ಉಗ್ರನ ಜತೆಗಿದ್ದ ಆ ಐವರು ಎಲ್ಲಿ?

ರಾಮನಗರ: ಎನ್​ಐಎಗೆ ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಉಗ್ರ ಮುನೀರ್ ಶೇಖ್​ನ (38) ರಾಮನಗರ ನಂಟು ಅಗೆದಷ್ಟೂ ಆಳಕ್ಕೆ ವಿಸ್ತರಿಸುತ್ತಿದೆ. ಇತ್ತೀಚೆಗಷ್ಟೇ ತನ್ನ ಅತ್ತೆಗೂ ಮನೆ ಮಾಡಿ ಕೊಟ್ಟಿದ್ದ ಮುನೀರ್ ತಾನು ರಾಮನಗರದಲ್ಲಿ ವಾಸ್ತವ್ಯ ಹೂಡುವುದಕ್ಕೆ 2 ತಿಂಗಳು ಮೊದಲೇ ಭಾಮೈದುನನಿಗೂ ಮನೆ ಮಾಡಿಕೊಟ್ಟಿದ್ದನೆಂಬುದು ಬೆಳಕಿಗೆ ಬಂದಿದೆ. ಟಿಪು್ಪ ನಗರದಲ್ಲಿ ಭಾಮೈದ ಹಾಗೂ ಅತ್ತೆಗೆ ಪ್ರತ್ಯೇಕವಾಗಿ ಮನೆ ಮಾಡಿಕೊಟ್ಟಿದ್ದ ಮುನೀರ್ ಎನ್​ಐಎ ಬಲೆಗೆ ಬೀಳುತ್ತಲೇ ಈತನ ಅತ್ತೆ, ಭಾಮೈದ ಹಸನ್, ಆತನ ಪತ್ನಿ, ಇಬ್ಬರು ಮಕ್ಕಳು ಮನೆಗೆ ಬೀಗ ಹಾಕಿ ದಿಢೀರ್ ನಾಪತ್ತೆಯಾಗಿದ್ದಾರೆ. ಹೀಗಾಗಿ ಇವರೆಲ್ಲರು ಸೇರಿಯೇ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿರಬಹುದೆಂಬ ಅನುಮಾನ ಇಮ್ಮಡಿಗೊಂಡಿದೆ. 4 ತಿಂಗಳ ಹಿಂದಷ್ಟೇ ಟಿಪ್ಪುನಗರದ ಮುಷ್ತಾಕ್ ಎನ್ನುವವರ ಮನೆಯನ್ನು ಬಾಡಿಗೆ ಪಡೆದಿದ್ದ ಹಸನ್ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದ. ಜತೆಗೆ ರೋಲ್ಡ್ ಗೋಲ್ಡ್ ಒಡವೆ ಮಾರುತ್ತಿದ್ದ ಎಂದು ತಿಳಿದು ಬಂದಿದೆ. ಒಬ್ಬಂಟಿಗಳಿಗೆ ಮನೆ ಸಿಗದ ಕಾರಣಕ್ಕೆ ಇವರಿಬ್ಬರು ಒಟ್ಟಾಗಿಯೇ ಹೋಗಿ ಸರಾಗವಾಗಿ ಮನೆ ಬಾಡಿಗೆಗೆ ಪಡೆದಿದ್ದಾರೆಂದು ಎನ್​ಐಎ ಮೂಲಗಳು ತಿಳಿಸಿವೆ.

ಲ್ಯಾಪ್​ಟಾಪ್ ಎಲ್ಲಿ?: ಮುನೀರ್ ಶೇಖ್​ನ ಪತ್ನಿ ಶಜಿದ್ ಬೀಬಿ ಲ್ಯಾಪ್​ಟಾಪ್ ಅನ್ನು ಬೇರೆಡೆ ಇಟ್ಟಿದ್ದಾಳೆಂಬ ಶಂಕೆಯ ಮೇಲೆ ಎನ್​ಐಎ ತಂಡ ತೀವ್ರ ಶೋಧ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

ತಾನು ಮನೆಯವರನ್ನು ಒಪ್ಪಿಸಿ ಎಲ್ಲರೆದುರು ಮದುವೆಯಾದ ನಂತರ ಪತಿಯೊಟ್ಟಿಗೆ ಬರುವುದಾಗಿ ಹೇಳಿದ ಆಶಾ ತವರು ಮನೆಯಲ್ಲೇ ವಾಸವಿದ್ದಳು. ಆದರೆ, 2018ರ ಜು.29 ರಂದು ಆಶಾ ಜತೆ ಮಾಗೋಡಿನ ಮೇಲಿನ ತರೆಮನೆಯ ರಾಜೇಶ ಭಟ್ ಮದುವೆಯಾಗಿದೆ. ಆ. 5ರಂದು ಹುಲ್ಲೋರಮನೆ ಗಜಾನನ ಮಾರುತಿ ದೇವಸ್ಥಾನದಲ್ಲಿ ಆರತಕ್ಷತೆ ಸಮಾರಂಭವೂ ಜರುಗಿದೆ. ಯಲ್ಲಾಪುರ ಉಪ ನೋಂದಣಿ ಕಚೇರಿಯಲ್ಲಿ ಈ ವಿವಾಹ ನೋಂದಣಿಯಾಗಿದೆ.

ಮತ್ತೋರ್ವ ಉಗ್ರನ ಸೆರೆ

ಬೆಂಗಳೂರು: ರಾಮನಗರದಲ್ಲಿ ಉಗ್ರ ಮುನೀರ್ ಶೇಖ್ ಬಂಧನವಾದ ಬೆನ್ನಲ್ಲೇ ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಆದಿಲ್ ಅಲಿಯಾಸ್ ಅಸ್ಸಾದುಲ್ಲಾ (29) ಎಂಬ ಉಗ್ರನನ್ನು ಮಂಗಳವಾರ ಎನ್​ಐಎ ತಂಡ ಬಂಧಿಸಿದೆ. 3 ಮೊಬೈಲ್, ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿರುವ ರಸೀದಿ, ಸುಧಾರಿತ ಬಾಂಬ್ ತಯಾರಿಸುವ ಕುರಿತು ಬಂಗಾಳಿಯಲ್ಲಿ ಬರೆದಿರುವ ಮಾಹಿತಿ ಉಳ್ಳ ಡೈರಿಯನ್ನು ಜಪ್ತಿ ಮಾಡಲಾಗಿದೆ. ಮುನೀರ್ ಭಾರತದಲ್ಲಿ ಜೆಎಂಬಿ ಸಂಘಟನೆಯ ಪ್ರಮುಖ ನಾಯಕನಾಗಿದ್ದ. ಈತನ ಬಲಗೈ ಬಂಟನಾಗಿ ಆದಿಲ್ ಕೆಲಸ ಮಾಡುತ್ತಿದ್ದ.