More

  ‘ರಿಚರ್ಡ್​ ಆಂಟನಿ’ ಬಗ್ಗೆ ಅಪ್​ಡೇಟ್​ ಕೊಟ್ಟ ರಕ್ಷಿತ್ ಶೆಟ್ಟಿ; ಸ್ಕ್ರಿಪ್ಟ್ ಕೆಲಸಕ್ಕಾಗಿ ಯುಎಸ್​ಎಗೆ ಹೋಗುತ್ತಿದ್ದಾರಂತೆ ‘ರಿಚ್ಚಿ’!

  ಉಡುಪಿ: ರಕ್ಷಿತ್ ಶೆಟ್ಟಿ ನಿರ್ದೇಶನದ ಉಳಿದವರು ಕಂಡಂತೆ ಸಿನಿಮಾದ ಮುಂದುವರೆದ ಭಾಗ ಎನ್ನಲಾಗುತ್ತಿರುವ ರಿಚರ್ಡ್​ ಆಂಟನಿ ಸಿನಿಮಾ ಘೋಷಣೆಯಾದಾಗಿನಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಈ ಬಗ್ಗೆ ಮಾಹಿತಿ​ ನೀಡುವಂತೆ ಅಭಿಮಾನಿಗಳು ಬಹಳಷ್ಟು ಬಾರಿ ರಕ್ಷಿತ್ ಶೆಟ್ಟಿ ಬಳಿ ಕೇಳಿಕೊಂಡಿದ್ದರು. ಆದರೆ ‘ಚಾರ್ಲಿ 777’ ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಕೆಲಸಗಳಲ್ಲಿ ಬಿಝಿಯಾಗಿದ್ದ ರಕ್ಷಿತ್, ಇದೀಗ ರಿಚರ್ಡ್ ಆಂಟನಿ ಸಿನಿಮಾ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

  ಇದನ್ನೂ ಓದಿ: ಇದೊಂದು ಕಾರಣಕ್ಕೆ ಯಾವುದೇ ಅಭ್ಯರ್ಥಿಯ ಪರ ಪ್ರಚಾರಕ್ಕೆ ಬಂದಿಲ್ಲ! ಮತದಾನದ ಬಳಿಕ ಯಶ್ ಹೇಳಿದ್ದಿಷ್ಟು…

  ಯುಎಸ್​ಗೆ ಹೋಗುತ್ತಿದ್ದೇನೆ…

  ಉಡುಪಿಯಲ್ಲಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತಮ್ಮ ಸಿನಿಮಾ ಕೆಲಸಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ರಿಚರ್ಡ್ ಆಂಟನಿ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸ ಕಾರ್ಯಗಳು ನಡೆಯುತ್ತಿವೆ. ಚಿತ್ರಕಥೆಯ ಕೊನೆಯ ಹಂತ ಪೂರ್ಣಗೊಳಿಸಲು ಸಧ್ಯದಲ್ಲೇ ಯುಎಸ್​​ಎಗೆ ಹೋಗುತ್ತಿದ್ದೇನೆ. ಇಲ್ಲಿ ರಾತ್ರಿ ಇದ್ದಾಗ, ಅಲ್ಲಿ ಬೆಳಗ್ಗೆ ಇರುತ್ತದೆ. ಇದರಿಂದ ಕೆಲಸ ಮಾಡಲು ಸುಲಭವಾಗುತ್ತದೆ. ಮುಖ್ಯವಾಗಿ ಫೋನ್ ಕರೆಗಳ ಸಮಸ್ಯೆ ಎದರಾಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

  ಇದನ್ನೂ ಓದಿ: ಯಾವ ಉದ್ದೇಶಕ್ಕೆ ಟ್ರೋಲ್ ಆಗಬೇಕು ಎನ್ನುತ್ತಲೇ ಪ್ರಶಾಂತ್ ಸಂಬರಗಿಗೆ ಟಾಂಗ್ ಕೊಟ್ಟ ಶಿವಣ್ಣ!

  ಹೊಂಬಾಳೆ ಬ್ಯಾನರ್​ನಲ್ಲಿ ಸಿನಿಮಾ ನಿರ್ಮಾಣ

  ‘ರಿಚರ್ಡ್ ಆಂಟನಿ’ ಸಿನಿಮಾ ಹೊಂಬಾಳೆ ಬ್ಯಾನರ್​ನಲ್ಲಿ ತಯಾರಾಗುತ್ತಿದ್ದು, ರಕ್ಷಿತ್ ಶೆಟ್ಟಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರ 2021ರಲ್ಲಿ ಘೋಷಣೆಯಾಗಿದ್ದು, ಎಲ್ಲವೂ ಸರಿಯಾಗಿದ್ದು 2022ರಲ್ಲಿ ಬಿಡುಗಡೆ ಕಾಣಬೇಕಾಗಿತ್ತು. ಇದೀಗ ರಕ್ಷಿತ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಅಂತಿಮ ಹಂತದ ಕೆಲಸ ಕಾರ್ಯಗಳು ಮುಕ್ತಾಯವಾದಂತೆ, ರಿಚರ್ಡ್ ಆಂಟನಿ ಸಿನಿಮಾ ಕೆಲಸಗಳು ಪ್ರಾರಂಭವಾಗಬೇಕಿವೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts