More

    ಕೊಪ್ಪಳದ ಮೂವರಿಗೆ ರಾಜ್ಯೋತ್ಸವ ಗರಿ

    ಕೊಪ್ಪಳ: ಜಿಲ್ಲೆಯ ಮೂವರು ಗಣ್ಯರಿಗೆ ಈ ಬರಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ಜಿಲ್ಲೆಗೆ ಹಿರಿಮೆ ಹೆಚ್ಚಿಸಿದೆ.

    ಅಂತಾರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ಕೇಶಪ್ಪ ಶಿಳ್ಳಿಕ್ಯಾತರ, ಭೂದಾನಿ ಹುಚ್ಚಮ್ಮ ಚೌದ್ರಿ ಹಾಗೂ ಹಗಲು ವೇಷಗಾರ ವಿಭೂತಿ ಗುಂಡಪ್ಪ ಅವರಿಗೆ ಪ್ರಶಸ್ತಿ ಬಂದಿದೆ.

    ಕಣ್ಮರೆಯಾಗುತ್ತಿರುವ ತೊಗಲು ಗೊಂಬೆ ಕಲೆಯನ್ನು ಉಳಿಸುವಲ್ಲಿ ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ಶಿಳ್ಳಿಕ್ಯಾತರ ಕುಟುಂಬದ ಪಾತ್ರ ಮಹತ್ವದ್ದಾಗಿದೆ.

    ಕೇಶಪ್ಪ ತಾಯಿ ಭೀಮವ್ವ ಅವರು ತೊಗಲು ಗೊಂಬೆ ಕಲಾವಿದೆ. ಇವರಿಗೆ 2014ರಲ್ಲೇ ರಾಜ್ಯೋತ್ಸವ ಬಂದಿದೆ. ಈಗ ಇವರ ಪುತ್ರ ಕೇಶಪ್ಪ ಸಹ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಇನ್ನು ತನಗೆ ಮಕ್ಕಳಿಲ್ಲದಿದ್ದರೂ ಶಾಲಾ ಮಕ್ಕಳನ್ನೇ ತನ್ನ ಮಕ್ಕಳೆಂದು ಅಂದುಕೊಂಡವರು ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮದ ಹುಚ್ಚಮ್ಮ ಚೌದ್ರಿ. ತಮ್ಮ ಜೀವನಕ್ಕೆ ಇದ್ದ 2 ಎಕರೆ ಜಮೀನನ್ನು ಶಾಲೆಗಾಗಿ ದಾನ ಮಾಡಿದ್ದಾರೆ.

    ಅದೇ ಶಾಲೆಯಲ್ಲಿ ಬಿಸಿಯೂಟ ನೌಕರಳಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾಳೆ. ಸದ್ಯ ಜೀವನಕ್ಕ ಕೂಲಿ ಮಾಡುತ್ತಿದ್ದಾಳೆ.

    ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ಹಗಲು ವೇಷಗಾರ ವಿಭೂತಿ ಗುಂಡಪ್ಪ ಅವರು ತಮ್ಮ ಜೀವನವನ್ನೇ ಜನಪದ ಕಲೆಗಾಗಿ ಮುಡಿಪಾಗಿಟ್ಟಿದ್ದಾರೆ.

    ಅಲೆಮಾರಿಯ ಬುಡ್ಗಜಂಗಮ ಸಮುದಾಯದ ಗುಂಡಪ್ಪ ಹಗಲುವೇಷದ ರೂಪಕಗಳಲ್ಲಿ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಹಿನ್ನೆಲೆಯ ಸಂಪ್ರದಾಯವನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿದ್ದಾರೆ.

    ಹಗಲುವೇಷ ಕಲೆಯ ಜತೆಗೆ ಜಾನಪದ ಹಾಡು, ತತ್ವಪದ, ದಾಸರ ಪದ, ಭಕ್ತಿಗೀತೆ, ಭಾವಗೀತೆ ಮತ್ತು ವಚನ ಗಾಯನದ ಮೂಲಕವೂ ಹೆಸರು ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts