More

    PHOTOS| ಬಹುಭಾಷ ನಟಿ ರಾಕುಲ್​ ಪ್ರೀತ್​ ಬಿಕಿನಿ ಪೋಸ್​​ಗೆ ಕ್ಲೀನ್​ ಬೋಲ್ಡ್​ ಆದ ಪಡ್ಡೆ ಹುಡುಗರು!

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ಬಹುಭಾಷ ನಟಿ ರಾಕುಲ್​ ಪ್ರೀತ್​ ಸಿಂಗ್, ಆಗಾಗ ಅಭಿಮಾನಿಗಳಿಗೆ ಸರ್ಪ್ರೈಸ್​ ನೀಡುತ್ತಿರುತ್ತಾರೆ. ಇದೀಗ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬಿಕಿನಿ ಫೋಟೋವೊಂದನ್ನು ಶೇರ್​ ಮಾಡುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿರುವ ಜತೆಗೆ ಫೋಟೋ ಕೂಡ ವೈರಲ್​ ಆಗಿದೆ.

    ಬೀಚ್​ವೊಂದರಲ್ಲಿ ನೀಲಿ ಬಣ್ಣದ ಬಿಕಿನಿ ತೊಟ್ಟು ನಿಂತು ಕ್ಯಾಮರಾಗೆ ರಾಕುಲ್​ ಪೋಸ್​ ನೀಡಿದ್ದಾರೆ. ಒರಟು ಹೃದಯದೊಂದಿಗೆ ಕೇವಲ ಮುಕ್ತ ಮನೋಭಾವ ಮತ್ತು ತೆರೆದ ರಸ್ತೆಯು ಮುಂದಿದೆ ಎಂದು ಅಡಿಬರಹ ಬರೆದುಕೊಂಡಿದ್ದಾರೆ.

    ನಿನ್ನೆಯಷ್ಟೇ ಅಪ್​ಲೋಡ್​ ಮಾಡಿರುವ ಬೋಲ್ಡ್​ ಫೋಟೋವನ್ನು ಈವರೆಗೂ ಸುಮಾರು 12 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ಸ್​ ಮಾಡಿದ್ದು, ರಾಕುಲ್​ ಮೈಮಾಟಕ್ಕೆ ಅಭಿಮಾನಿಗಳು ಮನಸೋತು ತಮ್ಮದೇ ರೀತಿಯಲ್ಲಿ ಅಭಿಪ್ರಾಯ ಮಂಡಿಸಿದ್ದಾರೆ. ರಾಕುಲ್​ 12.7 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ.

    ಅಂದಹಾಗೆ ರಾಕುಲ್​ ಮೊದಲು ಕನ್ನಡದ ಗಿಲ್ಲಿ ಚಿತ್ರದಲ್ಲಿ ಕಾಣಿಕೊಂಡರು. ಆದರೆ ಯಶಸ್ಸು ಸಿಗಲಿಲ್ಲ. ಬಳಿಕ ಚಿತ್ರರಂಗದಿಂದ ಕೆಲ ವರ್ಷ ದೂರ ಉಳಿದಿದ್ದ ಅವರು ತೆಲುಗು ಚಿತ್ರರಂಕ್ಕೆ ಪದಾರ್ಪಣೆ ಮಾಡಿದರು. ಅಲ್ಲಿಂದಾಚೆಗೆ ಸಾಲು ಸಾಲು ಚಿತ್ರಗಳಲ್ಲಿ ರಾಕುಲ್​ ಅಭಿನಯಿಸುತ್ತಾ ಬಂದಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಹೆಚ್ಚು ಸಕ್ರೀಯರಾಗಿದ್ದ ರಾಕುಲ್​ ಇದೀಗ ಬಾಲಿವುಡ್​ನಲ್ಲಿ ಮಿಂಚು ಹರಿಸುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts