಮನೆಯ ಅನತಿ ದೂರದಲ್ಲಿ ಚೂರು ಚೂರಾಗಿ ಬಿದ್ದಿವೆ. ಗ್ರಾಮದಲ್ಲಿ ವಿದ್ಯುತ್ ಕಂಬ, ಮರಗಳು ಮುರಿದಿಬಿದ್ದಿವೆ. ಕೆಲವು ಕಡೆ ಮರ ಬಿದ್ದು ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.

    ಪರೇಗೌಡನಪಾಳ್ಯದಲ್ಲಿ ಭೀಮಯ್ಯ ಎಂಬ ರೈತರ ರೇಷ್ಮೆ ಹುಳು ಸಾಕಾಣಿಕೆ ಮನೆ, ಚಂದ್ರಮ್ಮ ಎಂಬುವರ ನಾಡಹೆಂಚಿನ ಮನೆ, ಶಿವಲಿಂಗಯ್ಯ ಎಂಬುವರ ಶೆಡ್‌ನ ಗೋಡೆಗಳಿಗೂ ಹಾನಿಯಾಗಿದೆ. ಭೀಮಯ್ಯ ಎಂಬುವರ ಮನೆ ಮೇಲ್ಚಾವಣೆಗೆ ಅಳವಡಿಸಿದ್ದ ಶೀಟ್‌ಗಳು ಪಕ್ಕದ ಜಮೀನಿನವರೆಗೆ ಹಾರಿಹೋಗಿವೆ. ಹಲವು ಮನೆಗಳು ಜಖಂಗೊಂಡಿವೆ.

    ತಹಸೀಲ್ದಾರ್ ಭೇಟಿ
    ಹಾನಿ ವಿಷಯ ತಿಳಿಯುತ್ತಲೇ ರಾಮನಗರ ತಹಸೀಲ್ದಾರ್ ಬಿ. ತೇಜಸ್ವಿನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಗೀಡಾಗಿರುವ ಮನೆ ಮತ್ತು ಮೇಕೆಗಳಿಗೆ ಶ್ರೀವೇ ಶೀಘ್ರವೇ ಪರಿಹಾರ ನೀಡಲಾಗುವುದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts