ಮಳವಳ್ಳಿ: ತಾಲೂಕಿನ ಕಿರುಗಾವಲು ಗ್ರಾಮದ ರೈತನೊಬ್ಬರು ತಾವು ಸಾಕಿದ್ದ ಬಂಡೂರು ತಳಿಯ ಟಗರು ಬರೋಬ್ಬರಿ 1.48 ಲಕ್ಷ ರೂ. ಮಾರಾಟ ಮಾಡಿದ್ದಾರೆ.

ಗ್ರಾಮದ ರೈತ ಮನೋಹರ್ ಸಾಕಿದ್ದ ಬಂಡೂರು ತಳಿಯ ಕುರಿಯೊಂದು ಜನ್ಮ ನೀಡಿದ್ದ ಗಂಡು ಜಾತಿಯ 8 ತಿಂಗಳ ಟಗರು ದಾಖಲೆ ಬೆಲೆಗೆ ಮಾರಾಟವಾಗಿದೆೆ.
ಬಂಡೂರು ತಳಿಯ ಕುರಿಗಳು ದಕ್ಷಿಣ ಕರ್ನಾಟಕದಲ್ಲಿ ಬಹಳ ಬೇಡಿಕೆ ಹಾಗೂ ವಿಶೇಷತೆ ಹೊಂದಿದ್ದು, ಮನೆಯಲ್ಲೇ ಹುಟ್ಟಿದ್ದ ಕುರಿಯನ್ನು ಮುತುವರ್ಜಿಯಿಂದ ಸಾಕಿದ್ದರು.
ಬೆಂಗಳೂರು ಮೂಲದ ಜವಾದ್ ಎಂಬುವರು ಟಗರನ್ನು ತಳಿ ಅಭಿವೃದ್ಧಿಗಾಗಿ ಹೆಚ್ಚಿನ ಬೆಲೆ ನೀಡಿ ಖರಿದಿಸಿದ್ದಾರೆ.
ಭಾನುವಾರ ಮಾರಾಟವಾದ ಟಗರಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ನಂತರ ಜವಾದ್ ಅವರಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ರೈತನ ಪುತ್ರ ಉಲ್ಲಾಸ್ ಇದ್ದರು.