ಮಂದಿರಕ್ಕೆ ಮುಹೂರ್ತ

>

ನವದೆಹಲಿ: ಯಾವುದೇ ಸುಗ್ರೀವಾಜ್ಞೆಗಳಿಲ್ಲದೆ ಇದೇ ಡಿಸೆಂಬರ್​ನಿಂದಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿ ಆರಂಭಗೊಳ್ಳುವುದು ಶತಃಸಿದ್ಧ ಎಂದು ಬಿಜೆಪಿ ಮಾಜಿ ಸಂಸದರೂ ಆದ ರಾಮ ಜನ್ಮಭೂಮಿ ನ್ಯಾಸ ಅಧ್ಯಕ್ಷ ರಾಮ್ ವಿಲಾಸ್ ವೇದಾಂತಿ ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಾಗುವಂತೆ ಲಖನೌನಲ್ಲಿ ಮಸೀದಿಯೂ ನಿರ್ವಣವಾಗಲಿದೆ. ರಾಮಮಂದಿರ ಜನ್ಮಭೂಮಿ ವಿವಾದ ಪ್ರಕರಣದಲ್ಲಿ ವಾದಿಸುತ್ತಿರುವ ಎರಡೂ ಗುಂಪಿನವರ ಸಮ್ಮತಿಯಿಂದಲೇ ಈ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ಯಾವುದೇ ಸುಗ್ರೀವಾಜ್ಞೆಯ ಅಗತ್ಯವಿಲ್ಲ ಎಂದು ವೇದಾಂತಿ ತಿಳಿಸಿದ್ದಾರೆ.

ರಾಮಮಂದಿರ ನಿರ್ಮಾಣಕ್ಕಾಗಿ ಕಾಯ್ದೆ ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಅಧಿಕಾರವಿದೆ. ಪ್ರಕರಣ ಸುಪ್ರೀಂಕೋರ್ಟ್​ನಲ್ಲಿ ಇದ್ದರೂ ಸಂಸತ್​ಗೆ ಈ ಕುರಿತ ಕಾಯ್ದೆ ರೂಪಿಸಲು ಅಡ್ಡಿಯಿಲ್ಲ.

| ಚೆಲಮೇಶ್ವರ್, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ


ಮಂದಿರವಲ್ಲೇ ಕಟ್ಟುವೆವು

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣವಾಗಬೇಕು ಎಂಬ ಕೂಗು ದೇಶಾದ್ಯಂತ ಹೆಚ್ಚುತ್ತಿರುವ ಬೆನ್ನಲ್ಲೇ ಸಾಧು-ಸಂತರ ಧರ್ವದೇಶ ಸಭೆ ಶನಿವಾರ ನವದೆಹಲಿಯಲ್ಲಿ ಆರಂಭವಾಗಿದ್ದು, ಡಿಸೆಂಬರ್​ನಲ್ಲಿ ಮಂದಿರ ಶಿಲಾನ್ಯಾಸ ನಡೆಯಲಿದೆ ಎಂದು ಸಂತರು ಘೋಷಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮ

ಮಂದಿರ ನಿರ್ಮಾಣ ಕಾರ್ಯ ಡಿಸೆಂಬರ್​ನಿಂದ ಆರಂಭ ವಾಗಲಿದೆ. ಮುಂದಿನ ಲೋಕಸಭಾ ಚುನಾವಣೆ ಯೊಳಗೆ ಬಹುತೇಕ ನಿರ್ಮಾಣ ಕಾರ್ಯ ಮುಗಿಯಲಿದೆ. ಅದೇ ಅವಧಿಯಲ್ಲಿ ಲಖನೌನಲ್ಲಿ ಮಸೀದಿ ನಿರ್ಮಾಣ ಕಾರ್ಯವೂ ಶುರುವಾಗಲಿದೆ. ಇದರಿಂದ ಪರಸ್ಪರ ಸಹಕಾರ ಹಾಗೂ ಒಪ್ಪಂದದಿಂದ ವಿವಾದಕ್ಕೆ ತೆರೆ ಬೀಳಲಿದೆ. ಕೇಂದ್ರ ಸರ್ಕಾರದ ಮಸೂದೆ, ಸುಗ್ರೀವಾಜ್ಞೆ ಅಥವಾ ಸುಪ್ರೀಂ ಕೋರ್ಟ್ ಆದೇಶದ ಅಗತ್ಯ ಇರುವುದಿಲ್ಲ ಎಂದು ರಾಮಜನ್ಮಭೂಮಿ ನ್ಯಾಸ ಮುಖ್ಯಸ್ಥ ರಾಮ ವಿಲಾಸ್ ವೇದಾಂತಿ ಹೇಳಿದ್ದಾರೆ. ಇದಕ್ಕೆ ಬಹುತೇಕ ಸಂತರು ಒಪ್ಪಿಗೆ ಸೂಚಿಸಿದ್ದಾರೆ.

3500 ಸಂತರು ಭಾಗಿ: ಅಖಿಲ ಭಾರತೀಯ ಸಂತ ಸಮಿತಿ ನೇತೃತ್ವದಲ್ಲಿ ಆರಂಭವಾಗಿರುವ ಧರ್ವದೇಶ ಸಭೆಯಲ್ಲಿ 125ಕ್ಕೂ ಅಧಿಕ ಹಿಂದು ಸಂಘಟನೆಗಳ ಪ್ರತಿನಿಧಿಗಳು ಭಾಗಿಯಾಗಿದ್ದಾರೆ.

