More

    ಹುಡುಗಿ ಆದ ರಾಜ್​ಕುಮಾರ್ ಲೆಹಂಗಾ ಚೋಲಿ ಧರಿಸಿದ ಕಲಾವಿದ

    ಆಫ್​ಬೀಟ್ ಸಿನಿಮಾಗಳ ಜತೆಗೆ ಕಮರ್ಷಿಯಲ್ ದೃಷ್ಟಿಯಿಂದಲೂ ಹಿಟ್ ಸಿನಿಮಾ ಕೊಡುವಲ್ಲಿ ಬಾಲಿವುಡ್ ನಟ ರಾಜ್​ಕುಮಾರ್ ರಾವ್ ಈಗಾಗಲೇ ಗಮನ ಸೆಳೆದಿದ್ದಾರೆ.

    ಬಹಳಷ್ಟು ಸವಾಲಿನ ಪಾತ್ರಗಳಲ್ಲಿ ಲೀಲಾಜಾಲವಾಗಿ ಅಭಿನಯಿಸಿ ಸಿನಿಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ತಮ್ಮನ್ನು ಪ್ರಯೋಗಕ್ಕೆ ಒಳಪಡಿಸಿಕೊಳ್ಳುತ್ತಲೇ ಸುದ್ದಿಯಾಗುತ್ತ ಬಂದಿರುವ ಅವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಈಗ ಹೀಗೆ ಅವರನ್ನು ಮತ್ತೆ ಮುನ್ನೆಲೆಗೆ ತಂದಿರುವುದು ‘ಲುಡೋ’ ಚಿತ್ರದ ಫಸ್ಟ್​ಲುಕ್.

    ಅನುರಾಗ್ ಬಸು ನಿರ್ದೇಶನದ ಈ ಚಿತ್ರದಲ್ಲಿ ಅಭಿನಯಿಸಿರುವ ರಾಜ್​ಕುಮಾರ್ ರಾವ್ ‘ಲುಡೋ’ ಚಿತ್ರದ ಫಸ್ಟ್​ಲುಕ್ ಮೂಲಕ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಹಸಿರು ಲೆಹಂಗಾ-ಚೋಲಿ ಧರಿಸಿ ಸುಂದರ ಹುಡುಗಿಯಂತೆ ಕಾಣಿಸಿಕೊಂಡಿರುವ ರಾಜ್​ಕುಮಾರ್, ತಮ್ಮ ಈ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

    ಅಂದಹಾಗೆ, ಈ ಚಿತ್ರದಲ್ಲಿ ಕಲಾವಿದರ ದೊಡ್ಡ ದಂಡೇ ಇದೆ. ಅಭಿಷೇಕ್ ಬಚ್ಚನ್, ಸನ್ಯಾ ಮಲ್ಹೋತ್ರಾ, ಫಾತಿಮಾ ಸನಾ ಶೇಖ್, ಆದಿತ್ಯಾ ರಾಯ್ ಕಪೂರ್, ಪಂಕಜ್ ತ್ರಿಪಾಠಿ, ರೋಹಿತ್ ಸರಫ್, ಆಶಾ ಮುಂತಾದವರು ಪ್ರಮುಖಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಏಪ್ರಿಲ್ 24ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts