ರಾಮ ಮಂದಿರ ನಿರ್ವಣಕ್ಕೆ ಕಾಲ ಕೂಡಿಬಂದಿದೆ

ಬಾಗಲಕೋಟೆ: ಶ್ರೀ ರಾಮ ಮಂದಿರ ನಿರ್ವಣಕ್ಕೆ ಇದೀಗ ಕಾಲ ಕೂಡಿ ಬಂದಿದೆ. ಎಲ್ಲ ರಾಜಕೀಯ ಪಕ್ಷಗಳಲ್ಲಿ ವಿರೋಧ ಕಡಿಮೆ ಆಗಿದೆ. ರಾಮನ ಶಕ್ತಿ ಏನೂ ಅನ್ನೋದು ಎಲ್ಲರಿಗೂ ಅರ್ಥವಾಗಿದೆ. ಹೀಗಾಗಿ ಈ ಬಾರಿ ಮಂದಿರ ನಿರ್ಮಾಣ ಖಂಡಿತವಾಗಿಯೂ ಆರಂಭವಾಗುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಬಾಗಲಕೋಟೆಯಲ್ಲಿ ಮಂಗಳ ವಾರ ಸಂಜೆ ಸುದ್ದಿಗಾರರ ಜೊತೆಗೆ ಮಾತನಾಡಿದ ಶಾಸಕ ಯತ್ನಾಳ, ರಾಮ, ಕೃಷ್ಣ, ವಿಶ್ವನಾಥ ಮಂದಿರ ನಿರ್ಮಾಣ ಆಗಬೇಕು ಎನ್ನುವುದು ಪ್ರತಿಯೊಬ್ಬ ಹಿಂದುಗಳ ಭಾವನೆಯಾಗಿದೆ ಎಂದರು. ಡಾ. ಬಾಬಾಸಾಹೇಬ ಅಂಬೇಡ್ಕರ್ ಈ ದೇಶದ ಹಿಂದುಗಳ ಮನಸ್ಸಿಗೆ ನೋವಾಗುವ ಯಾವುದೇ ಕೆಲಸವನ್ನು ಮಾಡಿಲ್ಲ. ಅವರು ಮನಸ್ಸು ಮಾಡಿದ್ದರೆ ಇಸ್ಲಾಂ ಧರ್ಮ ಸ್ವೀಕರಿಸುತ್ತಿದ್ದರು. ಆದರೆ, ಹಿಂದು ಧರ್ಮದ ಬೌದ್ಧ ಧರ್ಮ ಸ್ವೀಕರಿಸಿದರು ಎಂದು ಅಭಿಪ್ರಾಯಪಟ್ಟರು.

ಓವೈಸಿ ಹೇಳಿಕೆಗೆ ಟಾಂಗ್: ರಾಮ ಮಂದಿರ ನಿರ್ವಣವಾದರೆ ಪ್ರಧಾನಿ ರುಂಡ ಕಡಿಯುತ್ತೇವೆ ಅಂತ ಹೈದ್ರಾಬಾದ್​ನಲ್ಲಿ ಓವೈಸಿ ಹೇಳುತ್ತಾರೆ. ನಾವೇನು ಹಿಂದೂಗಳು ಬಳೆ ತೊಟ್ಟಿದ್ದೇವಾ? ಓವೈಸಿಗಿಂತ ಅವರಪ್ಪನಂಗ ಹಿಂದೂಗಳ ಸಂಘಟನೆ ಇದ್ದೇವೆ. ಯಾರು ಯಾರ ರುಂಡ ಕಡಿತಾರೆ ನೋಡುತ್ತೇವೆ. ಅವರು ಈ ದೇಶದಲ್ಲಿ ಇರಲಾರಂತೆ ಮಾಡುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

ಆಪರೇಶನ್ ಕಮಲ ವಿಚಾರವಾಗಿ ವೈರಲ್ ಆಗಿರುವ ಆಡಿಯೋಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಇದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ತಯಾರು ಮಾಡಿದ ಆಡಿಯೋ ಆಗಿದೆ. ಬಿಜೆಪಿ ಹೆಸರು ಕೆಡಿಸಲು ಹೀಗೆಲ್ಲ ಮಾಡುತ್ತಿದ್ದಾರೆ.

| ಬಸನಗೌಡ ಪಾಟೀಲ ಯತ್ನಾಳ ವಿಜಯಪುರ ಶಾಸಕ