ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ಸಿನಿಮಾ ಮಂದಿಯೂ ಒಂದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಂಡು ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ಸಿನಿಮಾ ಕೆಲಸಗಳಿಗೆ ಚಾಲನೆ ಕೊಟ್ಟಿದ್ದರಿಂದ ಆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್, ಮುನ್ನೆಚ್ಚರಿಕೆ ದೃಷ್ಟಿಯಿಂದ ಪಿಪಿಇ ಕಿಟ್ ಧರಿಸಿಯೇ ರಸ್ತೆಗಿಳಿದಿದ್ದಾರೆ. ಇತ್ತೀಚೆಗೆ ಏರ್ಪೋರ್ಟ್ನಲ್ಲಿ ಅವರ ಅವತಾರ ಕಂಡು ಸ್ವತಃ ಏರ್ಪೋರ್ಟ್ ಮಂದಿಯೇ ದಿಗ್ಭ್ರಾಂತರಾಗಿದ್ದಾರೆ.
ಇದನ್ನೂ ಓದಿ: VIDEO| ಸರಳವಾಗಿ ನಡೆಯಿತು ಮಯೂರಿ ಮದುವೆ …
ಹೌದು, ಪಿಪಿಇ ಕಿಟ್ ಧರಿಸಿಯೇ ದೆಹಲಿಗೆ ತೆರಳಲು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ರಾಕುಲ್, ಫುಲ್ ಪ್ಯಾಕ್ ಆಗಿದ್ದರು. ಒಂದು ಕ್ಷಣ ಇದು ರಾಕುಲ್ ಎಂದು ಯಾರಿಗೂ ಗೊತ್ತಾಗದ ಹಾಗೆ ಕೈಗವುಸು, ಮಾಸ್ಕ್ ಧರಿಸಿ ಎಂಟ್ರಿಕೊಟ್ಟಿದ್ದರು. ಅವರ ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ (ಏಜೆನ್ಸೀಸ್)