More

    ತಡವಾಗಿ ಬಿತ್ತನೆ ಮಾಡಬಹುದಾದ ರಾಗಿ ತಳಿ ಪರಿಚಯ

    ಹಕ್ಕಿನಾಳು ಗ್ರಾಮದ 50 ರೈತರಿಗೆ ಕೆಎಂಆರ್​-316 ವಿತರಣೆ

    105-110 ದಿನಗಳಲ್ಲಿ ಕಟಾವು

    ಮಾಗಡಿ
    ಮಳೆ ವಿಳಂಬದಿಂದಾಗಿ ತಡವಾಗಿ ಬಿತ್ತನೆ ಮಾಡಬಹುದಾಗ ಕೆಎಂಆರ್​&316 ತಳಿಯ ರಾಗಿ ಬಿತ್ತನೆ ಬೀಜವನ್ನು ಪರಿಚಯಿಸಲಾಗುತ್ತಿದೆ ಎಂದು ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ಎಂ.ಎಸ್​.ದಿನೇಶ್​ ತಿಳಿಸಿದರು.


    ಕೇಂದ್ರ ದತ್ತು ಪಡೆದಿರುವ ತಾಲೂಕಿನ ಹಕ್ಕಿನಾಳು ಗ್ರಾಮದಲ್ಲಿ ಹೊಸ ರಾಗಿ ತಳಿ ಪರಿಚಯಿಸಿ ಮಾತನಾಡಿ, ಜಿಲ್ಲೆಯಲ್ಲಿ ರಾಗಿ ಪ್ರಮುಖ ಬೆಳೆಯಾಗಿದೆ. ಸುಮಾರು 70 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ದೀರ್ಘಾವಧಿ ತಳಿಗಳಾದ ಎಂಆರ್​ -1 ಮತ್ತು ಎಂಆರ್​-6 ತಳಿಗಳನ್ನು ಮುಂಗಾರು ಹಂಗಾಮಿನಲ್ಲಿ ಜೂನ್​-ಜುಲೈನಲ್ಲಿ ಬಿತ್ತನೆ ಮಾಡಲಾಗುತ್ತದೆ.

    ಆದರೆ ಪ್ರಸ್ತುತ ವರ್ಷ ಮುಂಗಾರು ಮಳೆ ಪ್ರಮಾಣದಲ್ಲಿ ವ್ಯತ್ಯಾಸವಾಗಿರುವುದರಿಂದ ಹಾಗೂ ಜುಲೈ ತಿಂಗಳಿನಲ್ಲಿ ಮಳೆ ಕೊರತೆಯಾಗಿರುವುದರಿಂದ ದೀರ್ಘಾವದಿ ತಳಿಗಳ ಬಿತ್ತನೆ ತಡವಾಗುತ್ತಿದೆ. ಆದ್ದರಿಂದ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರಯಿಂದ ಜುಲೈ ಕೊನೇ ವಾರ ಅಥವಾ ಆಗಸ್ಟ್​ ಮೊದಲ ಮತ್ತು ಎರಡನೇ ವಾರದ ಬಿತ್ತನೆಗೆ ಸೂಕ್ತವಾದ ಕೆಎಂಆರ್​&316 ತಳಿಯನ್ನು ಗ್ರಾಮದ 50 ರೈತರಿಗೆ ಪ್ರಾತ್ಯಕೆ ಮೂಲಕ ಪರಿಸಯಿಸಲಾಗುತ್ತಿದೆ ಎಂದರು.
    ಮಂಡ್ಯ ವಿಸಿ ಫಾರ್ಮ್ ನ  ಕೃಷಿ ಸಂಶೋಧನಾ ಕೇಂದ್ರ ಕೆಎಂಆರ್​-316 ತಳಿಯನ್ನು 2022ರಲ್ಲಿ ಬಿಡುಗಡೆ ಮಾಡಿದ್ದು, 105ರಿಂದ 110 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಇಲುಕುಗಳು ಉದ್ದವಾಗಿದ್ದು ಇಲುಕಿನ ತುದಿ ಒಳಮೈಗೆ ಬಾಗಿರುತ್ತದೆ ಹಾಗೂ ತೆನೆಗಳು ಹಸಿರು ಬಣ್ಣದಿಂದ ಕೂಡಿರುತ್ತವೆ.

