ಕ್ಯಾನ್ಸರ್ ಪೀಡಿತ ನಿರ್ದೇಶಕ ರಾಕೇಶ್​ ರೋಷನ್ ಆರೋಗ್ಯ ಸುಧಾರಣೆಯಾಗಲಿ ಎಂದು ಪ್ರಧಾನಿ ಹಾರೈಕೆ

ಮುಂಬೈ: ನಟ ಹೃತಿಕ್​ ರೋಷನ್​ ತಂದೆ, ನಿರ್ದೇಶಕ ರಾಕೇಶ್​ ರೋಷನ್​ (69) ಮೊದಲ ಹಂತದ ಗಂಟಲು ಕ್ಯಾನ್ಸರ್​ನಿಂದ ಬಳಲುತ್ತಿದ್ದು ನಿನ್ನೆ ಸರ್ಜರಿಗೆ ಒಳಗಾಗಿದ್ದಾರೆ. ಅವರ ಆರೋಗ್ಯ ಶೀಘ್ರ ಸುಧಾರಣೆಯಾಗಲಿ ಎಂದು ಪ್ರಧಾನಿ ಮೋದಿ ಟ್ವೀಟ್​ ಮಾಡಿ ಹಾರೈಸಿದ್ದಾರೆ.

ನಿನ್ನೆ ಹೃತಿಕ್​ ರೋಷನ್​ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಂದೆಗೆ ಕ್ಯಾನ್ಸರ್​ ಇದ್ದು ಸರ್ಜರಿಗೆ ಒಳಗಾಗುತ್ತಿದ್ದಾರೆ. ಅಷ್ಟಾದರೂ ಇಂದು ಬೆಳಗ್ಗೆ ಜಿಮ್​ ಮಾಡಿದ್ದಾರೆ. ಅವರೊಬ್ಬ ಶಕ್ತಿಶಾಲಿ. ಕ್ಯಾನ್ಸರ್​ ಎದುರಿಸುತ್ತಾರೆಂಬ ಆತ್ಮವಿಶ್ವಾಸವಿದೆ ಎಂದು ತಿಳಿಸಿದ್ದರು.

ಅದನ್ನು ನೋಡಿದ ಹಲವು ಗಣ್ಯರು ರಾಕೇಶ್​ ರೋಷನ್​ ಆರೋಗ್ಯ ಸುಧಾರಣೆಯಾಗಲಿ ಎಂದು ಪ್ರಾರ್ಥಿಸಿ ಹಾರೈಸಿದ್ದು ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ. ಪ್ರಿಯ ಹೃತಿಕ್​, ನಿಮ್ಮ ತಂದೆ ರಾಕೇಶ್​ ಅವರ ಆರೋಗ್ಯ ಶೀಘ್ರವೇ ಸುಧಾರಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅವರು ಖಂಡಿತ ಧೈರ್ಯದಿಂದ ಕ್ಯಾನ್ಸರ್​ ವಿರುದ್ಧ ಹೋರಾಡುತ್ತಾರೆ ಎಂದು ಹೇಳಿದ್ದಾರೆ.

ಹೃತಿಕ್ ರೋಷನ್​ ಮಾಜಿ ಪತ್ನಿ ಸುಸ್ಸಾನೆ ಖಾನ್​ ಕೂಡ ಟ್ವೀಟ್​ ಮಾಡಿದ್ದು, ರಾಕೇಶ್​ ರೋಷನ್​ ಅವರು ಸೂಪರ್​ಹಿರೋಗಳಿಗಿಂತ ಬಲಿಷ್ಠ. ಅವರು ಖಂಡಿತ ಕ್ಯಾನ್ಸರ್​ ಗೆಲ್ಲುತ್ತಾರೆ ಎಂದಿದ್ದಾರೆ.