More

    ರಾಜೀವಗಾಂಧಿ ಆರೋಗ್ಯ ವಿವಿ 26ನೇ ಘಟಿಕೋತ್ಸವ: ಚಿನ್ನದ ಪದಕ ಬಾಚಿದ ವೈದ್ಯೆಯರು

    ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್)26ನೇ ಘಟಿಕೋತ್ಸವವು ಫೆ
    .27ರಂದು ನಡೆಯುತ್ತಿದ್ದು, 88 ವಿದ್ಯಾರ್ಥಿಗಳಿಗೆ 100 ಚಿನ್ನದ ಪದಕ ಪದವಿ ಪ್ರದಾನ ಮಾಡಲಾಗುತ್ತಿದೆ. ಈ ಪೈಕಿ 70 ಮಹಿಳೆಯರು ಮತ್ತು ಕೇವಲ 18 ಪುರುಷರು ಮಾತ್ರ ಚಿನ್ನದ ಪದಕ ಪಡೆದಿದ್ದಾರೆ. ಅಲ್ಲದೆ, ಅತಿ ಹೆಚ್ಚು ಚಿನ್ನ ಪಡೆದಿರುವ ಸಾಲಿನಲ್ಲಿಯೂ ವಿದ್ಯಾರ್ಥಿನಿಯೇ ಮೇಲುಗೈ ಸಾಧಿಸಿದ್ದಾರೆ.

    ಹುಬ್ಬಳ್ಳಿ ಕೆಎಲ್‌ಇ ಸೊಸೈಟಿ ಇನ್‌ಸ್ಟಿಟ್ಯೂಟ್ ಆ್ ನರ್ಸಿಂಗ್ ಸೈನ್ಸಸ್ ಕಾಲೇಜಿನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ೆಲೆಂಟಿನಾ ಜೇಮ್ಸ್5 ಚಿನ್ನದ ಪದಕ ಪಡೆದಿದ್ದಾರೆ. ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಡಾ. ಪ್ರಜ್ಞಾ ಎನ್. (ಆಯುಷ್) 4 ಚಿನ್ನ ಮತ್ತು 2 ನಗದು ಬಹುಮಾನ, ಧಾರವಾಡದ ಸೋನಿಯಾ ಎಜುಕೇಷನಲ್ ಟ್ರಸ್ಟ್ ಕಾಲೇಜ್ ಆ್ ಾರ್ಮಸಿಯ ಅನರ್ಘ್ಯ ವಿ. ಕುಕರ್ಣಿ (ಬಿ. ಾರ್ಮ್ ಕೋರ್ಸ್) 3 ಚಿನ್ನದ ಪದಕಗಳು, ಮಂಗಳೂರು ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಮಧುರಾ ಕೆ.ಐ. (ಎಂಬಿಬಿಎಸ್) 2 ಚಿನ್ನ ಮತ್ತು ಒಂದು ನಗದು ಬಹುಮಾನ, ಬೆಂಗಳೂರಿನ ಈಸ್ಟ್ ವೆಸ್ಟ್ ಕಾಲೇಜ್ ಆ್ ಾರ್ಮಸಿಯ ಡಾ. ಸ್ನೇಹಾ ಸುಹಾನ್ ಸನ್ನಿ (ಾರ್ಮ ಡಿ.) 2 ಚಿನ್ನದ ಪದಕ, ಮಂಗಳೂರು ಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ (ಪ್ರಿಯಾ ಕುಮಾರಿ) 2 ಚಿನ್ನದ ಪದಕ ಪಡೆದಿದ್ದಾರೆ.

    52,650 ವಿದ್ಯಾರ್ಥಿಗಳಿಗೆ ಪದವಿ:

    100 ಚಿನ್ನದ ಪದಕ, 17 ಪಿಎಚ್.ಡಿ., 156 ಸೂಪರ್ ಸ್ಪೆಷಾಲಿಟಿ, 7,185 ಸ್ನಾತಕೋತ್ತರ ಪದವಿ, 7 ಸ್ನಾತಕೋತ್ತರ ಡಿಪ್ಲೊಮೊ, 122 ೆಲೋಶಿಪ್, 8 ಸರ್ಟಿಪಿಕೇಟ್ ಕೋರ್ಸ್, 44,525 ಸ್ನಾತಕ ಸೇರಿ 52,650 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ.

    ಘಟಿಕೋತ್ಸವ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ವಿವಿ ಕುಲಪತಿ ಡಾ. ಎಂ.ಕೆ. ರಮೇಶ್, ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ೆ.27ರಂದು ಬೆಳಗ್ಗೆ 11.45ಕ್ಕೆ ಸಮಾರಂಭ ನಡೆಯಲಿದೆ. ವಿವಿ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷ ಡಾ. ಬಿ.ಎನ್. ಗಂಗಾಧರ್ ಮುಖ್ಯ ಅತಿಥಿಗಳಾಗಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಭಾಗವಹಿಸಲಿದ್ದಾರೆ ಎಂದರು.

    5 ಗ್ರಾಂ. ಚಿನ್ನದ ಪದಕ:

    ಎಲ್ಲ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದಿರುವ ಎಲ್ಲ ವಿದ್ಯಾರ್ಥಿಗಳಿಗೂ ವಿಶ್ವವಿದ್ಯಾಲಯದ ವತಿಯಿಂದ 22 ಕ್ಯಾರೆಟ್ ಬಂಗಾರವುಳ್ಳ 5 ಗ್ರಾಂ. ತೂಕದ ಚಿನ್ನದ ಪದಕ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ಮೂವರಿಗೆ ಡಾಕ್ಟರ್ ಆ್ ಸೈನ್ಸ್ ಪ್ರದಾನ:

    ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೆಪ್ರೋ ಯುರಾಲಜಿ ಆರಂಭಿಸಿದ ನಿವೃತ್ತ ವೈದ್ಯ ಡಾ. ಜಿ.ಕೆ. ವೆಂಕಟೇಶ್, ಕಲಬುರಗಿ ವಿಶ್ವವಿದ್ಯಾಲಯದ ಚರ್ಮರೋಗ ತಜ್ಞ ಡಾ. ಪಿ.ಎಂ. ಬಿರಾದರ್ ಮತ್ತು ಮಧ್ಯಪ್ರದೇಶದ ಪಿಜಿಯೋಥೆರಪಿಸ್ಟ್ ಡಾ. ಪಿಂಕಿ ಭಾಟಿಯಾ ಟೋಪಿವಾಲಾ ಅವರಿಗೆ ಗೌರವ ಡಾಕ್ಟರೇಟ್ ಪದವಿ ‘ಡಾಕ್ಟರ್ ಆ್ ಸೈನ್ಸ್’ ಪ್ರದಾನ ಮಾಡಲಾಗುತ್ತಿದೆ ಎಂದು ಡಾ. ರಮೇಶ್ ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಸಿ.ಆರ್. ಶಿವಪ್ರಸಾದ್ ಮತ್ತು ಮೌಲ್ಯಮಾಪನ ಕುಲಸಚಿವ ರಿಯಾಜ್ ಬಾಷಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts