20.5 C
Bangalore
Sunday, December 15, 2019

ಜಯದ ಸನಿಹ ಕರ್ನಾಟಕ

Latest News

ಆನೆ ದಾಳಿಗೆ ಬೆಳೆಗಾರ ಕಂಗಾಲು

ಚಿಕ್ಕಮಗಳೂರು: ಕಾಫಿ ಬೆಳೆಯುವ ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಾನವ ಹಾಗೂ ವನ್ಯಜೀವಿ ಸಂಘರ್ಷ ಮಿತಿಮೀರಿದೆ. ಇವುಗಳಿಂದ ಬೆಳೆಯನ್ನು ಉಳಿಸಿಕೊಳ್ಳುವುದೇ ಬೆಳೆಗಾರರಿಗೆ...

ಅಡುಗೆಗೆ ಗುಣಮಟ್ಟದ ಪದಾರ್ಥ ಬಳಸಿ

ಕೊಪ್ಪ: ಅಡುಗೆ ಮಾಡುವಾಗ ಸ್ವಚ್ಛತೆಗೆ ಗಮನ ಹರಿಸಬೇಕು. ಮಕ್ಕಳ ಆರೋಗ್ಯದ ಕುರಿತು ಕಾಳಜಿ ವಹಿಸಿ. ಹೆಚ್ಚು ಜವಾಬ್ದಾರಿಯಿಂದ ಅಡುಗೆ ಮಾಡಬೇಕು ಎಂದು ಅಕ್ಷರ...

ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಗೆ ರಾಮಾಯಣ, ಮಹಾಭಾರತ, ಭಾಗವತಗಳೇ ಮೂಲಾಧಾರ: ಶ್ರೀ ರಾಘವೇಶ್ವರ ಸ್ವಾಮೀಜಿ

ಬೆಂಗಳೂರು: ರಾಮಾಯಣ ಮಹಾಕಾವ್ಯ ಕಲ್ಪನೆಯಲ್ಲ, ಅದು ಇತಿಹಾಸ. ರಾಮಾಯಣ, ಮಹಾಭಾರತ ಹಾಗೂ ಭಾಗವತ ನಮ್ಮ ಭರತ ಸಂಸ್ಕೃತಿಯ ಮೂಲಾಧಾರ. ಈ ಮೂರನ್ನು ಮೂಲವಾಗಿಟ್ಟುಕೊಂಡು ವಿಷ್ಣುಗುಪ್ತ ವಿಶ್ವವಿದ್ಯಾಪೀಠ...

ರೇವಣ್ಣರಿಂದ ಕಲಿಯುವುದು ಮುಗಿದಿದೆ

ಹಾಸನ ಜಿಲ್ಲೆಯನ್ನಷ್ಟೇ ನೋಡಿಕೊಳ್ಳಲಿ ಶಾಸಕ ಕೆ.ಸಿ.ನಾರಾಯಣಗೌಡ ವಾಗ್ದಾಳಿ ಕೆ.ಆರ್.ಪೇಟೆ: ಮಾಜಿ ಸಚಿವ ಎಚ್.ಡಿ.ರೇವಣ್ಣ ನಮ್ಮ ಜಿಲ್ಲೆ, ತಾಲೂಕು ನೋಡುವ ಅವಶ್ಯಕತೆ ಇಲ್ಲ. ಹಾಸನ ಜಿಲ್ಲೆಯನ್ನಷ್ಟೇ...

ಜೆಡಿಎಸ್‌ಗೆ ನಾರಾಯಣಗೌಡ ಯಾವ ಲೆಕ್ಕ!

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿರುಗೇಟು ಪಾಂಡವಪುರ: ಮಾಜಿ ಪ್ರಧಾನಿ ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಮತ್ತವರ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಿ ಎಚ್ಚರಿಕೆ ನೀಡಿದವರೆಲ್ಲ ಮಣ್ಣಲ್ಲಿ ಮಣ್ಣಾಗಿ...

