More

    ರಾಮಮಂದಿರ ನಿರ್ಮಾಣವಾಗುತ್ತಿದೆ, ಆದರೆ ರಾಮರಾಜ್ಯ ಎಲ್ಲಿದೆ?: ಪ್ರವೀಣ್​​ ತೊಗಾಡಿಯಾ ಪ್ರಶ್ನೆ

    ಅಮೇಠಿ: ಅಂತಾರಾಷ್ಟ್ರೀಯ ಹಿಂದೂ ಪರಿಷದ್​​​ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಬಿಜೆಪಿ ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ ಆದರೆ ರಾಮರಾಜ್ಯ ದೇಶದಲ್ಲಿ ನಿರ್ಮಾಣವಾಗಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

    ಕೇಂದ್ರ ಸರ್ಕಾರ ಶ್ರೀ ರಾಮ ಜನ್ಮಭೂಮಿ ವಿವಾದವನ್ನು ಬಗೆಹರಿಸಿದ್ದರ ಶ್ರೇಯಸ್ಸನ್ನು ಪಡೆದುಕೊಳ್ಳಲು ಪ್ರಯತ್ನ ಮಾಡುತ್ತಿವೆ ಎಂದು ಪ್ರವೀಣ್ ತೊಗಾಡಿಯಾ ಆರೋಪಿಸಿದ್ದರು. ಈಗ ರಾಮರಾಜ್ಯ ದೇಶದಲ್ಲಿ ನಿರ್ಮಾಣವಾಗಿಲ್ಲ ಎಂದು ಗುಡುಗಿದ್ದಾರೆ.

    ಉತ್ತರ ಪ್ರದೇಶದ ಅಮೇಠಿಯ ಪುರೆ ರಾಮದೀನ್​​ ಗ್ರಾಮದಲ್ಲಿನ ಕಾರ್ಯಕ್ರದಲ್ಲಿ ಮಾತಾಡಿದ ತೊಗಾಡಿಯಾ ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಆದರೆ ದೇಶ ರಾಮರಾಜ್ಯವಾಗಿಲ್ಲ. ಮಕ್ಕಳ ವಿದ್ಯಾವಂತರಾಗಲಿ, ಯುವಕರಿಗೆ ಉದ್ಯೋಗ ಸಿಗಲಿ, ದೇಶದ ರೈತರಿಗೆ ಬೆಳೆಗೆ ತಕ್ಕಂತ ಬೆಲೆ ಸಿಗಲಿ ಮತ್ತು ಹಿಂದೂಗಳು ಮನೆ ಕಟ್ಟಿಕೊಳ್ಳಲಿ ಎಂದು ಬಯಸುತ್ತೇನೆ. ಹಿಂದೂಗಳು ಜತೆಯಾಗಿ ಎಲ್ಲರನ್ನು ಎಚ್ಚರಗೊಳಿಸಿ ರಾಮಮಂದಿರ ಕಟ್ಟುವ ಅಭಿಯಾನ ಆರಂಭೀಸಿದ್ದರು. ದೇಣಿಗೆ ಸಂಗ್ರಹಿಸಲು ಪ್ರತಿ ಹಳ್ಳಿಗೆ ಹೋಗಿ ದೇಣಿಗೆಯ ಜತೆ ಜನರ ಬೆಂಬಲವನ್ನು ತಂದಿದ್ದರು. ದೇಶ ಸಮೃದ್ಧಿ ಮತ್ತು ಸುರಕ್ಷಿತವಾಗಿಸಲು, ಹಿಂದೂಗಳು ಮುಂದೆ ಬರಬೇಕು’ ಎಂದು ಹೇಳಿದ್ದಾರೆ.

    ನಮ್ಮಲ್ಲೇ ಮೊದಲು: ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ-ತಂತ್ರಜ್ಞಾನ ಬಳಸಿ ಬರೆದ ಸುದ್ದಿ; ಇದು ಸಮಸ್ತ ಹಿರಿಯ ನಾಗರಿಕರಿಗೆ ಅರ್ಪಣೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts