20.2 C
Bangalore
Thursday, December 5, 2019

ಹುಬ್ಬಳ್ಳಿ, ಗದಗದಲ್ಲಿ ಜನಾಗ್ರಹ ಸಭೆ: ರಾಮ ಮಂದಿರಕ್ಕಾಗಿ ಮೊಳಗಿದ ಕಹಳೆ

Latest News

ಬಿಜೆಪಿ ಖಾತೆ ತೆರೆಯಲಿದೆ

ಶ್ರೀರಂಗಪಟ್ಟಣ: ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಿರಾಯಾಸವಾಗಿ ಗೆಲ್ಲಲಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಪಕ್ಷ ಖಾತೆ ತೆರೆಯಲಿದೆ ಎಂದು ಮುಖ್ಯಮಂತ್ರಿಗಳ...

ಕೀಟನಾಶಕ ಸಿಂಪಡಣೆ ಪಂಪ್ ವಿತರಿಸದ ಕೃಷಿ ಇಲಾಖೆ

ರೋಣ: ತಾಲೂಕಿನಾದ್ಯಂತ ಕಡಲೆ ಬೆಳೆಗಳಿಗೆ ಕೀಟ ಬಾಧೆ ಹೆಚ್ಚಾಗಿದ್ದು, ಕೀಟನಾಶಕ ಸಿಂಪಡಣೆಯ ಪಂಪ್​ಗಳನ್ನು ವಿತರಿಸದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಗೌಡ ಪಾಟೀಲ...

ಕ್ಷೇತ್ರಾದ್ಯಂತ ಶಾಂತಿಯುತ ಮತದಾನ

ಕೆ.ಆರ್.ಪೇಟೆ: ಕೆ.ಆರ್.ಪೇಟೆ ಉಪ ಚುನಾವಣೆ ಹಿನ್ನೆಲೆ ಗುರುವಾರ ಶಾಂತಿಯುತವಾಗಿ ಮತದಾನ ನಡೆಯಿತು. ಒಂದೆರಡು ಕಡೆ ಮತಯಂತ್ರಗಳು ಕೈಕೊಟ್ಟಿದ್ದು ಬಿಟ್ಟರೆ, ಕ್ಷೇತ್ರದೆಲ್ಲೆಡೆ ಜನತೆ ತಮ್ಮ...

ಆಟೋ ಮೊಬೈಲ್​ ಕ್ಷೇತ್ರ ಮಂದಗತಿಯಲ್ಲಿದ್ದರೆ ಟ್ರಾಫಿಕ್​ ಜಾಮ್​ ಏಕೆ?: ಟೀಕೆಗೆ ಗುರಿಯಾದ ಬಿಜೆಪಿ ಸಂಸದ!

ನವದೆಹಲಿ: ದೇಶದ ಆಟೋ ಮೊಬೈಲ್​ ಉದ್ಯಮವು ಸಂಕಷ್ಟದಲ್ಲಿದೆ ಎಂಬ ಪ್ರತಿಪಕ್ಷಗಳ ಮಾತು ಕೇಂದ್ರ ಸರ್ಕಾರದ ಹೆಸರಿಗೆ ಕಳಂಕ ತರುವ ಕುತಂತ್ರ ಎಂದು ಬಿಜೆಪಿ...

ಹೈದರಾಬಾದ್​ ಬಡವರಿಗೆ ಈರುಳ್ಳಿ ಎಂಬ ಗಗನಕುಸುಮ

ಹೈದರಾಬಾದ್​: ಬಡ ಮತ್ತು ಮಧ್ಯಮವರ್ಗದ ಈಗ ಕಷ್ಟಕಾಲ. ಏಕೆಂದರೆ ಹೈದರಾಬಾದ್​ನಲ್ಲಿ ಈರುಳ್ಳಿ ಬೆಲೆ ಗಗನಕುಸುಮವಾಗಿದ್ದು ಕೆ.ಜಿ.ಗೆ 150 ರೂಪಾಯಿ ಆಗಿದೆ! ಈರುಳ್ಳಿ ಬೆಲೆ ಇನ್ನೂ ಮೇಲೇರುತ್ತಲೇ ಇದೆ....

