ಮಂದಿರ ತ್ವರಿತ ವಿಚಾರಣೆಗೆ ಸಚಿವ ರವಿಶಂಕರ್ ಆಗ್ರಹ

ಲಖನೌ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಪ್ರಕರಣವನ್ನು ವಿಚಾರಣೆ ಮಾಡಿದ ರೀತಿಯಲ್ಲಿ ರಾಮಮಂದಿರ ವಿವಾದವನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್​ಗೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಆಗ್ರಹಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಂಗಳವಾರ ಮಾತನಾಡಿದ ಪ್ರಸಾದ್, ಶಬರಿಮಲೆ ಪ್ರಕರಣವನ್ನು ತ್ವರಿತ ವಿಚಾರಣೆಗೆ ಕೈಗೆತ್ತಿಕೊಳ್ಳಬಹುದು ಎಂದಾದರೆ, ರಾಮಜನ್ಮಭೂಮಿ ವಿವಾದವೇಕೆ ವಿಚಾರಣೆ ನಡೆಸಲು ಆಗುವುದಿಲ್ಲ? ವೈಯಕ್ತಿಕ ನೆಲೆಗಟ್ಟಿನಲ್ಲಿ ಕೋರ್ಟ್​ಗೆ ಮನವಿ ಮಾಡುತ್ತಿದ್ದು, 70 ವರ್ಷಗಳ ವಿವಾದಕ್ಕೆ ತೆರೆ ಎಳೆಯಬೇಕು ಎಂದಿದ್ದಾರೆ.

ತ್ವರಿತ ವಿಚಾರಣೆಗೆ ಕೇಂದ್ರ ಕಾನೂನು ಇಲಾಖೆ ಅರ್ಜಿ ಸಲ್ಲಿಸಲಿದೆ ಎಂಬ ಸುದ್ದಿಗಳು ಪ್ರಕಟವಾದ ಬೆನ್ನಲ್ಲೇ ಕೇಂದ್ರ ಸಚಿವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. 2019ರ ಲೋಕಸಭೆ ಚುನಾವಣೆಗೂ ಮೊದಲು ಕೋರ್ಟ್ ಆದೇಶ ಪಡೆಯುವುದು ಕೇಂದ್ರದ ಉದ್ದೇಶವಾಗಿದೆ.

ನಾವೇಕೆ ಬಾಬರ್ ಪೂಜಿಸಬೇಕು? ಸಂವಿಧಾನದಲ್ಲಿ ರಾಮ, ಕೃಷ್ಣ ಅಥವಾ ಅಕ್ಬರ್ ಹೆಸರು ಉಲ್ಲೇಖವಾಗಿದೆ. ಆದರೆ ಬಾಬರ್ ಪ್ರಸ್ತಾಪ ಇಲ್ಲ. ಇದನ್ನು ಹೇಳಿದರೆ ವಿವಾದ ಎಬ್ಬಿಸಲಾಗುತ್ತದೆ.

| ರವಿಶಂಕರ್ ಪ್ರಸಾದ್ ಕೇಂದ್ರ ಕಾನೂನು ಸಚಿವ