|ಅವಿನಾಶ್ ಜೈನಹಳ್ಳಿ

ಮೈಸೂರು‘: ಆರಂಭಿಕ ಎರಡೂ ಪಂದ್ಯಗಳಲ್ಲೂ ಇನಿಂಗ್ಸ್ ಮುನ್ನಡೆಗಷ್ಟೇ ತೃಪ್ತಿಪಟ್ಟುಕೊಂಡಿದ್ದ ಕರ್ನಾಟಕ ತಂಡ 85ನೇ ಆವೃತ್ತಿ ರಣಜಿ ಟ್ರೋಫಿಯ ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಗೆಲುವಿನ ಸನಿಹದಲ್ಲಿದೆ. ಆರಂಭಿಕ ಎರಡು ದಿನವೂ ಪ್ರವಾಸಿ ಮಹಾರಾಷ್ಟ್ರ ತಂಡದ ಎದುರು ಪಾರಮ್ಯ ಸಾಧಿಸಿದ್ದ ಕರ್ನಾಟಕ ಮೂರನೇ ದಿನ ಕೊಂಚ ಪ್ರತಿರೋಧ ಎದುರಿಸಿತು. ಮಹಾರಾಷ್ಟ್ರ ತಂಡದ ಬ್ಯಾಟ್ಸ್​ಮನ್​ಗಳ ತಾಳ್ಮೆಯುತ ಪ್ರತಿಹೋರಾಟದ ನಡುವೆಯೂ ಶ್ರೇಯಸ್ ಗೋಪಾಲ್ (64ಕ್ಕೆ 4) ಹಾಗೂ ವಿನಯ್ ಕುಮಾರ್ (41ಕ್ಕೆ 3) ಕಡಿವಾಣ ಹಾಕಿದರು. ಇದರಿಂದ 184 ರನ್ ಗೆಲುವಿನ ಗುರಿ ಬೆನ್ನಟ್ಟಿರುವ ಆತಿಥೇಯ ಕರ್ನಾಟಕ ತಂಡ ಶುಕ್ರವಾರದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 54 ರನ್ ಪೇರಿಸಿದ್ದು, ಜಯ ದಾಖಲಿಸಲು ಇನ್ನು 130 ರನ್​ಗಳ ಅವಶ್ಯಕತೆ ಇದೆ.

ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(ಗ್ಲೇಡ್ಸ್) ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 3 ವಿಕೆಟ್​ಗೆ 48 ರನ್​ಗಳಿಂದ 3ನೇ ದಿನದಾಟ ಮುಂದುವರೆಸಿದ ಮಹಾರಾಷ್ಟ್ರ ತಂಡ 256 ರನ್​ಗಳಿಗೆ ಸರ್ವಪತನ ಕಂಡಿತು. ರುತುರಾಜ್ ಗಾಯಕ್ವಾಡ್ (89ರನ್, 161 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ನೌಶಾದ್ ಶೇಖ್ (73ರನ್, 121 ಎಸೆತ, 5 ಬೌಂಡರಿ, 1 ಸಿಕ್ಸರ್) ಜೋಡಿ ಕೆಲಕಾಲ ಪ್ರತಿಹೋರಾಟ ನಡೆಸಿತು. ಮಹಾರಾಷ್ಟ್ರ ತಂಡ ಮೊದಲ ಇನಿಂಗ್ಸ್ 113 ರನ್​ಗಳಿಸಿದರೆ, ಕರ್ನಾಟಕ 186 ರನ್​ಗಳಿಸಿ 73 ರನ್ ಇನಿಂಗ್ಸ್ ಮುನ್ನಡೆ ಕಂಡಿತ್ತು. ಸಾಧಾರಣ ಗೆಲುವಿನ ಮೊತ್ತ ಬೆನ್ನಟ್ಟಿರುವ ಕರ್ನಾಟಕ ತಂಡ ಉತ್ತಮ ಆರಂಭ ಗಿಟ್ಟಿಸಲು ಯಶಸ್ವಿಯಾಯಿತು. ಆರಂಭಿಕರಾದ ದೇವದತ್ತ ಪಡಿಕಲ್ (33 ರನ್, 58 ಎಸೆತ, 4 ಬೌಂಡರಿ, 1 ಸಿಕ್ಸರ್)ಹಾಗೂ ಡಿ.ನಿಶ್ಚಲ್ (21 ರನ್, 62 ಎಸೆತ, 2 ಬೌಂಡರಿ) ಜೋಡಿ ಮೊದಲ ವಿಕೆಟ್​ಗೆ 54 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿತು. ಆರಂಭಿಕ ಹಂತದಲ್ಲಿ ಯಾವುದೇ ಅಪಾಯವಾಗದಂತೆ ನೋಡಿಕೊಂಡ ಯುವ ಜೋಡಿ ಜವಾಬ್ದಾರಿಯುತ ಬ್ಯಾಟಿಂಗ್​ನಿಂದ ಗಮನಸೆಳೆಯಿತು. ಪದಾರ್ಪಣೆ ಪಂದ್ಯವಾಡುತ್ತಿರುವ ದೇವದತ್, ಮೊದಲ ಇನಿಂಗ್ಸ್​ನಲ್ಲಿ 7 ರನ್​ಗಳಿಸಿ ನಿರಾಸೆ ಮೂಡಿಸಿದ್ದರು.

