ರಾಜೀವ್‌ ಗಾಂಧಿ ದೇಶದ ಅತಿದೊಡ್ಡ ಸಮುದಾಯ ಹತ್ಯೆಗಾರರೂ ಆಗಿದ್ದಾರೆ: ಶಿರೋಮಣಿ ಅಕಾಲಿದಳ

ನವದೆಹಲಿ: ಭ್ರಷ್ಟಾಚಾರಿ ನಂ.1 ಆಗಿಯೇ ರಾಜೀವ್‌ ಗಾಂಧಿ ಅಂತ್ಯ ಕಂಡರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬೆನ್ನಲ್ಲೇ ಶಿರೋಮಣಿ ಅಕಾಲಿದಳದ ರಾಷ್ಟ್ರೀಯ ವಕ್ತಾರ ಮಂಜಿಂದರ್‌ ಸಿಂಗ್ ಸಿರ್ಸಾ ಮತ್ತೊಂದು ಸುತ್ತಿನ ಪ್ರಹಾರ ಆರಂಭಿಸಿದ್ದು, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಭಾರತದ ಅತಿದೊಡ್ಡ ಸಮುದಾಯ ಹತ್ಯೆಗಾರರಾಗಿದ್ದರು ಎಂದು ಹೇಳಿದ್ದಾರೆ.

ವಿಶ್ವದಲ್ಲಿಯೇ ಪ್ರತ್ಯೇಕ ಸಮುದಾಯವೊಂದರ ಮೇಲೆ ವ್ಯವಸ್ಥಿತ ಹತ್ಯೆ ಸಂಚನ್ನು ರೂಪಿಸಿದ ಪ್ರಧಾನಿಗಳಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಮಾತ್ರ. ರಾಜೀವ್‌ ಗಾಂಧಿ ಅವರು ನಂಬರ್‌ ಒನ್‌ ಭ್ರಷ್ಟಾಚಾರಿಯಾಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು ಸರಿಯಾಗಿದೆ. ಆದರೆ, ಭಾರತದ ಅತಿ ದೊಡ್ಡ ಸಮೂಹ ಹತ್ಯೆಗಾರರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ರಾಜೀವ್‌ ಗಾಂಧಿಯವರು ಕೇವಲ ಸಿಖ್ ನರಮೇಧಕ್ಕೆ ಪ್ರೋತ್ಸಾಹಿಸಿದ್ದೇ ಅಲ್ಲದೆ ಘಟನೆಯಲ್ಲಿ ಪಾಲ್ಗೊಂಡವರ ರಕ್ಷಣೆ ಮತ್ತು ಅವರಿಗೆ ಬಹುಮಾನವನ್ನು ಕೂಡ ನೀಡಿದ್ದರು. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರು ಏಕೆ ಪಕ್ಷವು ಅಪರಾಧಿಯಾಗಿತ್ತು ಎನ್ನುವುದನ್ನು ಒಪ್ಪುವುದಿಲ್ಲ ಮತ್ತು 1984ರ ಸಿಖ್‌ ದಂಗೆಯಲ್ಲಿ ಸಂತ್ರಸ್ತರ ಕುಟುಂಬಗಳೆಡೆಗೆ ಸಿಂಪಥಿಯನ್ನು ಹೊಂದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶದ ರ‍್ಯಾಲಿಯೊಂದರಲ್ಲಿ ಶನಿವಾರ ಮಾತನಾಡಿದ್ದ ಪ್ರಧಾನಿ ಮೋದಿ, ರಾಹುಲ್‌ ಗಾಂಧಿಯವರನ್ನು ಟೀಕಿಸುವ ಭರದಲ್ಲಿ ನಿಮ್ಮ ತಂದೆ ರಾಜೀವ್‌ ಗಾಂಧಿಯವರು ತಮ್ಮವರಿಂದ ಶುದ್ಧಹಸ್ತರು ಎಂದು ಹೆಸರಾಗಿದ್ದರು. ಆದರೆ, ದೇಶದ ನಂ. 1 ಭ್ರಷ್ಟಾಚಾರಿಯಾಗಿಯೇ ಅಂತ್ಯಕಂಡರು ಎಂದು ಹೇಳಿದ್ದರು. (ಏಜೆನ್ಸೀಸ್)

One Reply to “ರಾಜೀವ್‌ ಗಾಂಧಿ ದೇಶದ ಅತಿದೊಡ್ಡ ಸಮುದಾಯ ಹತ್ಯೆಗಾರರೂ ಆಗಿದ್ದಾರೆ: ಶಿರೋಮಣಿ ಅಕಾಲಿದಳ”

  1. Genocide committed by Congress party whether after the assassination of M K Gandhi or Indira Gandhi is unparalleled in the history of India.

Comments are closed.