ಆರ್ಟ್ ಆಫ್ ಲಿವಿಂಗ್​ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಸೇರಿ ದೇಶದ ವಿವಿಧ ಭಾಗಗಳ 3500ಕ್ಕೂ ಅಧಿಕ ಸಂತರು ಸಭೆಯಲ್ಲಿ ಇದ್ದರು. ಎರಡು ದಿನಗಳ ಸಭೆಯ ಕೊನೆಯಲ್ಲಿ ಅಯೋಧ್ಯೆ ರಾಮಮಂದಿರ ನಿರ್ವಣಕ್ಕೆ ಸಂಬಂಧಿಸಿ ಮಹತ್ವದ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ. ಸಂತರ ಸಭೆಯ ನಿರ್ಣಯಕ್ಕೆ ಬದ್ಧ ಎಂದು ಆರ್​ಎಸ್​ಎಸ್ ಹೇಳಿರುವ ಕಾರಣ ಈ ಸಭೆಗೆ ಭಾರಿ ಮಹತ್ವ ಬಂದಿದೆ. ವರ್ಷಾಂತ್ಯದೊಳಗೆ ದೇಶಕ್ಕೆ ಶುಭ ಸಮಾಚಾರ ದೊರೆಯಲಿದೆ. ಭಾರತದಲ್ಲಿ ರಾಮಮಂದಿರ ಈಗ ನಿರ್ವಣವಾಗದೇ ಇನ್ಯಾವಾಗ ನಿರ್ವಣವಾಗಲು ಸಾಧ್ಯ? ಸುಪ್ರೀಂ ಕೋರ್ಟ್​ನಿಂದ ನಿರ್ಣಯ ಬರದಿದ್ದರೆ ಕೇಂದ್ರ ಸರ್ಕಾರ ಮಸೂದೆ ಮಂಡಿಸಲಿದೆ. ಹೀಗಾಗಿ ಹಿಂದುಗಳ ಕನಸಿನ ಮಂದಿರವಿನ್ನು ದೂರವಿಲ್ಲ ಎಂದು ಯೋಗಗುರು ಬಾಬಾ ರಾಮದೇವ್ ಹೇಳಿದ್ದಾರೆ. ಧರ್ವದೇಶ ಸಭೆಯಲ್ಲಿ ಸಾಧಿ್ವ ಪ್ರಾಚಿ ಮಾತನಾಡಿ, ಡಿ.6ರಂದು ರಾಮಮಂದಿರಕ್ಕೆ ಶಿಲಾನ್ಯಾಸವಾಗಲಿದೆ. ಇನ್ನು ಯಾರಿಗೂ ಕಾಯುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಸುಗ್ರೀವಾಜ್ಞೆ ಸಾಧ್ಯ ಎಂದ ಚೆಲಮೇಶ್ವರ್

ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಅಥವಾ ಮಸೂದೆ ಮಂಡಿಸಲು ಯಾವುದೇ ಸಮಸ್ಯೆಯಿಲ್ಲ ಎಂದು ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಚೆಲಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದ್ದಾಗ ಸುಗ್ರೀವಾಜ್ಞೆ ಹೊರಡಿಸಿದ ಉದಾಹರಣೆಗಳಿವೆ. ಹೀಗಾಗಿ ಅದು ಅಸಾಧ್ಯದ ಕೆಲಸವೇನಲ್ಲ ಎಂದಿದ್ದಾರೆ. ಇದರಿಂದ ಸುಗ್ರೀವಾಜ್ಞೆ ಪರ ವಾದಕ್ಕೆ ಇನ್ನಷ್ಟು ಬಲ ಬಂದಂತಾಗಿದೆ.

ದಕ್ಷಿಣ ಕೊರಿಯಾ ಅಯೋಧ್ಯೆ ಪ್ರೀತಿ!

ನ.6ರಂದು ಅಯೋಧ್ಯೆಯಲ್ಲಿ ನಡೆಯಲಿರುವ ದೀಪೋತ್ಸವಕ್ಕೆ ಮುಖ್ಯ ಅತಿಥಿಯಾಗಿ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ಪತ್ನಿ ಕಿಮ್ ಜುಂಗ್-ಸೂಕ್ ಆಗಮಿಸಲಿದ್ದಾರೆ. ಸುಮಾರು 2 ಸಾವಿರ ವರ್ಷಗಳ ಹಿಂದೆ ಅಯೋಧ್ಯೆ ಮೂಲದ ಸುರಿರತ್ನಾ ಎನ್ನುವವರು ದಕ್ಷಿಣ ಕೊರಿಯಾಕ್ಕೆ ಹೋಗಿ ರಾಣಿಯಾಗಿದ್ದರು. ಕರಕ್ ವಂಶದ ರಾಜ ಕಿಮ್ ಸುರೊ ಅವರನ್ನು ವಿವಾಹವಾಗಿ ದಕ್ಷಿಣ ಕೊರಿಯಾದಲ್ಲಿ ನೆಲೆಸಿದ್ದರು. ಹು ಹ್ವಾಂಗ್-ಒಕೆ ಎಂದು ಸುರಿರ್ತನಾ ಅವರನ್ನು ಕರೆಯಲಾಗುತ್ತಿತ್ತು.