ರಾಜ್ಯದ ಪಾಲಿಗೆ ದುಬಾರಿಯಾದ ಅಬ್ಬಾಸ್!

ಮಹಾರಾಷ್ಟ್ರ ತಂಡವನ್ನು ಮೊದಲ ಇನಿಂಗ್ಸ್ ಮಾದರಿಯಂತೆಯೇ ಕಡಿಮೆ ಮೊತ್ತಕ್ಕೆ ಕಡಿವಾಣ ಹಾಕುವ ಅವಕಾಶವಿದ್ದರೂ ಕರ್ನಾಟಕದ ಕಳಪೆ ಫೀಲ್ಡಿಂಗ್​ನಿಂದಾಗಿ ಸಾಧ್ಯವಾಗಲಿಲ್ಲ. ಗಾಯಕ್ವಾಡ್, ನೌಶಾದ್ ಶೇಖ್​ಗೆ ತಲಾ ಒಂದು ಜೀವದಾನ ನೀಡಿದ ಫಲವಾಗಿ ಮಹಾರಾಷ್ಟ್ರ ತಂಡ 250ರ ಗಡಿ ದಾಟಿತು. ಗಾಯಕ್ವಾಡ್ 14 ರನ್​ಗಳಿಸಿದ್ದ ವೇಳೆ ವಿನಯ್ಕುಮಾರ್ ಓವರ್​ನಲ್ಲಿ ಸ್ಲಿಪ್​ನಲ್ಲಿದ್ದ ಅಬ್ಬಾಸ್ ಕ್ಯಾಚ್ ಕೈಚೆಲ್ಲಿದರೆ, ಇನ್ನು ಶೇಖ್ 49 ರನ್​ಗಳಿಸಿದ್ದ ವೇಳೆ ರೋನಿತ್ ಮೋರೆ ಓವರ್​ನಲ್ಲಿ ಸ್ಲಿಪ್​ನಲ್ಲೆ ಇದ್ದ ಅಬ್ಬಾಸ್ ಮತ್ತೊಂದು ಕ್ಯಾಚ್ ಬಿಟ್ಟರು. ಗಾಯದಿಂದಾಗಿ ಕೆವಿ ಸಿದ್ದಾರ್ಥ್ ಹಾಗೂ ಮಿಥುನ್ ಫೀಲ್ಡಿಂಗ್​ಗೆ ಇಳಿಯಲಿಲ್ಲ.

ಕಾಡಿದ ರುತುರಾಜ್-ನೌಶಾದ್

ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ, ರುತುರಾಜ್ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ರಾಹುಲ್ ತ್ರಿಪಾಠಿ ನಿರ್ಗಮನದ ಬಳಿಕ ಜತೆಯಾದ ನೌಶಾದ್ ಶೇಖ್ ಜೋಡಿ ಆತಿಥೇಯ ಬೌಲರ್​ಗಳ ಬೆವರಿಳಿಸಿತು. ಈ ಜೋಡಿ 7ನೇ ವಿಕೆಟ್​ಗೆ 106 ಪೇರಿಸಿ ಮಹಾರಾಷ್ಟ್ರ ತಂಡಕ್ಕೆ ಚೇತರಿಕೆ ನೀಡಿತು. ನಾಯಕ ವಿನಯ್ ಕುಮಾರ್, ಗಾಯಕ್ವಾಡ್​ರನ್ನು ಬೌಲ್ಡ್ ಮಾಡುವ ಮೂಲಕ ಈ ಜೋಡಿಯನ್ನು ಬೇರ್ಪಡಿಸಿದರು. ನಂತರ ಪವನ್ ದೇಶಪಾಂಡೆ, ಸಂಕ್ಲೇಚ ವಿಕೆಟ್ ಪಡೆದರೆ, ನಾಯಕ ವಿನಯ್ಕುಮಾರ್ ಶೇಖ್ ಮತ್ತು ಫಲ್ಲಾರನ್ನು (6) ಔಟ್ ಮಾಡಿದರು.

ಮಹಾರಾಷ್ಟ್ರ ತಂಡಕ್ಕೆ ಶ್ರೇಯಸ್ ಆಘಾತ

ಆರಂಭಿಕ ವೈಫಲ್ಯ ಕಂಡಿದ್ದ ಮಹಾರಾಷ್ಟ್ರಕ್ಕೆ ರುತುರಾಜ್ ಆಸರೆಯಾದರು. 9 ರನ್​ಗಳಿಂದ ದಿನದಾಟ ಮುಂದುವರಿಸಿದ ರುತುರಾಜ್ ಹಾಗೂ ಸತ್ಯಜಿತ್ ಬಚಾವ್ (28) ಜೋಡಿ ಆರಂಭದಲ್ಲಿ ಕರ್ನಾಟಕದ ಬೌಲಿಂಗ್​ಅನ್ನು ಎಚ್ಚರಿಕೆಯಿಂದ ಎದುರಿಸಿತು. ದಿನದಾಟದಲ್ಲಿ 47 ರನ್ ಸೇರಿದಂತೆ 4ನೇ ವಿಕೆಟ್​ಗೆ 60 ರನ್ ಕೂಡಿಸಿದ ಜೋಡಿಯನ್ನು ಶ್ರೇಯಸ್ ಬೇರ್ಪಡಿಸಿದರು. ಬಳಿಕ ಮಹಾರಾಷ್ಟ್ರದ ಪತನ ಕೂಡ ಆರಂಭಗೊಂಡಿತು. ಮರು ಓವರ್​ನಲ್ಲೇ ವಿಕೆಟ್ಕೀಪರ್ ರೋಹಿತ್ ಮೋಟ್ವಾನಿಯನ್ನು (2), ಪವನ್ ದೇಶಪಾಂಡೆ ಎಲ್​ಬಿ ಬಲೆಗೆ ಬೀಳಿಸಿದರು. ಇದಾದ ಕೆಲಹೊತ್ತಿನಲ್ಲೇ ನಾಯಕ ರಾಹುಲ್ ತ್ರಿಪಾಠಿಗೆ (8) ಪೆವಿಲಿಯನ್ ದಾರಿ ತೋರಿಸಿದ ಶ್ರೇಯಸ್ ಗೋಪಾಲ್ ಪ್ರವಾಸಿ ತಂಡದ ಮೇಲೆ ಒತ್ತಡ ಹೇರಿದರು.

ಪಂಜಾಬ್ ತಂಡಕ್ಕೆ 10 ವಿಕೆಟ್ ಜಯ

ದೆಹಲಿಯಲ್ಲಿ ಬಿ ಗುಂಪಿನ ಪಂದ್ಯದಲ್ಲಿ ಯುವರಾಜ್ ಸಿಂಗ್ ಒಳಗೊಂಡ ಪಂಜಾಬ್ ತಂಡ 10 ವಿಕೆಟ್​ಗಳಿಂದ ದೆಹಲಿ ತಂಡವನ್ನು ಮಣಿಸಿತು. ದೆಹಲಿ ತಂಡದ ಪರ ಗೌತಮ್ ಗಂಭೀರ್ (60) ದ್ವಿತೀಯ ಇನಿಂಗ್ಸ್​ನಲ್ಲಿ ಅರ್ಧಶತಕ ಸಿಡಿಸಿ ಗಮನಸೆಳೆದರು. ಸಿ ಗುಂಪಿನಲ್ಲಿ ಅಸ್ಸಾಂ ತಂಡ ಇನಿಂಗ್ಸ್ ಹಾಗೂ 35 ರನ್​ಗಳಿಂದ ಹರಿಯಾಣ ತಂಡವನ್ನು ಸೋಲಿಸಿದರೆ, ಮೇಘಾಲಯ, ಉತ್ತರಾಖಂಡ ಹಾಗೂ ಬಿಹಾರ ತಂಡಗಳು ಮೂರೇ ದಿನದಲ್ಲಿ ಗೆಲುವು ಕಂಡಿವೆ.

Stay connected

278,756FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...