More

    ರಾಮನಗರ ಜಿಲ್ಲೆ ಹೆಸರು ಮರುನಾಮಕರಣಕ್ಕೆ ಶಾಸಕಿ ಅನಿತಾ ಕುಮಾರಸ್ವಾಮಿ ವಿರೋಧ

    ಕೈಲಾಂಚ: ಜಿಲ್ಲೆಯ ಹೆಸರು ಬದಲಾವಣೆಯಿಂದ ಜನರಿಗೆ ಯಾವ ರೀತಿಯಲ್ಲೂ ಪ್ರಯೋಜನವಿಲ್ಲ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದರು.

    ಕೈಲಾಂಚದ ಲಕ್ಷ್ಮೀವೆಂಕಟೇಶ್ವರ ದೇವಾಲಯದ ಆವರಣದಲ್ಲಿ ಸೋಮವಾರ ರಾತ್ರಿ ವೈಕುಂಠ ಏಕಾದಶಿ ಅಂಗವಾಗಿ ಆಯೋಜಿಸಿದ್ದ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

    ಹದಿಮೂರು ವರ್ಷಗಳ ಹಿಂದೆ ನಾಲ್ಕು ತಾಲೂಕುಗಳನ್ನೊಳಗೊಂಡಂತೆ ರಾಮನಗರವನ್ನು ಜಿಲ್ಲೆಯನ್ನಾಗಿ ೋಷಿಸಿ ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿಯವರು ನೂತನ ಜಿಲ್ಲೆಯನ್ನು ಅಸ್ತಿತ್ವಕ್ಕೆ ತಂದರು. ಇದರಿಂದ ಜಿಲ್ಲೆಯ, ರಾಜ್ಯದ ಜನರು ಸಂತೋಷಪಟ್ಟಿದ್ದರು. ಸರ್ಕಾರ ಈಗ ಏಕಾಏಕಿ ರಾಮನಗರ ಜಿಲ್ಲೆಗೆ ಮರು ನಾಮಕರಣ ಮಾಡಲು ಹೊರಟಿರುವುದು ಸಾಧುವಲ್ಲ. ನೂತನ ಜಿಲ್ಲೆ ಹೆಸರು ಪ್ರಸ್ತಾವನೆಯನ್ನು ಕೈಬಿಡಬೇಕು. ಅದರ ಬದಲು ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ, ಹಾಲಿ ಬಿಜೆಪಿ ಸರ್ಕಾರ ತಡೆಹಿಡಿದಿರುವ ಅನುದಾನವನ್ನು ಬಿಡುಗಡೆಗೊಳಿಸಿ ಅಭಿವೃದ್ಧಿಗೆ ಸಹಕರಿಸಬೇಕು. ಇದರಿಂದ ಜಿಲ್ಲೆಯ ಜನತೆಗೆ ಅನುಕೂಲವಾಗಲಿದೆಯೇ ಹೊರತು ಹೊಸ ಜಿಲ್ಲೆಯ ಹೆಸರಿನಿಂದಲ್ಲ ಎಂದರು.

    ಯಾವುದೇ ಕಾರಣಕ್ಕೂ ಜಿಲ್ಲೆಯ ಹೆಸರನ್ನು ಬದಲಾಯಿಸದಂತೆ ಕುಮಾರಸ್ವಾಮಿಯವರು ಒತ್ತಾಯಿಸಿದ್ದಾರೆ. ಹಾಗೂ ಜಿಲ್ಲೆಯ ಹೆಸರು ಬದಲಾಯಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರೂ ಸ್ಪಷ್ಟಪಡಿಸಿದ್ದಾರೆ ಎಂದರು.

    ಕೈಲಾಂಚ ಗ್ರಾಪಂ ಅಧ್ಯಕ್ಷ ಆರ್. ಪಾಂಡುರಂಗ ಮಾತನಾಡಿ, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಕೈಲಾಂಚ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಫೆಬ್ರವರಿಯಲ್ಲಿ ಕೈಲಾಂಚ ಗೇಟ್‌ನಲ್ಲಿ ನಿರ್ಮಾಣವಾಗಿರುವ ಲಕ್ಷ್ಮೀವೆಂಕಟೇಶ್ವರ ಮಹಾದ್ವಾರದ ಉದ್ಘಾಟನೆ ಕಾರ್ಯಕ್ರಮ ತಮ್ಮಿಂದಲೇ ನೆರವೇರಿಸಲಾಗುವುದು. ಅಂದು ಉಚಿತ ಸಾಮೂಹಿಕ ವಿವಾಹ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರಿಗೆ ಸನ್ಮಾನ ಮಾಡಲಾಗುವುದು ಎಂದು ಗ್ರಾಮಸ್ಥರ ಪರವಾಗಿ ಆಹ್ವಾನ ನೀಡಿದರು.

    ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಅಶ್ವತ್ಥ್, ರಾಜ್ಯ ವಕ್ತಾರ ಬಿ. ಉಮೇಶ್, ಗ್ರಾಪಂ ಮಾಜಿ ಉಪಾಧ್ಯಕ್ಷರಾದ ವಡ್ಡರಹಳ್ಳಿ ವೆಂಕಟೇಶ್, ಗೌಡಯ್ಯನದೊಡ್ಡಿ ಜಿ.ಪಿ. ಗಿರೀಶ್ ವಾಸು, ಡಾ. ಬಾಲಾಜಿ, ಗ್ರಾಪಂ ಸದಸ್ಯರಾದ ಶೋಭಾ, ಬೋರಯ್ಯ, ದೇವರದೊಡ್ಡಿ ಗೋಪಾಲನಾಯ್ಕ ಮತ್ತಿತರರು ಇದ್ದರು.

    ನಾನು ರಾಮಭಕ್ತ ಆಂಜನೇಯಸ್ವಾಮಿಯ ಪರಮ ಭಕ್ತೆ. ಅದರಂತೆ ರಾಮನ ಹೆಸರಿನಲ್ಲಿರುವ ರಾಮನಗರ ಜಿಲ್ಲೆಗೆ ಮತ್ತೊಂದು ಹೆಸರು ಬೇಡ. ಇದು ಜನ ಮೆಚ್ಚಿರುವ ಹೆಸರು. ರಾಮನಗರ ಎಂದೇ ಇರಲಿ. ನವ ಬೆಂಗಳೂರು ಎಂದು ಮರು ನಾಮಕರಣ ಮಾಡುವುದು ಬೇಡ.
    ಅನಿತಾ ಕುಮಾರಸ್ವಾಮಿ ಶಾಸಕಿ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts