ವಿಜಯವಾಣಿ ವರದಿಗೆ ಎಚ್ಚೆತ್ತ ಅಧಿಕಾರಿಗಳು
ಚನ್ನರಾಯಪಟ್ಟಣ : ಪಟ್ಟಣದ ಬಾಗೂರು ರಸ್ತೆಯಲ್ಲಿ ತಡೆಗೋಡೆ ಇಲ್ಲದೆ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ರಾಜಕಾಲುವೆಗೆ ಚಪ್ಪಡಿ ಕಲ್ಲುಗಳನ್ನಿಟ್ಟು ಮುಚ್ಚಲಾಗಿದೆ. ಬಲಿಗಾಗಿ ಬಾಯ್ತೆರೆದಿವೆ ರಾಜ ಕಾಲುವೆಗಳು ಶೀರ್ಷಿಕೆಯಡಿ ಫೆ.7ರಂದು ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ವರದಿಗೆ ಎಚ್ಚೆತ್ತುಕೊಂಡ ಪುರಸಭೆಯವರು ಶನಿವಾರ ತಾತ್ಕಾಲಿಕವಾಗಿ ರಾಜಕಾಲುವೆಗೆ ಚಪ್ಪಡಿ ಕಲ್ಲುಗಳನ್ನು ಮುಚ್ಚಿ ಅಪಘಾತಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ. ಪುರಸಭಾ ಅಧಿಕಾರಿಗಳು ತಾತ್ಕಾಲಿಕವಾಗಿ ರಾಜಕಾಲುವೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವುದರಿಂದ ಸ್ಥಳೀಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಪತ್ರಿಕೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.