    ಈ ತಳಿಯು ಬೆಂಕಿ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಮಳೆಯಾಶ್ರಿತ ಮತ್ತು ನೀರಾವರಿ ಪ್ರದೇಶಗಳ ಬಿತ್ತನೆಗೆ ಸೂಕ್ತವಾಗಿದೆ. ಮಳೆಯಾಶ್ರಿತವಾದರೆ ಜುಲೈ ಕೊನೇ ವಾರ ಹಾಗೂ ಆಗಸ್ಟ್​ ತಿಂಗಳ ಬಿತ್ತನೆಗೆ ಸೂಕ್ತವಾಗಿದೆ. ಪ್ರತಿ ಎಕರೆಗೆ 14ರಿಂದ 16 ಕ್ವಿಂಟಾಲ್​ ಮತ್ತು ನೀರಾವರಿಯಾದರೆ 18ರಿಂದ 20 ಕ್ವಿಂಟಾಲ್​ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಡಾ. ಎಂ.ಎಸ್​. ದಿನೇಶ್​ ತಿಳಿಸಿದರು.


    ಕೇಂದ್ರದ ಮುಖ್ಯಸ್ಥೆ ಡಾ.ಲತಾ ಆರ್​.ಕುಲಕರ್ಣಿ ಮಾತನಾಡಿ, ಕಳೆದ ಸಾಲಿನಲ್ಲಿ ತೊಗರಿಯ ನೂತನ ತಳಿ ಬಿಆರ್​ಜಿ-3, ಅವರೆಯಲ್ಲಿ ಹೆಬ್ಬಾಳ ಅವರೆ-5, ಮೇವಿನ ಬೆಳೆಗಳಾದ ಸಿಒಎಫ್​ಎಸ್​-31, ಸೂಪರ್​ ನೇಪಿಯರ್​ ಮತ್ತು ಹಲವಾರು ಸುಧಾರಿತ ತಾಂತ್ರಿಕತೆಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಕುರಿತು ತಾಂತ್ರಿಕತೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಕುರಿತು ತರಬೇತಿ ನೀಡಲಾಗಿದೆ. ಈ ವರ್ಷವೂ ಸುಧಾರಿತ ಕೃಷಿ ತಾಂತ್ರಿಕತೆಗಳನ್ನು ಪರಿಚಯಿಸಿ ದತ್ತು ಪಡೆದಿರುವ ಹಕ್ಕಿನಾಳು ಗ್ರಾಮವನ್ನು ಮಾದರಿ ಕೃಷಿ ಗ್ರಾಮವಾಗಿ ರೂಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

    ಕೇಂದ್ರದ ವಿಜ್ಞಾನಿ ಡಾ.ರಾಜೇಂದ್ರಪ್ರಸಾದ್​, ಬಿ.ಎಸ್​.ವಿಸ್ತರಣಾ ವಿಜ್ಞಾನಿ ಡಾ.ಸೌಜನ್ಯ, ಎಸ್​. ಕೇಂದ್ರದ ವಿಜ್ಞಾನಿಗಳಾದ ಡಾ.ದೀಪಾ ಪೂಜಾರ, ಶಾಂತ ಬಾಲಗೊಂಡ, ಹಕ್ಕಿನಾಳು ೇತ್ರ ಪರಿವೀಕ್ಷಕ ಹರಿಪ್ರಸಾದ್​ ಇತರರು ಇದ್ದರು.

     

     

     

     

    ರಾಜ್ಯೋತ್ಸವ ರಸಪ್ರಶ್ನೆ - 29

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts