ರಾಮಮಂದಿರ ಪ್ರಕರಣ ಬಗ್ಗೆ ದೈನಂದಿನ ವಿಚಾರಣೆಗೆ ಒತ್ತಡ

ನವದೆಹಲಿ: ರಾಮಮಂದಿರ ನಿರ್ಮಾಣ ಕುರಿತು ಹಿಂದು ಸಂಘಟನೆಗಳಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ತ್ವರಿತ ಹಾಗೂ ದೈನಂದಿನ ವಿಚಾರಣೆಗೆ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆಸುತ್ತಿರುವಾಗ ಮಸೂದೆ ಅಥವಾ ಸುಗ್ರೀವಾಜ್ಞೆ ಅಸಾಧ್ಯ ಎಂಬ ಮಾತುಗಳು ಕೇಳಿ

ಬರುತ್ತಿವೆ. ಹೀಗಾಗಿ ಸುಪ್ರೀಂ ಕೋರ್ಟ್ ಮೂಲಕವೇ ಮಂದಿರ ನಿರ್ವಣದ ಬಗ್ಗೆ ಸ್ಪಷ್ಟನೆ ಪಡೆಯಲು ಕೇಂದ್ರ ಸಜ್ಜಾಗಿದೆ. ಕ್ರಿ್ರ್ಮಸ್ ರಜೆ ಬಳಿಕ ಕಲಾಪ ಆರಂಭವಾಗುತ್ತಿದ್ದಂತೆ ಭೂ ವಿವಾದದ ಅರ್ಜಿ ವಿಚಾರಣೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಕಳೆದ ಅಕ್ಟೋಬರ್​ನಲ್ಲಿ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ನ್ಯಾಯಪೀಠ, ತ್ವರಿತ ವಿಚಾರಣೆಗೆ ನಿರಾಕರಿಸಿತ್ತು. ರಾಮಮಂದಿರ ಅರ್ಜಿ ವಿಚಾರಣೆ ಕೋರ್ಟ್​ನ ಆದ್ಯತೆಯಲ್ಲ ಎಂದು ಸ್ಪಷ್ಟಪಡಿಸಿತ್ತು.

ಜ.4ಕ್ಕೆ ವಿಚಾರಣೆ

ರಾಮಮಂದಿರ ಭೂ ವಿವಾದ ಕುರಿತು ಅರ್ಜಿಯನ್ನು ಕೂಡಲೇ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿ ಸುಪ್ರೀಂ ಕೋರ್ಟ್​ನಲ್ಲಿ ಮತ್ತೆರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿವೆ. ಜ.4ರಂದು ಅರ್ಜಿ ವಿಚಾರಣೆಗೆ ಬರಲಿವೆ.

ಮಂದಿರ ಕಟ್ಟಿದ್ರೆ ಮತ

ಲಖನೌನಲ್ಲಿ ಆಯೋಜನೆಗೊಂಡಿದ್ದ ಯುವ ಕುಂಭ ಮೇಳ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ರಾಜ್​ನಾಥ್ ಸಿಂಗ್ ಅವರ ಭಾಷಣಕ್ಕೆ ಜನರು ಅಡ್ಡಿಪಡಿಸಿದ್ದಾರೆ. ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಿುಸುವವರಿಗೆ ನಮ್ಮ ಮತ’ ಎಂದು ಘೋಷಣೆ ಕೂಗಿದ ಸಭಿಕರು ಭಾಷಣಕ್ಕೆ ಅಡ್ಡಿಪಡಿಸಿದರು.