‘ಕಣ್ಮಣಿ’ ಇಷ್ಟ ನಂಗೆ: ‘ರಾಜು ಜೇಮ್ಸ್ ಬಾಂಡ್’ನ ರೊಮ್ಯಾಂಟಿಕ್ ಸಾಂಗ್‌ನಲ್ಲಿ ಗುರುನಂದನ್, ಮೃದುಲಾ

blank

ಬೆಂಗಳೂರು: ‘ಫಸ್ಟ ರ್ಯಾಂಕ್ ರಾಜು’ ಖ್ಯಾತಿಯ ಗುರುನಂದನ್ ಅಭಿನಯಿಸುತ್ತಿರುವ ಮುಂದಿನ ಸಿನಿಮಾ ‘ರಾಜು ಜೇಮ್ಸ್ ಬಾಂಡ್’. ದೀಪಕ್ ಮಧುವನಹಳ್ಳಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಟೀಸರ್ ಹಾಗೂ ‘ಬೇಕಿತ್ತಾ ಬೇಕಿತ್ತಾ’ ಸಾಂಗ್ ಮೂಲಕ ಗಮನಸೆಳೆದಿರುವ ಈ ಸಿನಿಮಾದ ಮತ್ತೊಂದು ರೊಮ್ಯಾಂಟಿಕ್ ಹಾಡು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು. ‘ಕಣ್ಮಣಿ ಇಷ್ಟ ನಂಗೆ ನಿನ್ನ ಮುದ್ದು ಕೀಟಲೆ’ ಎಂದು ಸಾಗುವ ಗೀತೆಯನ್ನು ಜ್ಯೋತಿ ವ್ಯಾಸರಾಜ್ ರಚಿಸಿದ್ದಾರೆ. ರಿದಂಮಿಕ್ ಆಗಿ ಮೂಡಿಬಂದಿರುವ ಈ ಹಾಡಿಗೆ ಜೆ.ಅನೂಪ್ ಸೀಳಿನ್ ಸಂಗೀತ ನೀಡಿದ್ದು, ಸಂಜಿತ್ ಹೆಗ್ಡೆ ಧ್ವನಿಯಾಗಿದ್ದಾರೆ. ಗುರುನಂದನ್ ಹಾಗೂ ಮೃದುಲಾ ಹೆಜ್ಜೆ ಹಾಕಿದ್ದಾರೆ. ಲಂಡನ್‌ನ ವಿವಿಧ ಭಾಗಗಳಲ್ಲಿ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ಗುರುನಂದನ್, ‘ಈ ಹಾಡಿನಲ್ಲಿ ಚೆನ್ನಾಗಿ ನೃತ್ಯ ಮಾಡಿದ್ದೇನೆ ಎಂದರೆ ಅದಕ್ಕೆ ಮುರಳಿ ಮಾಸ್ಟರ್ ಕಾರಣ. ನಮ್ಮ ಚಿತ್ರ ಡಿಸೆಂಬರ್ ಕೊನೆಯಲ್ಲಿ ಬಿಡುಗಡೆಯಾಗ ಬೇಕಿತ್ತು. ದೊಡ್ಡ ಎರಡು ಚಿತ್ರಗಳು ಅದೇ ಸಮಯಕ್ಕೆ ರಿಲೀಸ್ ಆಗಿರುವುದರಿಂದ ಹಾಗಾಗಿ ಮುಂದೂಡಿದ್ದೆವು. ಈಗ ಫೆ.14ರಂದು ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ನೇಪಾಳಿ ಭಾಷೆಗೆ ಚಿತ್ರದ ಹಕ್ಕುಗಳು ಮಾರಾಟವಾಗಿರುವುದು ಖುಷಿ ತಂದಿದೆ’ ಎಂದು ಸಂತಸ ಹಂಚಿಕೊಂಡರು. ಉಳಿದಂತೆ, ಸಾಧು ಕೋಕಿಲ, ಅಚ್ಯುತ್‌ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ತಾರಾ ಬಳಗದಲ್ಲಿದ್ದಾರೆ.

Share This Article

ಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಬಿಸಾಡ್ತೀರಾ? ಹಣ್ಣಿನ ಸಿಪ್ಪೆ ತಿಂದ್ರೆ ಪುರುಷರಿಗೆ ಆ ಸಾಮರ್ಥ್ಯ ಹೆಚ್ಚಾಗುವುದು! watermelon

watermelon: ಬೇಸಿಗೆ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು  ಕಲ್ಲಂಗಡಿ ಹಣ್ಣು. ನಾವು ಕಲ್ಲಂಗಡಿ ಹಣ್ಣುಗಳನ್ನು…

ಕುತ್ತಿಗೆ-ತಲೆ ನೋವನ್ನು ನಿರ್ಲಕ್ಷಿಸುತ್ತಿದ್ದೀರಾ?; ಎಚ್ಚರದಿಂದಿರಿ.. ಇದು ಅಪಾಯದ ಮುನ್ಸೂಚನೆ | Health Tips

ಕುತ್ತಿಗೆ ಮತ್ತು ಭುಜದ ಸುತ್ತಲಿನ ಪ್ರದೇಶದಲ್ಲಿನ ನೋವನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ಏಕೆಂದರೆ ಇದು ಸರ್ವಿಕಲ್…

ಅಳದಿದ್ದರು ಕಣ್ಣೀರು ಬರುತ್ತಿದೆಯೇ; ತಜ್ಞರು ಸೂಚಿಸಿರುವ ಸಿಂಪಲ್ ಪರಿಹಾರ ಹೀಗಿದೆ.. Health Tips

ಸೌಂದರ್ಯವನ್ನು ಅಳೆಯಲು ಕಣ್ಣುಗಳು ಒಂದು ಪ್ರಮುಖ ಮಾನದಂಡವಾಗಿದೆ. ಇದು ಪ್ರಮುಖ ಇಂದ್ರಿಯಗಳಲ್ಲಿ ಒಂದಾಗಿದೆ. ಅದಿಲ್ಲದೆ ಜೀವನವನ್ನು…