ಚಿಕ್ಕಮಗಳೂರು: ಆಕಸ್ಮಿಕವಾಗಿ ನಾವು ಯಾವುದಾದರೂ ಹಾವನ್ನ ನೋಡಿದ್ರೆ ಬೆಚ್ಚಿಬೀಳ್ತೇವೆ. ಇದೀಗ ಉರಗಗಳ ಸಂತತಿಯಲ್ಲೇ ಮೋಸ್ಟ್ ಡೇಂಜರ್ ಎಂದು ಕರೆಯಲ್ಪಡುವ ಹಾವೊಂದು ಕಾಫಿ ನಾಡಿನಲ್ಲಿ ಕಾಣ ಸಿಕ್ಕಿದೆ.
ಮಲೆನಾಡು ಭಾಗದಲ್ಲಿ ಹಾವಿನ ಸಂತತಿಯಲ್ಲೇ ತುಂಬಾ ಅಪರೂಪದ, ಅಪಾಯಕಾರಿ ಹಾವು ಇ್ದಾಗಿದ್ದು, ಇದನ್ನ ರಕ್ತಕನ್ನಡಿ ಹಾವು ಎಂದು ಕರೆಯಲಾಗುತ್ತೆ. ಚಿಕ್ಕಮಗಳೂರಿನ ಕಳಸ ತಾಲೂಕಿನ ಕಲ್ಮಕ್ಕಿ ಗ್ರಾಮದಲ್ಲಿ ತುಂಬಾ ಅಪಾಯಕಾರಿ ನಾಗರಾಜ ಪತ್ತೆಯಾಗಿದ್ದಾನೆ.
ಉರಗತಜ್ಞ ರಿಜ್ವಾನ್ ಮನೆ ಅಂಗಳದಲ್ಲಿ ಇದು ಆಕಸ್ಮಿಕವಾಗಿ ಕಾಣಿಸಿದೆ. ಇದರ ವಿಷದಿಂದಲೇ ಅತ್ಯಂತ ಅಪಾಯಕಾರಿ ಹಾವು ಎಂದು ತಿಳಿದು ಬಂದಿದೆ.
ಈ ಹಾವಿನ ಮೇಲ್ಭಾಗ ಕಪ್ಪುಗೆ ಕಾಣಿಸಿದರೆ ಕೆಳಭಾಗ ಮಾತ್ರ ಕೆಂಪು ಬಣ್ಣದಿಂದ ಕೂಡಿರುತ್ತದೆ. ಹೀಗಾಗಿ ನೋಡಲು ಹುಬ್ಬೇರಿಸುವಂತಿದೆ. ಆದರೆ ಇದರ ವಿಷ ಮಾತ್ರ ದುಪ್ಪಟ್ಟಾಗಿರುತ್ತೆ.
ಈ ಹಾವನ್ನು ಮಲೆನಾಡಿನಲ್ಲಿ ಹಪ್ಪಟೆ, ರಕ್ತಗನ್ನಡಿ, ಹವಳದ ಹಾವು ಎನ್ನುವ ನಾಮಗಳಿಂದ ಕರೆಯುತ್ತಾರೆ. ದೇಹದ ಮೇಲೆ ಕಪ್ಪು, ಕೆಳಭಾಗ ಕೆಂಪು ಬಣ್ಣ ಇರುತ್ತೆ. ಇದರ ಹಲ್ಲುಗಳು ಬಾಗಿರುವುದರಿಂದ ವಿಷ ಇತರೆ ಜೀವಿಗಳ ದೇಹ ಸೇರುವುದು ಕಡಿಮೆ.
ಮನುಷ್ಯನಿಗೆ ಈ ಹಾವು ಕಚ್ಚಿದರೆ ಮನುಷ್ಯ ಸಾಯುವುದು ಕಡಿಮೆ. ಆದರೆ ದೇಹಕ್ಕೆ ಮಾತ್ರ ಬೇರೆ ಬೇರೆ ಸಮಸ್ಯೆಗಳು ಬರುತ್ತವೆ. ಈ ಸಮಸ್ಯೆಗಳಿಗೆ ಔಷಧಿನೇ ಸಿಗುವುದಿಲ್ಲ. ಹೀಗಾಗಿ ನರಳಿ ನರಳಿ ಕೊನೆಗೆ ಮನುಷ್ಯ ಜೀವ ಬಿಡುತ್ತಾನೆ. ಪಶ್ಚಿಮ ಘಟ್ಟಗಳ ಭಾಗದಲ್ಲಿ ಮಾತ್ರ ಕಾಣಸಿಗುವ ಅಪರೂಪದ ಹಾವು ಆಗಿದೆ.