ಹುಬ್ಬಳ್ಳಿ/ಗದಗ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಸಲುವಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ದೇಶಾದ್ಯಂತ ಹಲವು ಕಡೆಗಳಲ್ಲಿ ಇಂದು ಜನಾಗ್ರಹ ಸಭೆಗಳು ನಡೆಯುತ್ತಿವೆ. ಕರ್ನಾಟಕದಲ್ಲೂ ಉಡುಪಿ, ಹುಬ್ಬಳ್ಳಿ, ಗದಗದಲ್ಲಿ ಬೃಹತ್​ ಸಮಾವೇಶಗಳು ನಡೆಯುತ್ತಿವೆ. ಉಡುಪಿಯಲ್ಲಿ ಈಗಾಗಲೇ ಮಾತನಾಡಿರುವ ಪೇಜಾವರ ಶ್ರೀಗಳು ರಾಮ ಮಂದಿರ ನಿರ್ಮಾಣವಾಗದೇ ಇರುವುದು ಒಂದು ರಾಷ್ಟ್ರೀಯ ಅಪಮಾನ ಎಂದು ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿ, ಗದಗದ ಸಮಾವೇಶಗಳಲ್ಲಿಯೂ ಹಲವು ಮಠಾದೀಶರು, ಹಿಂದು ಸಂಘಟನೆಗಳ ಮುಖ್ಯಸ್ಥರು ಭಾಗವಹಿಸಿದ್ದು, ತಮ್ಮದೇ ವಾದ, ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.
ಹುಬ್ಬಳ್ಳಿ ಮತ್ತು ಗದಗದ ಸಮಾವೇಶದಲ್ಲಿ ಯಾರು ಏನು ಮಾತನಾಡಿದರು? ಇಲ್ಲಿದೆ ಹೇಳಿಕೆಗಳು

ಕಾಯ್ದೆ ಕಾನೂನು ಬೇಡ, ಸುಗ್ರೀವಾಜ್ಞೆ ತನ್ನಿ

ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಕೋಟಿ ಕೋಟಿ ಜನರ ಅಭಿಪ್ರಾಯಗಳನ್ನು ತಿಳಿದುಕೊಳ್ಳಬೇಕು. ನಮ್ಮ ಜನರ ಸಹನೆಯ ಕಟ್ಟೆ ಒಡೆದಿದೆ, ಈಗ ಕಾಯ್ದೆ, ಕಾನೂನು ‌ನೋಡಬಾರದು. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು.

|ಹುಬ್ಬಳ್ಳಿಯ ಸಿದ್ದ ಶಿವಯೋಗಿಗಳು ಸ್ವಾಮೀಜಿ

 

ನಾವು ಮೊದಲು ಹಿಂದುಗಳು ಆಮೇಲೆ ಜೈನರು

ರಾಮ ಮಂದಿರ ವಿಚಾರದಲ್ಲಿ ಸುಪ್ರೀಂ ಕೋರ್ಟ್​ ಜನರ ಭಾವನೆಗಳಿಗೆ ಬೆಲೆ‌ ಕೊಡಬೇಕು. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಕಣ್ಣುಬಿಟ್ಟು ನೋಡಲಿ. ರಾಮ ಮಂದಿರ ನಿರ್ಮಾಣವಾಗಲೇಬೇಕು. ಜೈನರು ಮೊದಲು ಹಿಂದುಗಳು ಅಮೇಲೆ ನಮ್ಮ‌ ದರ್ಮ.

|ಜೈನ ಮುನಿ ಜ್ಯೋತಿಷ್ಯಾರ್ಚಾಯ ಹೇಮಚಂದ್ರ ಸುರೀಶ್ವರಜೀ

 

ಅಂಬೇಡ್ಕರ್​ ಇದ್ದಿದ್ದರೆ ರಾಮ ಮಂದಿರಕ್ಕೆ ಒಪ್ಪುತ್ತಿದ್ದರು

ಭಾರತದಲ್ಲಿ ಹುಟ್ಟಿದವರೆಲ್ಲ ಹಿಂದುಗಳು. ಆಮೇಲೆ ಏನಾದರೂ ಆಗಬಹುದು. ಮುಸ್ಲಿಮರೇ ರಾಮ ಮಂದಿರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಸುಪ್ರೀಂ ಕೋರ್ಟ್‌ಗೆ ಏನಾಗಿದೆ. ಅಂಬೇಡ್ಕರ್ ಕೂಡ ಒಬ್ಬ ಹಿಂದುವಾದಿ. ಅವರ ಸಂವಿಧಾನವನ್ನು ತಿರುಚಲಾಗಿದೆ. ಇಂದು ಅಂಬೇಡ್ಕರ್ ಇದ್ದಿದ್ದರೆ ರಾಮ ಮಂದಿರ ಕಟ್ಟಲು ಅನುಕೂಲ ಮಾಡಿಕೊಡುತ್ತಿದ್ದರು. ರಾಮ ಮಂದಿರ ನಿರ್ಮಾಣ ಆಗಲಬೇಕು, ಅದು ಆಗೆ‌ ಆಗುತ್ತೆ. ಇದಕ್ಕೆ ಸರ್ಕಾರ ಮತ್ತು ನ್ಯಾಯಾಲಯ ಅವಕಾಶ ಮಾಡಿಕೊಡಬೇಕು.

