ಯಾದಗಿರಿ : ಕನ್ನಡ ರಾಜ್ಯೋತ್ಸವ ಅಂಗವಾಗಿ ಸ್ತಬ್ಧಚಿತ್ರ ಪ್ರದರ್ಶನ ಹಾಗೂ ಮೆರವಣಿಗೆ ಗಮನ ಸೆಳೆಯಿತು. ಯಾದಗಿರಿ ನಗರಸಭೆ ಇಲಾಖೆಯಿಂದ ನೀರು ಶುದ್ಧಿಕೀರಣ ಘಟಕ ಸ್ತಬ್ಧಚಿತ್ರಗಳು, ಯಾದಗಿರಿ ಮಹಿಳ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಾಗೂ ಇಲಾಖೆಯಡಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳು, ಯಾದಗಿರಿ ಕೃಷಿ ಇಲಾಖೆ ಕೀಟನಾಶಕ ಬಳಕೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ವಿವಿಧ ಯೋಜನೆಗಳು, ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಕಾರ್ಯ ಮತ್ತು ಪಾಲನೆ ವಿಭಾಗ ಯಾದಗಿರಿಯಿಂದ (ಪಿಎಂ ಕುಸೂಮ-ಬಿ) ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ್ (ಕುಸುಮ್) ಯೋಜನೆಯನ್ನು, ಯಾದಗಿರಿ ತಹಸೀಲ್ದಾರರು ಕಾರ್ಯಾಲಯದಿಂದ ಇಲಾಖೆಯ ವಿವಿಧ ಯೋಜನೆಗಳು, ಸಿದ್ದಿಕಿ ಉರ್ದು ಹಿರಿಯ ಪ್ರೌಢ ಶಾಲೆ ಯಾದಗಿರಿದಿಂದ ಸ್ವಾತಂತ್ರö್ಯ ಹೋರಾಟಗಾರರು ಪ್ರದರ್ಶಿಸಲಾಯಿತು
ಲಿಂಗರಾಜ ಸ್ಮಾರಕ ಅನುಭವ ಮಂಟಪದ ಪಾರ್ಥ ದಾರಿಗಳು ಪ್ರದರ್ಶನ, ಮೃತ್ತುಂಜಯ ಡಿಎಆರ್ ಯಾದಗಿರಿ ದಿಂದ ಪೊಲೀಸ್ ಜಾಗೃತಿ ಕಾರ್ಯಕ್ರಮ ಪ್ರದರ್ಶನ, ರತ್ನಂ ಪ್ರೌಢ ಶಾಲೆ ಯಾದಗಿರಿ ದಿಂದ ಕನ್ನಡ ಏಕೀಕೃತ ಹೋರಾಟಗಾರರ ಕನ್ನಡ ಜ್ಞಾನ ವೀರ ಪ್ರಶಸ್ತಿ ಯಾದಗಿರಿ ಜಿಲ್ಲೆಯ ಪ್ರವಾಸಿ ತಾಣಗಳು ಪ್ರದರ್ಶನ, ಯಾದಗಿರಿ ಜಿಲ್ಲಾ ಪಂಚಾಯತ್ ಗ್ರಾಮೀಣಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ ಸಂಜೀವಿನಿ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ನರೇಗಾ ಮತ್ತು ಸ್ವಚ್ಛ ಭಾರತ್ ಅಭಿಯಾನ ರೈತರ ಹೊಲದಲೂ ರಸಗೊಬ್ಬರ ಕೀಟನಾಶಕ ಸಿಂಪಡಣಿಯ ಕುರಿತು ಪ್ರದರ್ಶನ, ಕಲ್ಯಾಣ ಕರ್ನಾಟಕ ರಸ್ತೆ ಸಾನಿಕ ನಿಗಮ ಯಾದಗಿರಿ ವಿಭಾಗ ಯಾದಗಿರಿದಿಂದ ಪೋಷಣಿಯ ಸ್ಥಳಗಳು, ಭುವನೇಶ್ವರಿ ಬಸ್ ಸಾಗರ ಜಲಾಶಯ, ಮೊತ್ಕರ್‌ಪಲ್ಲಿ, ಶಹಾಪೂರ ಬುದ್ಧ ಮಲಗಿರುವ ಬೆಟ್ಟ ಪ್ರದರ್ಶಿಸಲಾಯಿತು. ವಡಗೇರ ರೆಡ್ಡಿ ಮತ್ತು ತಂಡ ಗಾರುಡ ಗೊಂಬೆ ಪ್ರದರ್ಶನ, ಬೀರಲಿಂಗಪ್ಪ ತಂಡ ಮಂಜಲಾಪೂರ ಡೊಳ್ಳುಕುಣಿತ ಪ್ರದರ್ಶನ, ಮನೋಹರ ತಂಡದಿಂದ ಲಂಬಾಣಿ ನೃತ್ಯ ಪ್ರದರ್ಶಿಸಲಾಯಿತು.