|ಮನಗುಂಡಿಯ ಬಸವಾನಂದ ಸ್ವಾಮೀಜಿ

 

ಮೋದಿಗೆ ಬಹುಮತವಿದೆ ಕಾನೂನು ತರಲಿ

ಮೋಕ್ಷ ನೀಡುವ ಸ್ಥಳ ಅಯೋಧ್ಯೆ ಇಂದು ಬಂಧನಕ್ಕೊಳಗಾಗಿದೆ. ನ್ಯಾಯಾಲಯದ ಆದೇಶದ ಪ್ರಕಾರ ಅಲ್ಲಿ ಅನೇಕ ಉತ್ಖಲನಗಳಾಗಿವೆ. ಹೊರ ದೇಶದ ಸಂಸ್ಥೆಗಳೂ ಸ್ಥಳ ಪರಿಶೀಲನೆ ನಡೆಸಿವೆ. ಅಲ್ಲಿ ಮಂದಿರ ಇತ್ತು ಎಂಬುದು ಬಯಲಾಗಿದೆ. ಮೋದಿ ಸರ್ಕಾರಕ್ಕೆ ಬಹುಮತವಿದೆ. ಅವರು ಸಂಸತ್ತಿನಲ್ಲಿ ಮಸೂದೆ ಜಾರಿಗೆ ತರಲಿ. ಆ ಮೂಲಕವೇ ಮಂದಿರ ನಿರ್ಮಾಣ ಆಗಬೇಕು. ಹೀಗಾದಾಗ ಯಾವುದೇ ಸಮಸ್ಯೆ ಬರುವುದಿಲ್ಲ. ಹಿಂದೂಗಳ ತಾಳ್ಮೆಯನ್ನು ಇನ್ನು ಪರೀಕ್ಷೆ ಮಾಡಬಾರದು. ಸಮಸ್ಯೆ ಇತ್ಯರ್ಥ ಆಗದಿದ್ದರೆ ದೊಡ್ಡ ಹಿಂಸಾಚಾರ ನಡೆಯುವ ಸಾಧ್ಯತೆಗಳಿವೆ.

|ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಶ್ರೀ ಹೇಳಿಕೆ.

 

ಬಿಜೆಪಿ ನಮಗೆ ಮಾತು ಕೊಟ್ಟಿದೆ

ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಬಿಜೆಪಿ ದೇಶದ ಜನತೆಗೆ ಮಾತು ಕೊಟ್ಟಿದೆ. ಬಿಜೆಪಿ ಮೇಲೆ ನಮಗಿನ್ನೂ ವಿಶ್ವಾಸವಿದೆ. ಅದು ಬಾಬರನ‌ ಜನ್ಮಭೂಮಿ ಅಲ್ಲ. ರಾಮನ ಜನ್ಮಭೂಮಿ. ನ್ಯಾಯಾಲಯವೂ ಕೂಡ ಈ ವಿಚಾರದಲ್ಲಿ ನಮ್ಮ ಭಾವನೆಗಳನ್ನು ಕಡೆಗಣಿಸಲು ಬರುವುದಿಲ್ಲ. ಕೇಂದ್ರ ಸರ್ಕಾರ ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಬದ್ಧತೆ ಪ್ರದರ್ಶಿಸಬೇಕು. ಪೂರ್ಣ ಪ್ರಮಾಣದ ಬಹುಮತದಿಂದ ಸರ್ಕಾರ ಬಂದಾಗಿನಿಂದ ಬಿಜೆಪಿ‌ ಮೇಲೆ ನಿರೀಕ್ಷೆ ಇಟ್ಟಕೊಂಡಿದ್ದೇವೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಬೇಕು. ಕಾಂಗ್ರೆಸ್​ಗೂ ಕೂಡ ಈಗ ಬುದ್ಧಿ ಬಂದಿದೆ.

|ಜಬ್ಬಲಪುರದ ಮಹಾಮಂಡಳೇಶ್ವರ ಅಖಿಲೇಶ್ವರಂದಗಿರಿ ಮಹಾರಾಜ್

 

ಈ ಬಾರಿ ಮಂದಿರ ನಿರ್ಮಾಣದಿಂದ ಹಿಂದೆ ಸರಿಯಲ್ಲ

ರಾಮ ಮಂದಿರಕ್ಕಾಗಿ ಈ ವರೆಗೆ ಹಲವು ಹೋರಾಟಗಳಾಗಿವೆ. ಆದರೆ, ಈ ಸಲ ನಾವು ಕೈಬಿಡುವುದಿಲ್ಲ. ಎಂಥಹ ಸ್ಥಿತಿ ಬಂದರೂ ಮಂದಿರ ಶತಸಿದ್ಧ. ಮಂದಿರ ನಿರ್ಮಾಣಕ್ಕೆ ಸರ್ಕಾರದ ಅನುಮತಿ ಬೇಕು, ನೂರು ಕೋಟಿ ಭಾರತೀಯರ ಭಾವನೆಗಳಿಗೆ ಸರ್ಕಾರ ಗೌರವ ನೀಡಲಿದೆ ಎಂಬುದು ನಮ್ಮ ನಂಬಿಕೆ. ವಿದೇಶದಲ್ಲಿ ಶ್ರೀರಾಮ, ಶ್ರೀಕೃಷ್ಣ ಮಂದಿರಕ್ಕೆ ಜಾಗ ನೀಡುತ್ತಾರೆ, ಆದರೆ, ಭಾರತದಲ್ಲಿ ಮಂದಿರ ನಿರ್ಮಾಣಕ್ಕೆ ಅವಕಾಶ ಇಲ್ಲ, ಬೆರೆಳೆಣಿಕೆ ಜನರು ಮಂದಿರ ನಿರ್ಮಾಣಕ್ಕೆ ವಿರೋಧಿಸುತ್ತಾರೆ. ಅವರಿಗೆ ಬೆಲೆ ಕೊಡಬಾರದು. ಬೇರೆ ಬೇರೆ ಕಾರಣಗಳಿಗಾಗಿ ಮಧ್ಯರಾತ್ರಿ ಸುಪ್ರೀಂ ಕೋರ್ಟ್ ಬಾಗಿಲು ತೆಗೆದು ವಿಚಾರಣೆ ನಡೆಸುತ್ತದೆ. ರಾಮ ಮಂದಿರದ ವಿಚಾರದಲ್ಲಿ ಯಾಕಿಲ್ಲ. ಈ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರು ಯೋಚಿಸಬೇಕು.

|ವಿಎಚ್ ಪಿ ಜಿಲ್ಲಾ ಕಾರ್ಯದರ್ಶಿ ಶ್ರೀಧರ ಕುಲಕರ್ಣಿ

 

ಅಯೋಧ್ಯೆ ಯುದ್ಧದ ಕೇಂದ್ರವಾಗದಿರಲಿ

ಹೊಸ ಕಾನೂನು ಮಾಡಿ ಮಂದಿರ ನಿರ್ಮಾಣ ಮಾಡಬೇಕು. ಅದಕ್ಕಾಗಿ ಸುಗ್ರಿವಾಜ್ಣೆ ಹೊರಡಿಸಬೇಕು. ಆಂದೋಲನ ಮಾಡಬೇಕು. ಕೇಂದ್ರ ಸರ್ಕಾರ ಹಿಂದೂ ಸರ್ಕಾರ ಅಂತಾರೆ. ಹಾಗಾಗಿ ಕಾನೂನು ಮಾಡಲೇಬೇಕು. ಅಯೋಧ್ಯೆ ಯುದ್ಧದ ಕೇಂದ್ರ‌ ಆಗಬಾರದು. ಪ್ರೀತಿ ಕೇಂದ್ರ ಆಗಬೇಕು. ರಾಮ ಮಂದಿರ ಆಗಲೇಬೇಕು.ಈಗ ಟೆಂಟ್​ನಲ್ಲಿರುವ ರಾಮನನ್ನು ದೊಡ್ಡ ಮಂದಿರದಲ್ಲಿ ಕೂರಿಸಬೇಕು.

|ಕ್ಷೇತ್ರ ಸಂಯೋಜಕ ರಘುನಂದನಜೀ

Stay connected

278,732FansLike
579FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...